ಬಾಲಿವುಡ್ ಸ್ಟಾರ್ ಸೋನು ಸೂದ್ ನಟಿಸಿರುವ, ಹಾಸನ್ ರಮೇಶ್ ನಿರ್ದೇಶನದ ‘ಶ್ರೀಮಂತ’ ಚಿತ್ರದ ವಿಶೇಷ ಪ್ರದರ್ಶನ ಸೆ.29ರಂದು ದುಬೈನಲ್ಲಿ ನಡೆಯಲಿದೆ. ನಮ್ಮ ರೈತರ ಪರಿಶ್ರಮ, ಬದುಕು ಬವಣೆ ಹಾಗೂ ಹೋರಾಟದ ಕಥನವನ್ನು ಒಳಗೊಂಡ ಈ ಚಿತ್ರ ವಿಮರ್ಶಕರ ಹಾಗೂ ವೀಕ್ಷಕರಿಂದ ಪ್ರಶಂಸೆ ಗಳಿಸಿ ಯಶಸ್ವಿ ಪ್ರದರ್ಶನ ಕಂಡಿತ್ತು. ಸೋನು ಸೂದ್ ಅಭಿನಯ ಹಾಗೂ ಹಂಸಲೇಖ ಅವರ ಸಾಹಿತ್ಯ, ಸಂಗೀತದ ಹಾಡುಗಳು ಶ್ರೀಮಂತ ಚಿತ್ರದ ಹೈಲೈಟ್ ಆಗಿತ್ತು.

ದುಬೈನ ಅಲ್ ಘುರೈರ್ ಸೆಂಟರ್ ನಲ್ಲಿ ಸೆ.29ರ ಮ.2ಗಂಟೆಗೆ ನಡೆಯಲಿರುವ ಶ್ರೀಮಂತ ಸ್ಪೆಷಲ್ ಶೋಗೆ ಸಂಗೀತ ಸಂಯೋಜಕ ಸಾಧು ಕೋಕಿಲ, ನಿರ್ದೇಶಕ ಹಾಸನ್ ರಮೇಶ್, ನಿರ್ಮಾಪಕ ಸಂಜಯ್ ವಿ.ಬಾಬು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.












































