ರೆಡ್ ಗೌನ್ ನಲ್ಲಿ ‘ಪಟಾಕ’ ಮಿಂಚಿಂಗ್..’ಡಾರ್ಲಿಂಗ್’ ಸಿನಿಮಾದಲ್ಲಿ ನಭಾ ನಟೇಶ್ ಧಮಾಕ

Picture of Cinibuzz

Cinibuzz

Bureau Report

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ವಜ್ರಕಾಯ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಯವಾದವರು ನಭಾ ನಟೇಶ್. ಪಟಾಕ ಪಾತ್ರದ ಮೂಲಕ ಗಮನಸೆಳೆದ ಈ ಶೃಂಗೇರಿ ಸುಂದರಿ ಈಗ ಟಾಲಿವುಡ್ ಅಂಗಳದಲ್ಲಿ ಬ್ಯುಸಿಯಾಗಿದ್ದಾರೆ. ಡಾರ್ಲಿಂಗ್ ಸಿನಿಮಾ ಮೂಲಕ ಇತ್ತೀಚೆಗಷ್ಟೇ ಪ್ರೇಕ್ಷಕರ ಎದುರು ಬಂದಿದ್ದ ನಭಾ ನಟೇಶ್ ಹೊಸ ಫೋಟೋಶೂಟ್ ನಲ್ಲಿ ಮಿಂಚಿದ್ದಾರೆ.

ಕೆಂಪು ಬಣ್ಣದ ಗೌನ್ ನಲ್ಲಿ ಗುಲಾಬಿಯಂತೆ ಕಂಗೊಳಿಸಿರುವ ಪಟಾಕ ನಯಾ ಸ್ಟೈಲ್ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದೆ. ರೆಡ್ ಗೌನ್ ನಲ್ಲಿ ಬೋಲ್ಡ್ ಅಂಡ್ ಬ್ಯೂಟಿಫುಲ್ ಅವತಾರದಲ್ಲಿ ತರೇವಾರಿ ಫೋಸ್ ಕೊಟ್ಟು ಕ್ಯಾಮೆರಾಗೆ ವಜ್ರಕಾಯ ಬೆಡಗಿ ಕಣ್ಣು ಹೊಡೆದಿದ್ದಾಳೆ. ಶೃಂಗೇರಿ ಸುಂದರಿಯ ಸ್ಟೈಲೀಶ್ ಅವತಾರ ಕಂಡು ಅಭಿಮಾನಿಗಳು ಸ್ಟ್ರಾಂಗ್ ಇತ್ತು ನನ್ನ ಬಾಡಿ ವೀಕ್ ಆಯ್ತು ನಿನ್ನ ನೋಡಿ ಅಂತಾ ಕಮೆಂಟ್ ಮಾಡುತ್ತಿದ್ದಾರೆ.

ಅಪಘಾತದಿಂದ ಚೇತರಿಸಿಕೊಂಡ ಬಳಿಕ ನಭಾ ನಟೇಶ್ ಬೆಳ್ಳಿಪರದೆಯಲ್ಲಿ ಧೂಳ್ ಎಬ್ಬಿಸುತ್ತಿದ್ದಾರೆ. ನಟ ಪ್ರಿಯಾದರ್ಶಿಗೆ ನಾಯಕಿಯಾಗಿ ನಟಿಸಿರುವ ತೆಲುಗಿನ ಡಾರ್ಲಿಂಗ್ ಸಿನಿಮಾದಲ್ಲಿ ನಭಾ ನಟೇಶ್ ಮೋಡಿ ಮಾಡಿದ್ದಾರೆ. 7 ಪಾತ್ರದಲ್ಲಿ ಪಟಾಕ ಧಮಾಕ ಸೃಷ್ಟಿಸಿದ್ದಾರೆ.

ನಭಾ ಸ್ವಯಂಭು ಎಂಬ ಪ್ಯಾನ್ ಇಂಡಿಯಾ ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ಕೆಲಸ ಕೂಡ ನಡೆಯುತ್ತಿದೆ. ನಿಖಿಲ್ ಸಿದ್ಧಾರ್ಥ್‌ಗೆ ನಾಯಕಿಯಾಗಿ ನಭಾ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಪಟಾಕ ರಾಣಿಯಂತ ರೂಲ್‌ನಲ್ಲಿಯೇ ಕಾಣಿಸಿಕೊಳ್ಳುತ್ತಿದ್ದು, ಅವರ ಲುಕ್ ವೈರಲ್ ಆಗಿದೆ.

ಕನ್ನಡ ಸಿನಿಮಾವಲ್ಲದೇ ನಭಾ ನಟೇಶ್ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ಎಲ್ಲ ಚಿತ್ರಗಳಲ್ಲಿ ಇಸ್ಮಾರ್ಟ್ ಸಿನಿಮಾ ಹೆಚ್ಚು ಗಮನ ಸೆಳೆದಿತ್ತು. ನಂತರ ಡಿಸ್ಕೋ ರಾಜಾ ಸಿನಿಮಾದಲ್ಲೂ ನಭಾ ನಟೇಶ್ ಅಭಿನಯ ಜನರಿಗೆ ಇಷ್ಟವಾಗಿತ್ತು.

ಇನ್ನಷ್ಟು ಓದಿರಿ

Scroll to Top