ಕಿಚ್ಚನ ಸಿನಿ ಕೆರಿಯರ್‌ಗೆ ಮತ್ತೆ ದೇಸಾಯಿ ಸ್ಪರ್ಶ!

Picture of Cinibuzz

Cinibuzz

Bureau Report


ಕಿಚ್ಚಾ ಸುದೀಪ್ ಈವತ್ತು ವಿಶ್ವ ಮಟ್ಟದಲ್ಲಿಯೇ ಅಭಿಮಾನಿ ಬಳಗವನ್ನು ಹೊಂದಿರುವ ನಟ. ಆದರೆ ಇಂಥಾ ಯಾವುದೇ ಯಶಸ್ಸಿನ ಯಾತ್ರೆಯಾದರೂ ಒಂದು ಬಿಂದುವಿನಿಂದಲೇ ಆರಂಭವಾಗಿರುತ್ತದೆ. ಕಿಚ್ಚನ ವಿಚಾರದಲ್ಲಿ ಆ ಬಿಂದು ಸ್ಪರ್ಶ ಚಿತ್ರ. ಸುನೀಲ್ ಕುಮಾರ್ ದೇಸಾಯಿ ನಿರ್ದೇಶನ ಮಾಡಿದ್ದ ಆ ಚಿತ್ರದ ಮೂಲಕವೇ ಸುದೀಪ್ ನಾಯಕ ನಟನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಇದೀಗ ಈ ಜೋಡಿ ಮತ್ತೆ ಒಂದಾಗಲು ತಯಾರಾಗಿ ನಿಂತಿದೆ!

ನವಿರಾದೊಂದು ಪ್ರೇಮ ಕಥೆಯೊಂದಿಗೆ ಸುನೀಲ್ ಕುಮಾರ್ ದೇಸಾಯಿ ಸ್ಪರ್ಶ ಚಿತ್ರವನ್ನು ಕಟ್ಟಿ ಕೊಟ್ಟಿದ್ದರು. ಆಠ ಕಥೆಯ ಮೂಲಕವೇ ಸುದೀಪ್ ಮುಂದೆ ಅವಕಾಶಗಳ ಹೆಬ್ಬಾಗಿಲೇ ತೆರೆಜದುಕೊಂಡಿತ್ತು. ಅದಾಗಿ ಇಷ್ಟು ವರ್ಷಗಳಲ್ಲಿ ಸುದೀಪ್ ಬಹು ದೂರ ಸಾಗಿ ಬಂದಿದ್ದಾರೆ. ಸುನೀಲ್ ಕುಮಾರ್ ದೇಸಾಯಿ ಕೂಡಾ ಅದೇ ಉತ್ಸಾಹದಿಂದಲೇ ಸಕ್ರಿಯರಾಗಿದ್ದಾರೆ. ಆದರೆ ಇವರಿಬ್ಬರೂ ಮತ್ತೆ ಒಟ್ಟಾಗಿ ಚಿತ್ರ ಮಾಡೋ ಕಾಲ ಮಾತ್ರ ಅದೇಕೋ ಕೂಡಿ ಬಂದಿರಲಿಲ್ಲ.

ಆದರೆ, ಆ ಕಾಲವೀಗ ಹತ್ತಿರಾಗಿದೆ. ಸುನೀಲ್ ಕುಮನಾರ್ ದೇಸಾಯಿ ಕಿಚ್ಚನಿಗಾಗಿಯೇ ಥ್ರಿಲ್ಲರ್ ಕಥೆಯೊಂದನ್ನು ರೆಡಿ ಮಾಡಿಕೊಂಡಿದ್ದಾರೆ. ಇದಲ್ಲದೇಢ ಮತ್ತೊಂದು ಕಥೆಯೂ ಅವರ ಬಳಿ ರೆಡಿಯಿದೆ. ಇದನ್ನು ಕಿಚ್ಚನಿಗೆ ಹೇಳೋದಷ್ಟೇ ಬಾಕಿ ಉಳಿದಿದೆ. ಅಷ್ಟಕ್ಕೂ ತಮ್ಮ ಬದುಕಿಗೆ ಅಚ್ಚರಿದಾಯಕ ತಿರುವು ತಂದು ಕೊಟ್ಟ ಸುನೀಲ್ ಕುಮಾರ್ ದೇಸಾಯಿ ಅವರ ಜೊತೆ ಚಿತ್ರ ಮಾಡಲು ಸುದೀಪ್ ಕೂಡಾ ಉತ್ಸುಕರಾಗಿಯೇ ಇದ್ದಾರೆ. ಎಲ್ಲವೂ ಅಂದುಕೊಂಡಂತಾದರೆ ಇಷ್ಟರಲ್ಲಿಯೇ ಸುನೀಲ್ ಕುಮಾರ್ ದೇಸಾಯಿ ಮತ್ತು ಸುದೀಪ್ ಸಂಗಮದ ಹೊಸಾ ಚಿತ್ರ ಸೆಟ್ಟೇರಲಿದೆ.

#

ಇನ್ನಷ್ಟು ಓದಿರಿ

Scroll to Top