“REDRUM” ಚಿತ್ರದಿಂದ ಬಂತು ರೊಮ್ಯಾಂಟಿಕ್ ಸಾಂಗ್ .

Picture of Cinibuzz

Cinibuzz

Bureau Report

ಅಶೋಕ್ ದೇವನಾಂಪ್ರಿಯ, ಮೋಹನ್ ರಾಜ್ ಹಾಗೂ ಹನಿ ಚೌಧರಿ ನಿರ್ಮಾಣದ, ಪ್ರಮೋದ್ ಜೋಯಿಸ್ ನಿರ್ದೇಶನದ ಹಾಗೂ ಅಫ್ಜಲ್ ಕಾರ್ಯಕಾರಿ ನಿರ್ಮಾಪಕರಾಗಿರುವ “REDRUM” ಚಿತ್ರದ “ಅನುಪಮ” ಎಂಬ ರೊಮ್ಯಾಂಟಿಕ್ ಸಾಂಗ್ FMD ಆಡಿಯೋ ಮೂಲಕ ಬಿಡುಗಡೆಯಾಗಿದೆ. ನಿರ್ದೇಶಕರೆ ಬರೆದಿರುವ ಈ ಹಾಡನ್ನು “ಸರಿಗಮಪ” ಖ್ಯಾತಿಯ ದರ್ಶನ್ ನಾರಾಯಣ್ ಹಾಡಿದ್ದಾರೆ. ಹಾಡು‌ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಇದು ನನ್ನ ನಿರ್ದೇಶನದ ಎರಡನೇ ಚಿತ್ರ ಎಂದು ಮಾತನಾಡಿದ ನಿರ್ದೇಶಕ ಪ್ರಮೋದ್ ಜೋಯಿಸ್, ಇದೊಂದು ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಕಥೆ. ಸಿನಿಮಾದೊಳಗೆ ನಡೆಯುವ ಸಿನಿಮಾ ಕಥೆಯೂ ಹೌದು‌. ನಿರ್ದೇಶಕನೊಬ್ಬ ತನ್ನ ಟ್ರೇಲರ್ ಬಿಡುಗಡೆ ಮಾಡಿದಾಗ, ಆ ಟ್ರೇಲರ್ ಬಾರಿ ಸಂಚಲನ ಉಂಟು ಮಾಡುತ್ತದೆ‌. ಆ ಮೂಲಕ ಚಿತ್ರದ ಕಥೆ ಶುರುವಾಗುತ್ತದೆ. ಉತ್ತರ ಭಾರತದಲ್ಲಿ ನಡೆದ ನೈಜಘಟನೆ ಆಧರಿಸಿರುವ ಈ ಚಿತ್ರದ ಅರ್ಧಕ್ಕೂ ಹೆಚ್ಚಿನ ಭಾಗದ ಚಿತ್ರೀಕರಣ ಉತ್ತರಭಾರತದಲ್ಲೇ ನಡೆದಿದೆ‌. “REDRUM” ಹೆಸರನ್ನು ನೀವು ಕನ್ನಡಿಯಲ್ಲಿ ನೋಡಿದಾಗ “MURDER” ಎಂದು ಆಗುತ್ತದೆ‌. ಕ್ರೈಮ್ ಥ್ರಿಲ್ಲರ್ ಚಿತ್ರಕ್ಕೆ ಇದು ಸೂಕ್ತ ಶೀರ್ಷಿಕೆಯೂ ಆಗಿದೆ. ಕಾರ್ಯಕಾರಿ ನಿರ್ಮಾಪಕರೂ ಆಗಿರುವ ಅಫ್ಜಲ್, ಮುಂಬೈನ ರಾಜವೀರ್, ಪ್ರಾಚಿ ಶರ್ಮ, ದ್ರಿತೇಶ್, ವಿನಯ್ ಸೂರ್ಯ, ಯತಿರಾಜ್, ಮಧುರ ಮುಂತಾದವರು ತಾರಾಬಳಗದಲ್ಲಿದ್ದಾರೆ. ಎರಡು ಹಾಡುಗಳು ಚಿತ್ರದಲ್ಲಿದ್ದು, ಇಂದು ನಾನೇ ಬರೆದಿರುವ ಮೊದಲ ಹಾಡು ಬಿಡುಗಡೆಯಾಗಿದೆ. ಚೇತನ್ ಕೃಷ್ಣ ಸಂಗೀತ ನೀಡಿರುವ ಈ ಹಾಡನ್ನು ದರ್ಶನ್ ನಾರಾಯಣ್ ಹಾಡಿದ್ದಾರೆ. ಸದ್ಯದಲ್ಲೇ ಚಿತ್ರ ಸೆನ್ಸಾರ್ ಮುಂದೆ ಹಾಜರಾಗಲಿದೆ ಎಂದರು‌.

ನಾನು ಕಾರ್ಯಕಾರಿ ನಿರ್ಮಾಪಕನಾಗಿರುವುದರ ಜೊತೆಗೆ ಈ ಚಿತ್ರದ ಪ್ರಮುಖಪಾತ್ರದಲ್ಲೂ ನಟಿಸಿದ್ದೇನೆ. ಹೈದರಾಬಾದ್ ನ FMD ಮ್ಯೂಸಿಕ್ ನ ಮೂಲಕ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಈ ಚಿತ್ರದ ಸಹ ನಿರ್ಮಾಪಕರೂ ಆಗಿರುವ ರಮೇಶ್ ಭಂಡಾರಿ ಅವರ ಸಾರಥ್ಯದ ಈ ಆಡಿಯೋ ಕಂಪನಿ ನಮ್ಮ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೂ ಅಡಿಯಿಟ್ಟಿದೆ. ನವೆಂಬರ್ ವೇಳಗೆ ಚಿತ್ರ ತೆರೆಗೆ ಬರಲಿದೆ ಎಂದು ನಟ ಹಾಗೂ ಕಾರ್ಯಕಾರಿ ನಿರ್ಮಾಪಕ ಅಫ್ಜಲ್ ತಿಳಿಸಿದರು.

ನಟ ದ್ರಿತೀಶ್ ಹಾಗೂ ನಟಿ ಪ್ರಾಚಿ ಶರ್ಮ ಹಾಡಿನ‌ ಅನುಭವ ಹಂಚಿಕೊಂಡರು. ದರ್ಶನ್ ನಾರಾಯಣ್ ಹಾಡಿನ ಬಗ್ಗೆ ಮಾತನಾಡಿ, ನಾಲ್ಕು ಸಾಲುಗಳನ್ನು ಹಾಡಿದರು. ಸಹ ನಿರ್ಮಾಪಕ ಹಾಗೂ ಮ್ಯೂಸಿಕ್ ಸಂಸ್ಥೆ ಮಾಲೀಕರಾದ ರಮೇಶ್ ಭಂಡಾರಿ, ಶ್ರೀನಿವಾಸ್ ಹಾಗೂ ಛಾಯಾಗ್ರಾಹಕ ಶಂಕು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು

ಇನ್ನಷ್ಟು ಓದಿರಿ

Scroll to Top