ಹ್ಯಾಟ್ರಿಕ್ ಕವಚದೊಂದಿಗೆ ಗೋಲ್ಡನ್ ಆರೆಂಜ್ ಫೈಟ್!

Picture of Cinibuzz

Cinibuzz

Bureau Report


ಈ ವರ್ಷದ ಕಡೇಯ ಕ್ಷಣಗಳು ಹತ್ತಿರಾಗುತ್ತಲೇ ತೆರೆ ಕಾಣುತ್ತಿರೋ ಚಿತ್ರಗಳ ಸಂಖ್ಯೆಯೂ ಹೆಚ್ಚಾಗಿದೆ. ಈಗಾಗಲೇ ವಾರಕ್ಕೆ ಆರೇಳು ಚಿತ್ರಗಳ ನಡುವೆ ರೋಚಕ ಪೈಪೋಟಿಗೂ ಪ್ರೇಕ್ಷಕರು ಸಾಕ್ಷಿಯಾಗಿದ್ದಾರೆ. ಅಂಥಾದ್ದೇ ಒಂದು ಒಂದು ಪೈಪೋಟಿಗೆ ಡಿಸೆಂಬರ್ ಏಳನೇ ತಾರೀಕು ಮತ್ತೆ ಸಾಕ್ಷಿಯಾಗಲಿದೆ!

ಆ ದಿನ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ಕವಚ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಆರೆಂಜ್ ಚಿತ್ರಗಳು ತೆರೆ ಕಾಣಲಿವೆ!ಶಿವಣ್ಣನ ಕವಚ ಮತ್ತು ಗಣೇಶ್ ಅವರ ಆರೇಂಜ್ ಚಿತ್ರಗಳೆರಡೂ ಕೂಡಾ ಪ್ರೇಕ್ಷಕರಲ್ಲಿ ಅಗಾಧ ನಿರೀಕ್ಷೆ ಹುಟ್ಟು ಹಾಕಿವೆ. ಜಿವಿಆರ್ ವಾಸು ನಿರ್ದೇಶನದ ಕವಚ ಚಿತ್ರ ಮಲೆಯಾಳದ ಒಪ್ಪಂ ಚಿತ್ರದ ರೀಮೇಕ್. ಆಕ್ಷನ್ ಸೇರಿದಂತೆ ಎಲ್ಲ ಅಂಶಗಳನ್ನೂ ಒಳಗೊಂಡಿರೋ ಈ ಚಿತ್ರ ರೀಮೇಕ್ ಎಂಬುದರಾಚೆಗೂ ಪ್ರೇಕ್ಷಕರನ್ನು ಸೆಳೆದುಕೊಂಡಿದೆ.

ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಆರೆಂಜ್ ಚಿತ್ರ ಕೂಡಾ ಇಂಥಾ ನಿರೀಕ್ಷೆ ಹುಟ್ಟು ಹಾಕೋದರಲ್ಲಿ ಹಿಂದೆ ಬಿದ್ದಿಲ್ಲ. ಈ ಹಿಂದೆ ಗಣೇಶ್‌ಗಾಗಿ ಝೋಮ್ ಚಿತ್ರ ನಿರ್ದೇಶನ ಮಾಡಿದ್ದರಲ್ಲಾ ಪ್ರಶಾಂತ್ ರಾಜ್? ಅವರೇ ಆರೇಂಜ್ ಚಿತ್ರವನ್ನೂ ನಿರ್ದೇಶಿಸಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ ಜಾನರಿನ ಈ ಚಿತ್ರದ ಹಾಡುಗಳೆಲ್ಲವೂ ಈಗಾಗಲೇ ಜನಮನ ಗೆದ್ದಿವೆ. ಒಟ್ಟಾರೆಯಾಗಿ ಈ ಎರಡೂ ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿರೋದು ಪ್ರೇಕ್ಷಕರ ಪಾಲಿಗೆ ನಿಜಕ್ಕೂ ಹಬ್ಬ. ಈ ಪೈಪೋಟಿಯಲ್ಲಿ ಯಾವ ಚಿತ್ರ ಎಂಥಾ ಕಮಾಲ್ ಮಾಡಲಿದೆ ಎಂಬುದಷ್ಟೇ ಸದ್ಯದ ಕುತೂಹಲ.

#

ಇನ್ನಷ್ಟು ಓದಿರಿ

Scroll to Top