ಶಿಕ್ಷಕರ ದಿನಾಚರಣೆಯಂದು ಬಿಡುಗಡೆಯಾಯಿತು ಶಿಕ್ಷಕಿ ವಿಜಯ ನರೇಶ್ ನಿರ್ದೇಶನದ “ರಿಯಾ”

Picture of Cinibuzz

Cinibuzz

Bureau Report

ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆ ಶುಭದಿನದಂದು “ರಿಯಾ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಆಂದ್ರಪ್ರದೇಶದವರಾದ ವಿಜಯ ನರೇಶ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ವಿಜಯ ನರೇಶ್ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಪತಿ ಕಣಿಗೊಂಡ ನರೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಒಳ್ಳೆಯ ಹುಡುಗ ಪ್ರಥಮ್ ಹಾಗೂ “ಸ್ತಬ್ಧ” ಚಿತ್ರದ ನಾಯಕ ಪ್ರತಾಪ್ ಸಿಂಹ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಇದು ಒಂದು ಹಾರಾರ್ ಸಿನಿಮಾ. ಹದಿನಾಲ್ಕು ಪಾತ್ರಗಳ ಜೊತೆಗೆ ಒಂದೇ ಮನೆಯಲ್ಲಿ ಈ ಚಿತ್ರದ ಕಥೆ ನಡೆಯುತ್ತದೆ. ನಾನು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಇದೇ 16ನೇ ತಾರೀಖು ಚಿತ್ರ ಬಿಡುಗಡೆಯಾಗುತ್ತಿದೆ. ನೋಡಿ ಹಾರೈಸಿ ಎಂದರು ಪ್ರಮುಖ ಪಾತ್ರಧಾರಿ ಕಾರ್ತಿಕ್ ವರ್ಣೆಕರ್.

ನಾಯಿಕಿ ಸಾವಿತ್ರಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಕಲಾವಿದರಾದ ವಿಕಾಸ್, ಶ್ವೇತಾ, ರಾಜ್ ಉದಯ್ ಮುಂತಾದವರು ತಮ್ಮ ಪಾತ್ರ ಪರಿಚಯ ಮಾಡಿಕೊಂಡರು. “ರಿಯಾ” ಪಾತ್ರಧಾರಿ ಬೇಬಿ ಅನನ್ಯ ಸಹ ತಮ್ಮ ತಮ್ಮ ಅನುಭವ ಹಂಚಿಕೊಂಡರು. ವಿತರಕರಾದ ಪಿ.ವಿ.ಆರ್ ಸ್ವಾಮಿ, ಚೇತನ್ ಹಾಗೂ ಚಿತ್ರತಂಡದ ಅನೇಕ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿರುವ, “ರಿಯಾ” ಚಿತ್ರದ ನಿರ್ಮಾಪಕ ನರೇಶ್ ಚಿತ್ರತಂಡಕ್ಕೆ ಹಾಗೂ ಗಣ್ಯರಿಗೆ ಧನ್ಯವಾದ ತಿಳಿಸಿ, ಇದೇ ಹದಿನಾರರಂದು ಬಿಡುಗಡೆಯಾಗಲಿರುವ ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಹಾರೈಕೆ ಇರಲಿ ಎಂದರು.

ಇನ್ನಷ್ಟು ಓದಿರಿ

Scroll to Top