
ಬಹುಶಃ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಿಗೂ ಮಾದರಿಯಾಗುವಂಥಾ ನಟ ಅನಂತ್ ನಾಗ್. ಅವರಿಗೆಂದೇ ವಿಶಿಷ್ಟ ಪಾತ್ರಗಖಳು ಹುಟ್ಟಿಕೊಳ್ಳುತ್ತವೋ ಅಥವಾ ಅವರು ನಟಿಸಿದ ಪಾತ್ರವೆಲ್ಲವೂ ವೈಶಿಷ್ಟ್ಯ ಪಡೆದುಕೊಳ್ತವೋ ಗೊತ್ತಿಲ್ಲ. ಆದರೆ ಅವರು ಪ್ರೇಕ್ಷಕರ ಪಾಲಿಗೆ ನಿರಂತರ ಸೋಜಿಗ. ಹೊಸಾ ವಿಚಾರವೆಂದರೆ ಇದೀಗ ಅನಂತ್ ನಾಗ್ ರಚಿತಾ ರಾಮ್‌ಗೆ ಅಜ್ಜನಾಗಿ ನಟಿಸಲು ತಯಾರಾಗಿದ್ದಾರೆ!
ಖ್ಯಾತ ನಿರ್ದೇಶಕ ಪಿ ವಾಸು ಶಿವರಾಜ್ ಕುಮಾರ್ ಅವರ ಚಿತ್ರವೊಂದನ್ನು ನಿರ್ದೇಶನ ಮಾಡಲಿದ್ದಾರಲ್ಲಾ? ಅದರಲ್ಲಿ ಶಿವಣ್ಣನಿಗೆ ಜೋಡಿಯಾಗಿ ರಚಿತಾ ರಾಮ್ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ತನ್ನದು ಬೇರೆಯದ್ದೇ ಥರದ ಪಾತ್ರ ಅಂತ ರಚಿತಾ ಈ ಹಿಂದೆಯೇ ಹಿಗ್ಗಿದ್ದರು. ಇದೀಗ ಈ ಚಿತ್ರದಲ್ಲಿ ರಚಿತಾ ತಾತನ ಪಾತ್ರಕ್ಕೆ ಅನಂತ್ ನಾಗ್ ಫಿಕ್ಸಾಗಿದ್ದಾರೆ.
ಈ ಚಿತ್ರದಲ್ಲಿ ಅನಂತ್ ನಾಗ್ ಅವರದ್ದೂ ಕೂಡಾ ವಿಶೇಷವಾದ ಪಾತ್ರವೇ. ಈ ಕಥೆಯನ್ನು ರೆಡಿ ಮಾಡೋ ಸಂದರ್ಭದಲ್ಲಿ ಪಿ ವಾಸು ಅವರು ಅನಂತ್ ನಾಗ್ ಅವರನ್ನೇ ಮನಸಲ್ಲಿಟ್ಟುಕೊಂಡು ಈ ಪಾತ್ರವನ್ನು ಸೃಷ್ಟಿ ಮಾಡಿದ್ದರಂತೆ. ಅದನ್ನು ಅನಂತ್ ಖುಷಿಯಿಂದಲೇ ಒಪ್ಪಿಕೊಂಡಿದ್ದಾರೆ. ಇದೀಗ ಈ ಚಿತ್ರದ ತಾರಾಗಣದ ಆಯ್ಕೆ ಕಾರ್ಯ ಮುಗಿಯುತ್ತಾ ಬಂದಿದೆ. ಇನ್ನೇನು ಚಿತ್ರೀಕರಣವೂ ಶುರುವಾಗಲಿದೆ. ಈ ಹಿಂದೆ ವಾಸು ಶಿವಣ್ಣನಿಗಾಗಿ ಶಿವಲಿಂಗ ಚಿತ್ರ ನಿರ್ದೇಶನ ಮಾಡಿದ್ದರು. ಅದು ಸೂಪರ್ ಹಿಟ್ಟಾಗಿತ್ತು. ಈ ಯಶಸ್ವೀ ಜೋಡಿ ಇನ್ನೂ ಹೆಸರಿಡದ ಈ ಚಿತ್ರದ ಮೂಲಕ ಮತ್ತೆ ಒಂದಾಗಿದೆ.
#












































