ದಿನಕರ್ ತೂಗುದೀಪ್ ನಿರ್ದೇಶನದ ರಾಯಲ್ ಸಿನಿಮಾ ಮೊದಲ ಹಾಡು ರಿಲೀಸ್.

Picture of Cinibuzz

Cinibuzz

Bureau Report

ದಿನಕರ್ ತೂಗುದೀಪ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಬಹುನಿರೀಕ್ಷಿತ ಸಿನಿಮಾ ರಾಯಲ್. ಜಯಣ್ಣ ಫಿಲ್ಮಂಸ್ ಬ್ಯಾನರ್ ನಡಿ ಜಯಣ್ಣ ಹಾಗೂ ಭೋಗೇಂದ್ರ ನಿರ್ಮಾಣದ ಮೊದಲ ಹಾಡು ಸರಿಗಮ ಕನ್ನಡ ಮ್ಯೂಸಿಕ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯದ ಬರೆದ ನಾನೇ ಕೃಷ್ಣ..ನಾನೇ ಶಾಮ್ ಗೀತೆಗೆ ಸಂಜಿತ್ ಹೆಗ್ಡೆ ಹಾಗೂ ಎಂ ಎಂ ಮನವಿ ಧ್ವನಿಯಾಗಿದ್ದಾರೆ. ಚರಣ್ ರಾಜ್ ಎಂ ಆರ್ ಸಂಗೀತ ನಿರ್ದೇಶನ ಮಾಡಿದ್ದು, ನಾಯಕ ವಿರಾಟ್ ಲಲನೆಯರ ಜೊತೆ ಹಾಡಿಗೆ ಹೆಜ್ಕೆ ಹಾಕಿದ್ದಾರೆ.

 

ಕಿಸ್ ಸಿನಿಮಾ ಮೂಲಕ ಕನ್ನಡ ಚಿತ್ರ ಜಗತ್ತಿಗೆ ಪರಿಚಿತರಾದ ವಿರಾಟ್ ನಾಯಕನಾಗಿ ನಟಿಸ್ತಿದ್ದು, ಸಂಜನಾ ಆನಂದ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರಘು ಮುಖರ್ಜಿ, ಛಾಯಾ ಸಿಂಗ್, ಅಚ್ಯುತ್ ಕುಮಾರ್, ರಂಗಾಯಣ ರಘು, ಪ್ರಮೋದ್ ಶೆಟ್ಟಿ, ಲವ್ ಮಾಕ್‌ಟೇಲ್ ಖ್ಯಾತಿಯ ಅಭಿಲಾಷ್ ತಾರಾಬಳಗದಲ್ಲಿದ್ದಾರೆ. ರಾಯಲ್ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದು, ಸಂಕೇತ್ ಮೈಸ್ ಅವರ ಛಾಯಾಗ್ರಹಣವಿದೆ.

ಸಂಕೇತ್ ಸಿನಿಮಾಟೋಗ್ರಫಿ ‘ರಾಯಲ್’ ಚಿತ್ರಕ್ಕಿದೆ. ಚರಣ್ ಸಂಗೀತ ಮತ್ತೊಂದು ಹೈಲೆಟ್. ಅನಿಲ್ ಮಂಡ್ಯ ಚಿತ್ರ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡುತ್ತಿದ್ದಾರೆ. ‘ಕಿಸ್’ ಸಿನಿಮಾದಲ್ಲಿ ವಿರಾಟ್ ಲವರ್ ಬಾಯ್ ಆಗಿ ಮಿಂಚಿದ್ದರು. ‘ರಾಯಲ್’ ಚಿತ್ರದಲ್ಲಿ ಪಕ್ಕಾ ಮಾಸ್, ಎನರ್ಜಿಟಿಕ್ ಹೀರೊ ಆಗಿ ಅಬ್ಬರಿಸೋಕೆ ಬರ್ತಿದ್ದಾರೆ. ಕಂಪ್ಲೀಟ್ ಫ್ಯಾಮಿಲಿ ನೋಡಬಹುದಾದ ಸಿನಿಮಾ ಇದು. ಆದಷ್ಟು ಬೇಗ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಪ್ರಯತ್ನ ನಡೀತಿದೆ. ‘ಜೊತೆ ಜೊತೆಯಲಿ’, ‘ನವಗ್ರಹ’, ‘ಸಾರಥಿ’ ರೀತಿಯ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ದಿನಕರ್ ಈ ಬಾರಿ ಮತ್ತೊಂದು ಅದ್ಭುತ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ನಿರೀಕ್ಷೆಯಿದೆ.

ಸರಿಗಮ ತೆಕ್ಕೆಗೆ ಆಡಿಯೋ ಹಕ್ಕು ಈ ಚಿತ್ರದ ಆಡಿಯೋ ಭಾರೀ ಮೊತ್ತಕ್ಕೆ ಬಿಕರಿಯಾಗಿದೆ. ಸರಿಗಮ ಮ್ಯೂಸಿಕ್ ಕಂಪನಿ ಒಳ್ಳೆ ಮೊತ್ತ ಕೊಟ್ಟು ರಾಯಲ್ ಆಡಿಯೋ ಹಕ್ಕನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ಇನ್ನಷ್ಟು ಓದಿರಿ

Scroll to Top