ಶೃತಿ ಹರಿಹರನ್‌ಗೆ ಬಿಸಿ ಮುಟ್ಟಿಸಿತೇ ಮಹಿಳಾ ಆಯೋಗ?

Picture of Cinibuzz

Cinibuzz

Bureau Report

ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿರೋ ಶ್ರುತಿ ಹರಿಹರನ್ ಹರಾಕಿರಿಗಳು ಯಥಾ ಪ್ರಕಾರ ಮುಂದುವರೆದಿವೆ. ಆರಂಭದಿಂದಲೂ ಈಕೆಯ ನಡಾವಳಿಗಳ ಬಗ್ಗೆ ಒಂದು ಅನುಮಾನ ಮೂಡಿಕೊಂಡಿತ್ತಲ್ಲಾ? ಅದಕ್ಕೆ ತಕ್ಕುದಾಗಿಯೇ ಶ್ರುತಿ ವರ್ತನೆಗಳೂ ಜಾಹೀರಾಗುತ್ತಿವೆ!

ಇದೀಗ ಖುದ್ದು ಮಹಿಳಾ ಆಯೋಗವೇ ಶ್ರುತಿಯ ಉಢಾಳ ವರ್ತನೆಗಳನ್ನು ಸಹಿಸಿ ಸಾಕಾಗಿ ಸರಿಯಾಗಿಯೇ ಬಿಸಿಮುಟ್ಟಿಸಿರೋ ಸುದ್ದಿ ಹೊರ ಬಿದ್ದಿದೆ!

ಶ್ರುತಿ ಅರ್ಜುನ್ ವಿರುದ್ಧ ಮೀಟೂ ಆರೋಪ ಮಾಡಿ, ಅದು ನಾನಾ ರೂಪ ಪಡೆಯುತ್ತಲೇ ಮಹಿಳಾ ಆಯೋಗ ಈ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಈ ಬಗ್ಗೆ ಹೇಳಿಕೆ ನೀಡುವಂತೆ ಶ್ರುತಿ ಹರಿಹರನ್‌ಗೆ ಆದೇಸಿಸಿತ್ತು. ಆದರೆ ಇದಕ್ಕೆ ಶ್ರುತಿ ಮಾತ್ರ ಯಾವ ಪ್ರತಿಕ್ರಿಯೆಯನ್ನೂ ನೀಡದೆ ಅಸಡ್ಡೆ ತೋರಿಸಲಾರಂಭಿಸಿದ್ದಳು. ಮತ್ತೂ ಮುಂದುವರೆದು ಮಹಿಳಾ ಆಯೋಗದ ಯಾವ ಫೋನ್ ಕರೆ, ಮೆಸೇಜುಗಳಿಗೂ ಸ್ಪಂದಿಸದೇ ಮುಂದುವರೆಯಲಾರಂಭಿಸಿದ್ದಳು.

ಇದೆಲ್ಲವನ್ನೂ ಕಂಡು ಕೋಪಗೊಂಡ ಮಹಿಳಾ ಆಯೋಗ ಶ್ರುತಿಗೆ ಖಾರವಾದ ಸಂದೇಶವೊಂದನ್ನು ಕಳಿಸೋ ಮೂಲಕ ಸರಿಯಾಗಿಯೇ ಚುರುಕು ಮುಟ್ಟಿಸಿದೆ. ಇದನ್ನು ಕಂಡು ಕಂಗಾಲಾದ ಶ್ರುತಿ ತಕ್ಷಣವೇ ಸ್ಪಂದಿಸಿದ್ದಾಳೆ. ಬಚಾವಾಗಲು ಕ್ಷಮೆ ಕೇಳಿ ಸೋಮವಾರ ಹಾಜರಾಗಿ ಹೇಳಿಕೆ ಕೊಡೋದಾಗಿಯೂ ಹೇಳಿದ್ದಾಳಂತೆ. ಈಕೆ ಮಾಡಿದ ಆರೋಪ ನಿಜವೇ ಆಗಿದ್ದರೆ ಇಂಥಾ ಕಳ್ಳಾಟವಾಡೋ ಅವಶ್ಯಕತೆ ಏನಿತ್ತೆಂಬ ಪ್ರಶ್ನೆ ಜನಸಾಮಾನ್ಯರನ್ನೂ ಕಾಡಲಾರಂಭಿಸಿದೆ!

#

ಇನ್ನಷ್ಟು ಓದಿರಿ

Scroll to Top