ಎಂತೆಂಥ ತರ್ಲೆಗಳನ್ನು ನೋಡಿರುವ ತಲೆಮಾರಿನ ʼಗೌರಿʼ ತಲ್ವಾರ್ಗೆ ಹೆದರೋದಾ?!

Picture of Cinibuzz

Cinibuzz

Bureau Report

ಸ್ಟೈಲಿಷ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ನಿರ್ದೇಶನದ ʻಗೌರಿʼ ಇದೇ ವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈ ಚಿತ್ರದ ಟ್ರೇಲರ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಟ್ರೇಲರಿನ ಕೊನೆಯಲ್ಲಿ ಹೀರೋ ಸಮರ್ ಎದುರು ನಿಂತ ವಿಲನ್ ʻತಲ್ವಾರ್ ನೋಡಿದ್ಯಾʼ ಅಂದಾಗ ʻಎಂತೆಂಥಾ ತರ್ಲೆಗಳನ್ನು ನೋಡಿರೋ ತಲೆಮಾರು ಕಣೋ ನಮ್ದು.. ಇನ್ನು, ನಿನ್ ತಲ್ವಾರ್ಗೆ ಹೆದರಿಕೊಳ್ತೀನಾ?ʼ ಎನ್ನುವ ಮಾಸ್ ಡೈಲಾಗ್ ಇದೆ. ಈ ಸಂಭಾಷಣೆ, ಸಮರ್ ಬಾಡಿ ಲಾಂಗ್ವೇಜು ಎಲ್ಲರ ಗಮನ ಸೆಳೆದಿದೆ.

ಹಾಗೆ ನೋಡಿದರೆ, ಕರ್ನಾಟಕ ಕಂಡ ಅಪ್ರತಿಮ ಬರಹಗಾರ, ಪತ್ರಕರ್ತ ಪಿ. ಲಂಕೇಶ್ ಅವರ ಮೂರನೇ ತಲೆಮಾರಿನ ಹುಡುಗ ಸಮರ್. ಇವರ ತಾತ ಪಿ. ಲಂಕೇಶ್ ಸಿನಿಮಾ, ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಇತಿಹಾಸ ಸೃಷ್ಟಿಸಿದವರು. ಲಂಕೇಶರ ಪುತ್ರ ಇಂದ್ರಜಿತ್ ಅವರು ಕೂಡಾ ಪತ್ರಿಕೋದ್ಯಮದ ಜೊತೆಜೊತೆಗೇ ಸಿನಿಮಾ ನಿರ್ದೇಶಕರಾಗಿ ಗೆದ್ದವರು. ಇದರ ಜೊತೆಗೆ ಕಿರುತೆರೆ ರಿಯಾಲಿಟಿ ಶೋಗಳಲ್ಲೂ ಇಂದ್ರಜಿತ್ ಅಪಾರ ಜನಪ್ರಿಯತೆ ಪಡೆದಿದ್ದಾರೆ. ಇಂದ್ರಜಿತ್ ಅವರು ಏನೇ ಮಾಡಿದರೂ ಅದರಲ್ಲಿ ಒಂದು ಹೊಸತನವಿರುತ್ತದೆ. ಆರಂಭದ ತುಂಟಾಟದಿಂದ ಹಿಡಿದು ಇವತ್ತಿನ ಗೌರಿ ತನಕ ಇಂದ್ರಜಿತ್ ಅನೇಕ ಹೊಸತನಗಳನ್ನು ಪರಿಚಯಿಸುತ್ತಲೇ ಬಂದಿದ್ದಾರೆ.

ಇವರ ಪ್ರತೀ ಸಿನಿಮಾದ ಹಾಡುಗಳೂ ಸೂಪರ್ ಹಿಟ್ ಆಗಿವೆ. ಸದ್ಯಕ್ಕೆ ಯಾರ ಬಾಯಲ್ಲಿ ನೋಡಿದರೂ ʻಟೈಮ್ ಬರತ್ತೆ ನಮ್ಗು ಟೈಮ್ ಬರತ್ತೆʼ ಹಾಡು ಗುನುಗುತ್ತಿದೆ. ಇದರ ಜೊತೆಗೆ ಇತರೆ ಹಾಡುಗಳೂ ಜನರ ಮೆಚ್ಚುಗೆಗೆ ಪಾತ್ರವಾಗಿವೆ. ಈ ಎಲ್ಲ ನಿಟ್ಟಿನಲ್ಲಿ ನೋಡಿದರೆ ಗೌರಿ ಎಲ್ಲರಿಗೂ ಇಷ್ಟವಾಗುವ ಸ್ಪಷ್ಟ ಕುರುಹುಗಳು ಕಾಣುತ್ತಿವ.

“ಗೌರಿ” ಚಿತ್ರದ ಮೂಲಕ ಸಮರ್ಜಿತ್ ಲಂಕೇಶ್ ಹಾಗೂ ನಾಯಕಿ ಸಾನ್ಯಾ ಅಯ್ಯರ್ ಚಂದನವನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ನೈಜ ಘಟನೆ ಆಧರಿಸಿ ನಿರ್ಮಾಣವಾಗಿರುವ ‘ಗೌರಿ’ ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ (ವಿಶೇಷ ಪಾತ್ರ), ಅಕುಲ್ ಬಾಲಾಜಿ, ಸಿಹಿ ಕಹಿ ಚಂದ್ರು, ಮುಖ್ಯಮಂತ್ರಿ ಚಂದ್ರು, ‘ಕಾಂತಾರ’ ಖ್ಯಾತಿಯ ಮಾನಸಿ ಸುಧೀರ್ ಸಂಪತ್ ಮೈತ್ರೇಯ, ಚಂದುಗೌಡ ಸೇರಿದಂತೆ ಬಹಳಷ್ಟು ಜನ ನಟಿಸಿದ್ದಾರೆ. ಚಿತ್ರಕ್ಕೆ ಎ.ಜೆ.ಶೆಟ್ಟಿ ಹಾಗೂ ಕೃಷ್ಣಕುಮಾರ್ ಛಾಯಾಗ್ರಹಣ ಮಾಡಿದ್ದಾರೆ.

ಇನ್ನಷ್ಟು ಓದಿರಿ

Scroll to Top