ನೋಡಿದಿರಾ `ಜೀವಸಖಿ’ಯ ಚೆಂದವ!

Picture of Cinibuzz

Cinibuzz

Bureau Report

ಕಿರುಚಿತ್ರವೊಂದು ಸಿನಿಮಾದ ಮಟ್ಟಕ್ಕೆ ಟಾಕ್‌ ಕ್ರಿಯೇಟ್‌ ಮಾಡೋದು ಸಲೀಸಲ್ಲ. ಸದ್ಯ ಕನ್ನಡ ಚಿತ್ರರಂಗದಲ್ಲಿ ಎಲ್ಲರ ಗಮನ ಸೆಳೆದಿರುವ ಕೆ. ಸಂಗಮೇಶ್ ಪಾಟೀಲ್ ನಿರ್ದೇಶನದ `ಜೀವಸಖಿ’ ಕಿರುಚಿತ್ರ ಬಿಡುಗಡೆಗೊಂಡಿದೆ.

ಅಚ್ಚುಕಟ್ಟಾದ ಸಮಾರಂಭವೊಂದರಲ್ಲಿ, ಸಂಗಮ್ ಟಾಕೀಸ್ ಯೂ ಟ್ಯೂಬ್ ಚಾನೆಲ್ ಮೂಲಕ ಲೋಕಾರ್ಪಣೆಗೊಂಡಿರುವ ಜೀವಸಖಿ, ಮೊದಲಿಗೆ ಅಲ್ಲಿದ್ದ ಪ್ರೇಕ್ಷಕ ವರ್ಗವನ್ನು ಸೆಳೆದುಕೊಂಡಿತ್ತು. ಜೀವಸಖಿಯನ್ನು ನೋಡಿದವರೆಲ್ಲರೂ ಮೆಚ್ಚುಗೆಯ ಮಾತಾಡಿದ್ದರು. ಈಗ ಸೋಷಿಯಲ್‌ ಮೀಡಿಯಾದ ತುಂಬಾ ಈ ಪುಟ್ಟ ಸಿನಿಮಾಗೆ ಪ್ರೋತ್ಸಾಹದಾಯಕ ವಾತಾವರಣ ನಿರ್ಮಾಣವಾಗಿದೆ.

ಚೆಂದದ ಪ್ರೇಮದ ಪುಳಕಗಳನ್ನು ಒಳಗೊಂಡಿರುವ ಕಿರುಚಿತ್ರ ಜೀವಸಖಿ. ಐದು ವರ್ಷಗಳ ಕಾಲ ಹಲವು ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವ ಹೊಂದಿದ್ದ ಸಂಗಮೇಶ್ ಪಾಟೀಲ್, ಈ ಕಿರುಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಮೊದಲ ಹೆಜ್ಜೆಯಿಟ್ಟಿದ್ದಾರೆ. ಹಾಗೆ ಈ ಚೊಚ್ಚಲ ಪ್ರಯತ್ನ ಮತ್ತು ಧ್ಯಾನದ ಫಲದಂತಿರುವ ಜೀವಸಖಿ ಎಲ್ಲ ವರ್ಗದ ಪ್ರೇಕ್ಷಕರನು ಸೆಳೆದುಕೊಳ್ಳುತ್ತಿರುವ ಖುಷಿ ಸಂಗಮೇಶ್ ಅವರಲ್ಲಿದೆ.

ಜೀವಸಖಿ ಮೂವತೈದು ನಿಮಿಷಗಳ ಕಾಲಾವಧಿ ಹೊಂದಿರುವ ಕಿರು ಚಿತ್ರ. ಯುವರಾಜ್ ಪಾಟೀಲ್ ನಾಯಕನಾಗಿ ನಟಿಸಿದ್ದರೆ, ಈಗಾಗಲೇ ಒಂದಷ್ಟು ವೆಬ್ ಸೀರೀಸ್ ಗಳಲ್ಲಿ ಅಭಿನಿಸಿ ಅನುಭವ ಹೊಂದಿರುವ ಸೌಂದರ್ಯ ಗೌಡ ನಾಯಕಿಯಾಗಿ ಜೊತೆಯಾಗಿದ್ದಾರೆ. ಸದ್ಯ ಈ ಚಿತ್ರದ ಪಾತ್ರಗಳಿಗೆ ಜೀವ ತುಂಬಿರುವ ಇವರಿಬ್ಬರ ಬಗ್ಗೆಯೂ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ನಿರ್ದೇಶಕರ ಆದಿಯಾಗಿ ಕಲಾವಿದರಿಗೂ ಚಿತ್ರರಂಗದಲ್ಲಿ ಒಂದೊಳ್ಳೆ ಭವಿಷ್ಯವಿದೆ ಅನ್ನೋದೇ ಎಲ್ಲರ ಅಭಿಪ್ರಾಯವಾಗಿದೆ. ಒಂದು ಪವರ್‌ಫುಲ್ ತಂಡದೊಂದಿಗೆ ಸಂಗಮೇಶ್ ಪಾಟೀಲ್ ಈ ಕಿರುಚಿತ್ರವನ್ನು ರೂಪಿಸಿದ್ದಾರೆ. ಕಥೆ, ಚಿತ್ರಕಥೆ, ತಾರಾಗಣ ಮಾತ್ರವಲ್ಲದೇ, ತಾಂತ್ರಿಕವಾಗಿಯೂ ಹೆಚ್ಚು ಗಮನ ಹರಿಸಿದ್ದಾರೆ. ಸುನೀಲ್ ಎಲ್ ಎಸ್ ಆರ್ ಸಂಕಲನ, ಜೀವನ್ ಎಸ್ ಛಾಯಾಗ್ರಹಣ, ಸೂರಜ್ ಜೋಯಿಸ್ ಸಂಗೀತ ನಿರ್ದೇಶನ, ಅಕ್ಷಯ್ ಬಿಂದುಸಾರ ಪ್ರಚಾರ, ರವಿ ಕರಳ್ಳಿ ವಿ ಎಫ್ ಎಕ್ಸ್, ರವಿ ಹಿರೇಮಠ್ ಸೌಂಡ್ ಡಿಸೈನ್ ವಿನ್ಯಾಸ ಈ ಚಿತ್ರಕ್ಕಿದೆ.

ಇನ್ನಷ್ಟು ಓದಿರಿ

Scroll to Top