ಆಕ್ಷನ್ ಪ್ರಿನ್ಸ್ ಸ್ಪೆಷಲ್ ಲವ್ ಸ್ಟೋರಿ! ಅದು ಹದಿನಾಲಕ್ಕು ವರ್ಷ ಎದೆಯಲ್ಲೇ ಹದಗೊಂಡ ಒಲವು!

Picture of Cinibuzz

Cinibuzz

Bureau Report


ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮದುವೆ ವಿಚಾರದಲ್ಲಿ ಹರಿದಾಡುತ್ತಿದ್ದ ಎಲ್ಲ ರೂಮರ್ ಗಳಿಗೂ ತೆರೆ ಬಿದ್ದಿದೆ. ಇತ್ತೀಚೆಗೆ ಮೂವತ್ತನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಸಂದರ್ಭದಲ್ಲಿಯೇ ಧೃವ ಸರ್ಜಾ ಮದುವೆಯ ಮುನ್ಸೂಚನೆ ಕೊಟ್ಟಿದ್ದರು. ಇದರ ಹಿಂದೆಯೇ ಹಲವಾರು ನಟೀಮಣಿಯರ ಹೆಸರುಗಳೂ ಮೆಲ್ಲಗೆ ಹರಿದಾಡಲಾರಂಭಿಸಿದ್ದರು. ಇದೆಲ್ಲವನ್ನು ತಣ್ಣಗೆ ನೋಡುತ್ತಾ ಬಂದಿದ್ದ ಅವರೀಗ ತಾವು ಮದುವೆಯಾಗೋ ಹುಡುಗಿಯ ಬಗ್ಗೆ ಹೇಳಿಕೊಂಡಿದ್ದಾರೆ! ಧ್ರುವ ಸರ್ಜಾ ಮದುವೆಯಾಗುತ್ತಿರೋ ಹುಡುಗಿ ಪ್ರೇರಣಾ ಶಂಕರ್. ಈಕೆಯೊಂದಿಗೆ ಎಂಗೇಜ್‌ಮೆಂಟ್ ಗೂ ಮುತೂರ್ತ ನಿಗಧಿಯಾಗಿದೆ. ಇದರೊಂದಿಗೇ ಧ್ರುವ ಸರ್ಜಾರ ಸ್ಪೆಷಲ್ ಲವ್ ಸ್ಟೋರಿಯೂ ಜಾಹೀರಾಗಿದೆ.

ಅಷ್ಟಕ್ಕೂ ಈ ಪ್ರೀತಿ ಇಂದು ನಿನ್ನೆಯದ್ದೇನಲ್ಲ. ಎಳವೆಯಿಂದಲೇ ಕೈ ಕೈ ಹಿಒಡಿದು ಓಡಾಡಿದ್ದವರು ಪ್ರೇರಣಾ ಮತ್ತು ಧ್ರುವಾ. ಆ ಸ್ನೇಹ ಪ್ರೀತಿಯಾಗಿ ಬರೋಬ್ಬರಿ ಹದಿನಾಲಕ್ಕು ವರ್ಷಗಳೇ ಕಳೆದಿವೆ. ಧ್ರುವ ನಟನಾಗುವ ಮುಂಚೆಯೇ ಅರಳಿಕೊಂಡಿದ್ದ ಪ್ರೀತಿ ಅವರು ಸ್ಟಾರ್ ನಟರಾಗಿ ಹೊರ ಹೊಮ್ಮಿರೋ ಈ ಹೊತ್ತಿನಲ್ಲಿ ಮದುವೆ ನಿರ್ಧಾರದ ಮೂಲಕ ನಿರ್ಣಾಯಕ ಘಟ್ಟ ತಲುಪಿಕೊಂಡಿದೆ.

ಪ್ರೇರಣಾ ಬೆಂಗಳೂರಿನ ಬಸವನಗುಡಿಯ ಹುಡುಗಿ. ಇಲ್ಲಿನ ಪ್ರತಿಷ್ಠಿತ ಖಾಸಗೀ ಇಂಜಿನೀರಿಂಗ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು. ಈಕೆ ಧ್ರುವ ಸರ್ಜಾ ಕುಟುಂಬಕ್ಕೂ ಅಪರಿಚಿತರೇನಲ್ಲ. ಧ್ರುವ ಮತ್ತು ಪ್ರೇರಣಾ ಕುಟುಂಬದ ಮಧ್ಯೆ ಹೆಚ್ಚೂ ಕಡಿಮೆ ಇಪ್ಪತೈದು ವರ್ಷಕ್ಕೂ ಹೆಚ್ಚಿನ ಸ್ನೇಹವಿದೆ. ಇವರಿಬ್ಬರ ಪ್ರೀತಿಗೆ ಎರಡೂ ಮನೆಯವರ ಒಪ್ಪಿಗೆ ಸಿಕ್ಕಿ ಯಾವ ಕಾಲವೋ ಆಗಿ ಹೋಗಿದೆ. ಇದೀಗ ಧ್ರುವ ಅಮ್ಮ ಕೂಡಾ ಅನಾರೋಗ್ಯದಿಂದ ಚೇತರಿಸಿಕೊಂಡಿದ್ದಾರೆ. ಇದೇ ಖುಷಿಯಲ್ಲಿ ಮದುವೆಯಾಗೋ ನಿರ್ಧಾರಕ್ಕೆ ಧ್ರುವ ಬಂದಂತಿದೆ. ಇದೇ ಡಿಸೆಂಬರ್ ಹತ್ತನೇ ತಾರೀಕಿನಂದು ಬನಶಂಕರಿ ಎರಡನೇ ಹಂತದ ಬಿಡಿಎ ಕಾಂಪ್ಲೆಕ್ಸ್ ಆಂಜನೇಯ ದೇವಸ್ಥಾನದಲ್ಲಿ ಎಂಗೇಜ್‌ಮೆಂಟ್ ಕೂಡಾ ನಡೆಯಲಿದೆ.

 

ಹೇಳಿಕೇಳಿ ಧ್ರುವ ಸರ್ಜಾ ಸ್ಟಾರ್ ನಟರಾಗಿಒ ಹೊರ ಹೊಮ್ಮಿದ್ದಾರೆ. ಈ ಜಗತ್ತಿನಲ್ಲಿ ಪ್ರೀತಿಯೂ ಸೇರಿದಂತೆ ಎಲ್ಲ ಬಣ್ಣಗಳೂ ಹೆಚ್ಚು ಕಾಲ ಬಾಳಿಕೆ ಬರೋದಿಲ್ಲ ಎಂಬ ಮಾತಿದೆ. ಇಲ್ಲಿ ಹುಟ್ಟಿಕೊಂಡ ಅದೆಷ್ಟೋ ಪ್ರೇಮ ಪ್ರಕರಣಗಳು ಬ್ರೇಕಪ್ಪಿನ ಉರುಳಿಗೆ ಸಿಕ್ಕು ಉಸಿರುಗಟ್ಟಿದ ಉದಾಹರಣೆಗಳೂ ಸಾಕಷ್ಟಿವೆ. ಹೀಗಿರೋವಾಗ ಹದಿನಾಲಕ್ಕು ವರ್ಷಗಳ ಪ್ರೀತಿಯನ್ನು ಎದೆಯಲ್ಲಿಟ್ಟುಕೊಂಡು ಕಾಪಾಡಿದ, ಪ್ರೀತಿಸಿದ ಹುಡುಗಿಯನ್ನೇ ಮದುವೆಯಾಗಲು ನಿರ್ಧರಿಸಿದ ಧ್ರುವ ವಿಶೇಷವಾಗಿ ಕಾಣಿಸುತ್ತಾರೆ. ಬಹುಶಃ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಲವ್ ಸ್ಟೋರಿಯನ್ನು ಬಿಟ್ಟರೆ, ಧ್ರುವಾ ಮತ್ತು ಪ್ರೇರಣಾ ಪ್ರೇಮಕಥೆ ಕನ್ನಡ ಚಿತ್ರರಂಗದ ಪಾಲಿಗೆ ನಿಜಕ್ಕೂ ಸ್ಪೆಷಲ್!

#

ಇನ್ನಷ್ಟು ಓದಿರಿ

Scroll to Top