ಫಾದರ್ ಆಫ್ ದಿ ನೇಷನ್ ಪ್ರಕಾಶ್ ರೈ!

Picture of Cinibuzz

Cinibuzz

Bureau Report

ತಮ್ಮ ಆದರ್ಶಗಳನ್ನು ಇಡೀ ದೇಶದಕ್ಕೇ ಹಂಚಿ ರಾಷ್ಟ್ರಪಿತ ಅನ್ನಿಸಿಕೊಂಡವರು ಮಹಾತ್ಮಾ ಗಾಂಧಿ. ʻʻಗಾಂಧೀಜಿ ಅವರನ್ನು ಬಿಟ್ಟರೆ ಮತ್ತೊಬ್ಬ ಫಾದರ್ ಆಫ್ ದಿ ನೇಷನ್ ಅಂತಾ ಇದ್ದರೆ ಅದು ನಾನೇ ಅಂತಾ ನನ್ನ ಸ್ನೇಹಿತರು ಹೇಳುತ್ತಿರುತ್ತಾರೆ…ʼʼ ಸ್ವತಃ ಹೀಗೆ ಹೇಳಿಕೊಂಡವರು ನಟ ಪ್ರಕಾಶ್ ರೈ.

ಭಾರತದ ಬಹುತೇಕ ಎಲ್ಲ ಭಾಷೆಗಳಲ್ಲೂ ನಟಿಸಿರುವ ಅದ್ಭುತ ನಟ ಪ್ರಕಾಶ್ ರೈ. ಎಲ್ಲ ಭಾಷೆಯ ಹೀರೋಗಳಿಗೆ ಅಪ್ಪನ ಪಾತ್ರವನ್ನು ನಿಭಾಯಿಸಿದವರು ರೈ. ಇರುವರ್ ಚಿತ್ರದಲ್ಲಿ ನಟಿಸಿದಾಗ ರೈ ಅವರಿಗೆ ಇಪ್ಪತ್ತೆಂಟು ವರ್ಷ. ಆದರೆ ನಟಿಸಿದ್ದು ಎಪ್ಪತ್ಮೂರು ವರ್ಷದ ವಯೋವೃದ್ಧನ ಪಾತ್ರದಲ್ಲಿ. ಇದಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ದೈತ್ಯ ನಟರಿವರು. ತಮಿಳು, ತೆಲುಗು, ಕನ್ನಡ ಸೇರಿದಂತೆ ಯಾವುದೇ ಭಾಷೆಯ ಬಹುತೇಕ ಸೂಪರ್ ಸ್ಟಾರ್ ನಟರ ಸಿನಿಮಾಗಳಲ್ಲಿ ತಂದೆಯ ಪಾತ್ರವನ್ನು ನಿಭಾಯಿದ್ದಾರೆ. ಸದ್ಯ ಆರ್. ಚಂದ್ರು ನಿರ್ಮಾಣದ ಫಾದರ್ ಹೆಸರಿನ ಸಿನಿಮಾದಲ್ಲಿ ಟೈಟಲ್ ರೋಲಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಪತ್ರಿಕಾಗೋಷ್ಟಿಯಲ್ಲೇ ಪ್ರಕಾಶ್ ರೈ ತಮ್ಮನ್ನು ತಾವು ಫಾದರ್ ಆಫ್ ದಿ ನೇಷನ್ ಅಂತಾ ಹೇಳಿಕೊಂಡಿದ್ದು.

ಡಾರ್ಲಿಂಗ್ ಕೃಷ್ಣನಿಗೆ ಪ್ರಕಾಶ್ ರೈ ಇಲ್ಲಿ ಅಪ್ಪನಾಗಿ ನಟಿಸುತ್ತಿದ್ದಾರೆ. ತಮಿಳಿನಿಂದ ಬಂದಿರುವ ರಾಜ್ ಮೋಹನ್ ನಿರ್ದೇಶನದ ಈ ಚಿತ್ರ ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ ಸೌಂಡ್ ಮಾಡಲಿದೆ. ಏಕಕಾಲದಲ್ಲಿ ಬಹುಭಾಷೆಗಳಲ್ಲಿ ತಯಾರಾಗುತ್ತಿರುವ ಈ ಸಿನಿಮಾದ ಕಂಟೆಂಟ್ ಕೂಡಾ ಅಷ್ಟೇ ರೋಚಕವಾಗಿದೆಯಂತೆ. ಸದ್ಯ ಮೈಸೂರಿನಲ್ಲಿ ಪ್ರಮುಖ ಭಾಗದ ಚಿತ್ರೀಕರಣ ನಡೆಸಿ ಭಾರತದ ಇತರೆಡೆಗೆ ತೆರಳಿದೆ ಚಿತ್ರತಂಡ…

ಇನ್ನಷ್ಟು ಓದಿರಿ

Scroll to Top