ಕೆಜಿಎಫ್ ಬಿಡುಗಡೆಗೂ ಮುಂಚೆ ಬಾಲಿವುಡ್‌ಗೆ ಹಾರ್‍ತಾಳಾ ಶ್ರೀನಿಧಿ?

Picture of Cinibuzz

Cinibuzz

Bureau Report

ಅದೃಷ್ಟ ಅಂದ್ರೆ ಇದು… ಹೀಗಂತ ಗಾಂಧಿನಗರದ ಮಂದಿ ಅಚ್ಚರಿಯಿಂದ ಮಾತಾಡುತ್ತಿರೋದು ಕೆಜಿಎಫ್ ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ವಿಚಾರವಾಗಿ. ಇದು ಈಕೆಯ ಮೊದಲ ಚಿತ್ರ. ಆದರೆ ಬೇರೆ ನಟಿಯರಿಗೆ ಮೂರ್ನಾಲಕ್ಕು ಚಿತ್ರಗಳಾದರೂ ಸಿಗದ ಪಬ್ಲಿಸಿಟಿ ಈಕೆಗೀಗಲೇ ಸಿಕ್ಕಿದೆ. ಇದರ ಜೊತೆ ಜೊತೆಗೇ ಶ್ರೀನಿಧಿಯ ಮುಂದೆ ಬೇರೆ ಬೇರೆ ಭಾಷೆಗಳಿಂದಲೂ ಅವಕಾಶಗಳು ಸರದಿಯಲ್ಲಿ ನಿಂತಿವೆ!

ಮೊದಲ ಚಿತ್ರ ಬಿಡುಗಡೆಗೂ ಮುನ್ನವೇ ಇಂಥಾದ್ದೊಂದು ಪವಾಡವನ್ನ ಎದುರುಗೊಂಡಿರೋ ಶ್ರೀನಿಧಿ ಪಾಲಿಗೆ ಬಾಲಿವುಡ್ ಪ್ರವೇಶಕ್ಕೆ ತಾನೇ ತಾನಾಗಿ ಬಾಗಿಲು ತೆರೆದುಕೊಂಡಿದೆ. ಕೆಜಿಎಫ್ ಟ್ರೈಲರ್ ಹಿಂದಿಯಲ್ಲಿಯೂ ಭಾರೀ ಸದ್ದು ಮಾಡುತ್ತಲೇ ಅಲ್ಲಿನವರ ಚಿತ್ರ ಶ್ರೀನಿಧಿಯತ್ತ ಹೊರಳಿಕೊಂಡಿದೆ. ಒಂದು ಮೂಲದ ಪ್ರಕಾರ ಶ್ರೀನಿಧಿಗೆ ಅತ್ತಲಿಂದ ಒಂದೆರಡು ಆಫರ್‌ಗಳೂ ಬಂದಿವೆಯಂತೆ.

ಇದು ಕೇವಲ ಬಾಲಿವುಡ್‌ಗೆ ಮಾತ್ರವೇ ಸೀಮಿತವಾಗಿಲ್ಲ. ತೆಲುಗು ಮತ್ತು ತಮಿಳಿನಿಂದಲೂ ಹಲವರು ಶ್ರೀನಿಧಿಯನ್ನು ಸಂಪರ್ಕಿಸಲು ಯತ್ನಿಸಿದ್ದಾರಂತೆ. ಆದರೆ ಶ್ರೀನಿಧಿಯ ಆಸಕ್ತಿ ಇರೋದು ಮಾತ್ರ ಬಾಲಿವುಡ್ ಮೇಲೆಯೇ. ಮಾಡೆಲಿಂಗ್ ಲೋಕದಲ್ಲಿರುವಾಗಲೇ ಬಾಲಿವುಡ್‌ನತ್ತ ಆಕರ್ಷಿತಳಾಗಿದ್ದ ಶ್ರೀನಿಧಿಗೆ ಆ ಅವಕಾಶ ತಾನೇ ತಾನಾಗಿ ಒಲಿದು ಬಂದಂತಿದೆ!

#

ಇನ್ನಷ್ಟು ಓದಿರಿ

Scroll to Top