
ಕಲಿಯುಗದ ಕಣ್ಣ ಅಂಬರೀಶ್ ಸಾವಿಗೆ ಇಂಡಿಯಾದ ಅಷ್ಟ ದಿಕ್ಕುಗಳಿಂದಲೂ ಸಂತಾಪ ಸೂಚಿಸಲಾಗುತ್ತಿದೆ. ಯಾವ್ಯಾವುದೋ ಮೂಲೆಯಲ್ಲಿದ್ದವರೂ ಕೂಡ ಓಡೋಡಿ ಬಂದು ಅಂಬರೀಶ್ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಅಷ್ಟು ದೂರದ ಸ್ವೀಡನ್ ದೇಶದಲ್ಲಿದ್ದ ದರ್ಶನ್ ಕೂಡಾ ತರಾತುರಿಯಿಂದ ಮರಳಿದ್ದಾರೆ. ಇದೆಲ್ಲದಕ್ಕೆ ಕಾರಣವಾಗಿರೋದು ಅಂಬಿಯ ವ್ಯಕ್ತಿತ್ವದಲ್ಲಿದ್ದ ಸ್ನೇಹಶೀಲತೆ ಮತ್ತು ಹೃದಯ ವಂತಿಕೆ.
ಆದರೆ, ಮಾಜಿ ನಟಿ ಮತ್ತು ಹಾಲಿ ರಾಜಕಾರಣಿ ರಮ್ಯಾ ಮಾತ್ರ ಇದಕ್ಕೆ ತದ್ವಿರುದ್ಧ. ಅಂಬಿ ಸಾವಿನ ಸುದ್ದಿ ತಿಳಿದು ಅದೆಷ್ಟೋ ಕಾಲವಾದ ನಂತರ ಟ್ವಿಟರ್ ಮೂಲಕವೇ ಇಂಗ್ಲಿಷಿನಲ್ಲಿ ಸಂತಾಪದಂಥಾದ್ದನ್ನು ಸೂಚಿಸಿದ ರಮ್ಯಾ ದೆಹಲಿಯಲ್ಲೋ, ಇನ್ನೆಲ್ಲೋ ಕಳೆದು ಹೋಗಿದ್ದಾಳೆ. ಇದೀಗ ಮಂಡ್ಯದ ಜನ ಈ ಜಂಭದ ಕೋಳಿಗೆ ಮಕ ಮಕ ಉಗಿದು ಆಕ್ರೋಶ ವ್ಯಕ್ತಪಡಿಸುತ್ತಿರೋದು ಈ ಕಾರಣಕ್ಕಾಗಿಯೇ!
ಸಿನಿಮಾ ನಟಿಯಾಗಿದ್ದ ಈಕೆ ರಾಜಕಾರಣಿಯಾಗಿ ಕಾಂಗ್ರೆಸ್‌ನ ಅಂತಃಪುರ ಸೇರಿಕೊಂಡಿದ್ದಾಳಲ್ಲಾ? ಅದಕ್ಕೆ ನಿಜವಾಗಿಯೂ ಕಾರಣವಾಗಿರೋದು ರೆಬೆಲ್ ಸ್ಟಾರ್ ಅಂಬರೀಶ್. ಈಕೆ ಮಂಡ್ಯ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ ಜನ ಓಟು ಹಾಕಿ ಗೆಲ್ಲಿಸಿದ್ದೂ ಕೂಡಾ ಅಂಬರೀಷಣ್ಣನ ಮುಖ ನೋಡಿಯೇ. ಆದರೆ ಈಕೆ ಹಾಗೆ ಗೆದ್ದು ದೆಹಲಿ ಸೇರಿಕೊಂಡವಳೇ ಅಂಬಿಗೇ ಉಲ್ಟಾ ಹೊಡೆದದ್ದು, ಎರಡನೇ ಸಲ ಸ್ಪರ್ಧಿಸಿ ಗೋತಾ ಹೊಡೆದದ್ದೆಲ್ಲವೂ ಈಗ ಇತಿಹಾಸ.
ಈ ರಾಜಕೀಯ ಕಾರಣಗಳಿಂದಾಗಿ ಅಂಬಿಯನ್ನು ಎದುರು ಹಾಕಿಕೊಂಡಿದ್ದ ರಮ್ಯಾ ಅವರು ನಿಧನರಾದಾಗಲೂ ಹಳೇ ದ್ವೇಷವನ್ನೇ ಮುಂದುವರೆಸಿದ್ದಾಳೆ. ಆಕೆಗೇನಾದರೂ ಮನುಷ್ಯತ್ವ ಇದ್ದಿದ್ದರೆ ಮಂಡ್ಯಕ್ಕೆ ಬರುತ್ತಿದ್ದಳು. ಅಂಬರೀಶ್ ಅವರ ಪಾರ್ಥಿವ ದೇಹದ ದರ್ಶನದ ದೇಖಾರೇಖಿ ನೋಡಿಕೊಳ್ಳುತ್ತಿದ್ದಳು. ಆದರೆ ರಮ್ಯಾ ಮಾತ್ರ ಅದಕ್ಕೂ ತನಗೂ ಸಂಬಂಧವೇ ಇಲ್ಲದಂತೆ ಸುಮ್ಮನಿದ್ದರೆ ಮಂಡ್ಯ ಜನರಿಗೆ ರೋಷ ಉಕ್ಕದಿರುತ್ತದಾ?

ಅಷ್ಟಕ್ಕೂ ಅಂಬರೀಶ್ ಅವರದ್ದು ಯಾರ ವಿರುದ್ಧವೂ ಮಸಲತ್ತು ನಡೆಸೋ ಜಾಯಮಾನವಲ್ಲ. ಎಂಥಾ ಕಲಿಗಳು ರಾಜಕೀಯದ ಅಖಾಡದಲ್ಲಿ ಎದುರಾದಾಗಲೂ ಒಂಟಿಸಲಗದಂತೆಯೇ ಎದುರುಗೊಂಡವರು ಅಂಬಿ. ಷಡ್ಯಂತ್ರ, ಕುತಂತ್ರದ ಮೂಲಕ ಗೆಲ್ಲೋದು ಅವರ ವ್ಯಕ್ತಿತ್ವದಲ್ಲೇ ಇರಲಿಲ್ಲ. ಇಂಥಾ ಅಂಬರೀಶ್ ರಮ್ಯಾಳ ಊಸರವಳ್ಳಿ ಬುದ್ಧಿಯನ್ನೂ ಕೂಡಾ ಆ ನೇರವಂತಿಕೆಯಿಂದಲೇ ದಿಟ್ಟಿಸಿ ಮರೆತೂ ಬಿಟ್ಟಿದ್ದರು. ಬಹುಶಃ ಮುಂದಿನ ಚುನಾವಣೆಯಲ್ಲೇನಾದರೂ ಅವರು ಬದುಕಿದ್ದಿದ್ದರೆ, ರಮ್ಯಾ ಬಂದು ಅಂಕಲ್… ಅಂತ ನಾಕು ಒಳ್ಳೆ ಮಾತಾಡಿದ್ದರೂ ಕರಗಿ ಯಾವ ಕಿಸುರೂ ಇಲ್ಲದೆ ಬೆನ್ನಿಗೆ ನಿಲ್ಲುವ ಅಂತಃಕರಣ ಹೊಂದಿದ್ದ ಜೀವ ಅಂಬರೀಶ್ ಅವರದ್ದು. ಆದರೆ ಹೈಫೈ ಗುಂಗಿನ ಪುಟಗೋಸಿ ತಿಮಿರು ತುಂಬಿಕೊಂಡಿರೋ ರಮ್ಯಾಗೆ ಇದೆಲ್ಲ ಅದು ಹೇಗೆ ಅರ್ಥವಾದೀತು?
#












































