“4 ಎನ್ 6” ಈವಾರ ಬಿಡುಗಡೆ

Picture of Cinibuzz

Cinibuzz

Bureau Report

ಪರ್ಪಲ್ ಪ್ಯಾಚ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಾಯಿಪ್ರೀತಿ ಎನ್. ಅವರು ನಿರ್ಮಿಸಿರುವ, ಮರ್ಡರ್‌ ಮಿಸ್ಟ್ರಿ ಜೊತೆಗೆ ಇನ್ ವೆಸ್ಟಿಗೇಷನ್ ಥ್ರಿಲ್ಲರ್ ಕಾನ್ಸೆಪ್ಟ್ ಹೊಂದಿರುವ ಚಿತ್ರ ‘4 ಎನ್ 6’ ಮೇ 10 ರಂದು ಶುಕ್ರವಾರ ರಾಜ್ಯಾದ್ಯಂತ ತೆರೆಗೆ ಬರಲಿದೆ. ಕೊಲೆಯೊಂದರ ತನಿಖೆಯ ಸುತ್ತ ನಡೆಯುವ ಕಥಾಹಂದರ ಚಿತ್ರದಲ್ಲಿದ್ದು, ಇಂಥ ಪ್ರಕರಣ ಪತ್ತೆಹಚ್ಚುವಲ್ಲಿ ಫೋರೆನ್ಸಿಕ್ ರಿಪೋರ್ಟ್ ತುಂಬಾ ಪ್ರಮುಖವಾಗಿರುತ್ತದೆ. ಇದು ಬರೀ ಮರ್ಡರ್ ಇನ್ವೆಸ್ಟಿಗೇಶನ್ ಸುತ್ತ ನಡೆವ ಕಥೆಯಲ್ಲ, ಸೈಕಲಾಜಿಕಲ್ ಚಿತ್ರವೂ ಹೌದು, ಲವ್ ಮಾಕ್ಟೇಲ್ ಹಾಗೂ ಲವ್ 360 ಖ್ಯಾತಿಯ ರಚನಾ ಇಂದರ್ ಅವರು ಇದೇ ಮೊದಲ ಬಾರಿಗೆ ಫಾರೆನ್ಸಿಕ್ ಡಿಟೆಕ್ಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದರ್ಶನ್ ಶ್ರೀನಿವಾಸ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ರಚನಾ ಇಂದರ್, ಭವಾನಿ ಪ್ರಕಾಶ್, ನವೀನ್ ಕುಮಾರ್ ಹಾಗೂ ಆದ್ಯಶೇಖರ್ ಈ ೪ ಪ್ರಮುಖ ಪಾತ್ರಗಳ ಸುತ್ತ ಚಿತ್ರಕಥೆ ನಡೆಯುತ್ತದೆ. ಬೆಂಗಳೂರು ಸುತ್ತಮುತ್ತ 30 ದಿನಗಳ‌ ಕಾಲ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದ್ದು, ಸೆನ್ಸಾರ್ ನಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಇನ್ನು‌ ಈ ಚಿತ್ರಕ್ಕೆ ನಿರ್ದೇಶಕರೇ ಎಡಿಟರ್ ಆಗಿದ್ದು ಮುತ್ತುರಾಜ್ ಸಾಥ್ ನೀಡಿದ್ದಾರೆ. ಚರಣ್ ತೇಜ್ ಅವರ ಛಾಯಾಗ್ರಹಣ, ಸತ್ಯಕಹಿ ಅವರ ಸಂಭಾಷಣೆ ಹಾಗೂ ಸಾಯಿ ಸೋಮೇಶ್ ಅವರ ಸಂಗೀತ ನಿರ್ದೇಶನವಿದೆ. ಅರ್ಜುನ್, ಆಶಿತಾ ಅಲ್ವಾ, ಮುಕ್ತಿ ಅಲ್ವಾ, ಆರ್ ನಿಕ್ಸಾನ್, ಪ್ರಶಾಂತ್, ಸಂಜಯ್ ನಾಯಕ್, ಸೌರವ್, ಸತ್ಯ ಕಹಿ, ಬೇಬಿ ವಂಶಿಕಾ, ಬೇಬಿ ರೇಯನ್ಸ್ ಇತರೆ ಪಾತ್ರಗಳಲ್ಲಿ‌ ಅಭಿನಯಿಸಿದ್ದಾರೆ.

ಇನ್ನಷ್ಟು ಓದಿರಿ

Scroll to Top