ಚಿತ್ರರಂಗಕ್ಕೆ ಅನುಕೂಲವಾಗುವ ಹೊಸ ಪ್ರಯೋಗಳು ನಡೆಯುತ್ತಲೇ ಇವೆ. ಸದ್ಯ ಡಿಜಿಟಲ್ ಕ್ಷೇತ್ರದಲ್ಲಿ ಎಲ್ಲರಿಗೂ ಯುಪಯೋಗಕ್ಕೆ ಬರುವ ’ಶ್ರೀಪಾದ ಸ್ಟುಡಿಯೋಸ್’ ಶುರುವಾಗಿದೆ. ಬೆಂಗಳೂರಿನ ಹಂಪಿನಗರದಲ್ಲಿರುವ ನೂತನ ಕಛೇರಿಯನ್ನು ನಟ ರಮೇಶ್‌ಅರವಿಂದ್ ಉದ್ಗಾಟಿಸಿ ತಂಡಕ್ಕೆ ಶುಭಹಾರೈಸಿದರು.


ನಂತರ ಮಾತನಾಡಿದ ರಮೇಶ್‌ಅರವಿಂದ್ ಯುವ ತಂಡದಲ್ಲಿ ಒಂಥರ ಕ್ರಿಯೇಟಿವಿಟಿ ಇದೆ. ಅವರಲ್ಲಿ ಸ್ವಂತವಾಗಿ ಬ್ಯುಸಿನೆಸ್ ಶುರು ಮಾಡುವ ಧೈರ್ಯವಿತ್ತು. ಅದರಂತೆ ಪ್ರಾರಂಭ ಮಾಡಿದ್ದಾರೆ. ಇವರುಗಳಿಗೆ ಇನ್ನಷ್ಟು ಹಲವು ಗೆಲುವುಗಳು, ಕ್ರಿಯೇಟಿವಿಟಿಗಳು ಕಾಯ್ತಾ ಇದೆ. ನೀವುಗಳು ಬೆಳೀತಾ ಇದ್ದೀರಾ ಅಂದರೆ ಸರಿಯಾದ ಹಾದಿಯಲ್ಲಿ ಸಾಗುತ್ತಿದ್ದೀರಾ ಎಂಬರ್ಥ ಕೊಡುತ್ತದೆ. ನೀವೇನು ಮಾಡುತ್ತಿದ್ದೀರಾ? ಏನಾದರೂ ಕೊಡುಗೆ ಇರಬೇಕು. ಅದು ಬರವಣಿಗೆ, ಬುದ್ದವಂತಿಕೆ ಇರಬಹುದು. ಪ್ರತಿದಿನ ಕೆಲಸದ ಬಗ್ಗೆ ಯೋಚಿಸಿ, ಹೊಸ ವಿಷಯವನ್ನು ಕಲಿಯಬೇಕು ಎಂದರು.
ಇಲ್ಲಿಯವೆರಗೂ ಸಂಸ್ಥೆಯು ಶಿವಾಜಿಸುರತ್ಕಲ್-2, 100, ಗಾಳಿಪಟ-2, ತಿಮ್ಮಯ್ಯ ಮತ್ತು ತಿಮ್ಮಯ್ಯ, ಪೆಂಟಗನ್ ಸೇರಿದಂತೆ ಅನೇಕ ಚಿತ್ರಗಳಿಗೆ ಡಿಜಿಟಲ್ ಪ್ರಚಾರ ಸೇವೆಯನ್ನು ಒದಗಿಸುತ್ತಾ ಬಂದಿದೆ. ಅಲ್ಲದೆ ಖಾಸಗಿ ಸಂಸ್ಥೆಗಳಿಗೂ ಪೂರ್ಣ ಪ್ರಮಾಣದಲ್ಲಿ ಮಾದ್ಯಮ ನಿರ್ವಹಣಾ ಹಾಗೂ ವಿಡಿಯೋ ಸೇವೆಗಳನ್ನು ನೀಡುತ್ತಾ ಬಂದಿರುತ್ತದೆ.
ನೂತನ ಕಛೇರಿಯಲ್ಲಿ ಇನ್ನು ಹೆಚ್ಚಿನ ಉನ್ನತ ದರ್ಜೆಯ ವಿಷಯ ರಚನೆ ಮತ್ತು ವೃತ್ತಿಪರ ಸಲಕರಣೆಗಳೊಂದಿಗೆ ಸೇವೆಯನ್ನು ನೀಡಲು ಸಿದ್ದರಿದ್ದೇವೆಂದು ಸ್ಟುಡಿಯೋ ಮಾಲೀಕ ಪಿ.ವಿ.ಫಣಿಶ್ರೀವತ್ಸ, ಸಹ ಸಂಸ್ಥಾಪಕ ಸತೀಶ್.ಎಂ.ಎಸ್ ಇದೇ ಸಂದರ್ಭದಲ್ಲಿ ಮಾದ್ಯಮದವರಿಗೆ ಮಾಹಿತಿ ನೀಡಿದರು.












































