ಆಲ್ ಇಂಡಿಯಾ “ಯೂಟ್ಯೂಬ್ ಟ್ರೆಂಡಿಂಗ್” ಪಟ್ಟಿಯ ಮೂರನೇ ಸ್ಥಾನದಲ್ಲಿ “ಕೃಷ್ಣಂ ಪ್ರಣಯ ಸಖಿ” ಚಿತ್ರದ “ಚಿನ್ನಮ್ಮ” ಹಾಡು .

Picture of Cinibuzz

Cinibuzz

Bureau Report

ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣದ, ಶ್ರೀನಿವಾಸರಾಜು ಅವರ ನಿರ್ದೇಶನದದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ಕಷ್ಣಂ ಪ್ರಣಯ ಸಖಿ” ಚಿತ್ರದ “ಚಿನ್ನಮ್ಮ” ಹಾಡು ಇತ್ತೀಚಿಗೆ ಬಿಡುಗಡೆಯಾಗಿತ್ತು.

ಕವಿರಾಜ್ ಅವರು ಬರೆದು ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡನ್ನು ಖ್ಯಾತ ಗಾಯಕ ಕೈಲಾಶ್ ಖೇರ್ ಹಾಗೂ ಇಂದು ನಾಗರಾಜ್ ಹಾಡಿದ್ದಾರೆ. ಪ್ರಸ್ತುತ ಆಲ್ ಇಂಡಿಯಾ “ಯೂಟ್ಯೂಬ್ ಟ್ರೆಂಡಿಂಗ್” ಪಟ್ಟಿಯಲ್ಲಿ “ಚಿನ್ನಮ್ಮ” ಹಾಡು ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ಏಳು ಮಿಲಿಯನ್ ಗೂ ಅಧಿಕ ವೀಕ್ಷಣೆಗೊಂಡು ಮೂರನೇ ಸ್ಥಾನದಲ್ಲಿದೆ.

 

ಮೊದಲ ಸ್ಥಾನದಲ್ಲಿ ದಳಪತಿ ವಿಜಯ್ ಅವರ “ಗ್ರೇಟೆಸ್ಟ್ ಆಫ್ ಆಲ್ ಟೈಮ್” ಚಿತ್ರದ “ಚಿನ್ನ ಚಿನ್ನ ಕಣ್ಗಳ್” ಹಾಗೂ ಎರಡನೇ ಸ್ಥಾನದಲ್ಲಿ ಪ್ರಭಾಸ್ ನಟನೆಯ “ಕಲ್ಕಿ 2898 AD” ಚಿತ್ರದ “ಥೀಮ್ ಆಫ್ ಕಲ್ಕಿ” ಹಾಡು ಇದೆ. ಇದೇ ವೇಗದಲ್ಲಿ ವೀಕ್ಷಣೆಯಾಗುತ್ತಿದ್ದರೆ “ಚಿನ್ನಮ್ಮ” ಹಾಡು ಮೊದಲ ಸ್ಥಾನಕ್ಕೆ ಬರುವ ಸಾಧ್ಯತೆ ಇದೆ.

ಇನ್ನಷ್ಟು ಓದಿರಿ

Scroll to Top