ಕೊರಗಜ್ಜ ಚಿತ್ರ ವೀಕ್ಷಿಸಿ ಫಿದಾ ಆಗಿರುವ ನಿರ್ಮಾಪಕರಿಂದ ನಿರ್ದೇಶಕ ಸುಧೀರ್ ಅತ್ತಾವರ್ ಗೆ ಕಿಯಾ ಕೇರನ್ಸ್ ಗಿಫ್ಟ್!!

Picture of Cinibuzz

Cinibuzz

Bureau Report

ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫ಼ಿಲ್ಮ್ಸ್ ಬ್ಯಾನರ್ ನಡಿ ಬಹುನಿರೀಕ್ಷಿತ, ಬಹುಕೋಟಿ ಬಜೆಟ್ ನ “ಕೊರಗಜ್ಜ” ಸಿನಿಮಾದ ಮೊದಲ ಪ್ರತಿ ಇನ್ನೇನು ಕೈ ಸೇರಲಿದೆ ಎನ್ನುವ ಸಂದರ್ಭದಲ್ಲಿ , ಸಿನಿಮಾ ನೋಡಿ ನಿರ್ಮಾಪಕ ತ್ರಿವಿಕ್ರಮ ಸಪಲ್ಯರವರು , ಸಿನಿಮಾದ ಗುಣಮಟ್ಟ, ತಾಂತ್ರಿಕತೆ ಮತ್ತು ಮಾಸ್ ಅಪೀಲ್ ಗೆ ಫಿದಾ ಆಗಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ನಿರ್ದೇಶಕ ಸುಧೀರ್ ಅತ್ತಾವರ್ ರವರಿಗೆ ಟಾಪ್ ಎಂಡ್ ಕಿಯಾ ಕೇರನ್ಸ್ ಕಾರನ್ನೇ ಗಿಫ಼್ಟ್ ಮಾಡಿದ್ದಾರೆ. ನಿರ್ದೇಶಕರ ಸ್ರಜನಶೀಲ ತಾಂತ್ರಿಕ ನೈಪುಣ್ಯತೆಯೊಂದಿಗೆ ಸುಮಾರು 15ಕೋಟಿ ಬಜೆಟ್ ನ ಈ ಸಿನೆಮಾ ಯಾವ ಮಟ್ಟದಲ್ಲಿ ಮೂಡಿಬಂದಿರಬಹುದೆನ್ನುವುದಕ್ಕೆ ಇದು ಉದಾಹರಣೆ” .- ಎಂದು ಖ್ಯಾತ ಕಲಾವಿದೆ ಭವ್ಯರವರು ಈ ಸಂದರ್ಭದಲ್ಲಿ ಹೇಳಿದರು.ತಾನು ಇಂತಹ ಸಿನಿಮಾದಲ್ಲಿ ಪಾರ್ಟ್ ಮಾಡಿದ್ದು ಇನ್ನಿಲ್ಲದ ಹೆಮ್ಮೆ ಮತ್ತು ಪುನೀತಭಾವ ಮೂಡಿಸಿದೆ ಎಂದು ಮಾತು ಸೇರಿಸಿದರು.

ನಿರ್ಮಾಪಕರಾದ ತ್ರಿವಿಕ್ರಮರವರು ತಮ್ಮ ಮಾತು ಮುಂದುವರೆಸುತ್ತಾ; ” ನನ್ನ ತ್ರಿವಿಕ್ರಮ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ಈ ಮಟ್ಟದಲ್ಲಿ ಸಿನಿಮಾ ಒಂದು ಮೂಡಿ ಬರುತ್ತದೆ ಎಂದು ನಾನು ಊಹಿಸಿರಲಿಲ್ಲ. “ಕೊರಗಜ್ಜ” ಸಿನಿಮಾ ಎಲ್ಲಾ ಊಹೆಯನ್ನು ಮೀರಿ ಅದ್ಭುತ ರೀತಿಯಲ್ಲಿ ಮೂಡಿಬಂದಿದೆ. ಭಾರತೀಯ ಚಿತ್ರರಂಗದಲ್ಲೇ ಇದೊಂದು ವಿಶಿಷ್ಟ ಸಿನೆಮಾ ಆಗಿ ಮೂಡಿ ಬಂದಿದೆ . ನಿರ್ದೇಶಕರು ಸುಮಾರು ಒಂದುವರೆ ವರ್ಷ ಗಳ ಕಾಲ ರೀಸರ್ಚ್ ಮಾಡಿ ಎಂಟು ನೂರು ವರ್ಷದ ಹಿಂದೆ ಬದುಕಿದ್ದ 23-24 ವರ್ಷ ಪ್ರಾಯದ “ತನಿಯಾ” ಎನ್ನುವ ಆದಿವಾಸಿ ಹುಡುಗ “, ಮಹಾನ್ ಶಕ್ತಿ “ಕೊರಗಜ್ಜ” ಆಗಿ ಬೆಳಗುತ್ತಿರುವ ಬಗೆ ಹೇಗೆ ಎನ್ನುವುದನ್ನು ಕಣ್ಣಿಗೆ ಕಟ್ಟುವ ರೀತಿಯಲ್ಲಿ ವಿಭಿನ್ನ ಜ಼ೋನರ್ ನಲ್ಲಿ ಈ ಸಿನಿಮಾವನ್ನು ಮಾಡಿದ್ದಾರೆ…..! ಈ ಮಹಾನ್ ಶಕ್ತಿಯ ನ್ನು ಮರುಸ್ರಷ್ಟಿ ಮಾಡಿ ಸಸ್ಪೆನ್ಸ್, ಉತ್ಸುಕತೆ, ಥ್ರಿಲ್ಲರ್, ಊಹಿಸಲಾರದ ತಿರುವುಗಳ ಕಥಾ ಹಂದರ ಮತ್ತು ಬಿಗಿದಿಟ್ಟುಕೊಳ್ಳುವ ಆಕರ್ಷಣೀಯ ಸ್ಕ್ರೀನ್ ಪ್ಲೆ ಸಿನಿಮಾವನ್ನು ಬೇರೆಯೇ ಮಜಲಿಗೆ ಕೊಂಡೊಯ್ದಿದೆ.

ಕಬೀರ್ ಬೇಡಿ ಅಭಿನಯಿಸಿದ್ದ, ನೂರಾರು ಕಲಾವಿದರನ್ನು ಬಳಸಿಕೊಂಡು ಮೈನವಿನೇಳಿಸುವಂತೆ ಚಿತ್ರೀಕರಿಸಿದ್ದ ಯುದ್ಧ ಭೂಮಿಯ ಪರಿಕಲ್ಪನೆಯಂತೂ ಜಗತ್ತಿನ ಯಾವುದೇ “ವಾರ್” ಸಿನೆಮಾ ಸ್ರಷ್ಟಿಸುವ ಸಂಚಲನವನ್ನು “ಕೊರಗಜ್ಜ” ಸಿನಿಮಾ ಸ್ರಷ್ಟಿಸಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡರು.ಯುದ್ಧ ಸನ್ನಿವೇಷವನ್ನು ಚಿತ್ರೀಕರಿಸುವ ಸಮಯದಲ್ಲಿ ಕಬೀರ್ ಬೇಡಿಯವರು ಸುಧೀರ್ ಅತ್ತಾವರ್ ರನ್ನು”ವಾಟರ್ ವರ್ಲ್ಡ್” ಚಿತ್ರದ ಹಾಲಿವುಡ್ ನಿರ್ದೇಶಕ ಕೆವಿನ್ ಹಾಲ್ ರೆಯ್ನಾಲ್ಡ್ಸ್ ಜೊತೆ ಯಾಕೆ ಕಂಪೇರ್ ಮಾಡಿದ್ದರು ಎನ್ನುವುದು ಈಗ ತಿಳಿದು ಬರುತ್ತಿದೆ ಎಂದು ತ್ರಿವಿಕ್ರಮರವರು ನೆನಪಿಸಿ ಕೊಂಡರು.

ನಿರ್ದೇಶನ ಮಾತ್ರವಲ್ಲದೆ, ಸಿನೆಮಾಗೆ ಕಲಾ ನಿರ್ದೇಶನ, ಕಾಸ್ಟ್ಯೂಮ್ ಹಾಗೂ ಮೇಕಪ್ ಡಿಸೈನ್ ಕೂಡಾ ಸುಧೀರ್ ಅತ್ತಾವರ್ ಅಧ್ಭುತವಾಗಿ ಮಾಡಿದ್ದಾರೆ ಎಂದು ತಮ್ಮ ನಿರ್ದೇಶಕನ ಮೇಲೆ ಹೆಮ್ಮೆ ಯ ಮಾತುಗಳನ್ನು ಹೇಳಿದರು. ಸುಧೀರ್ ರವರು ದೇಶಾದ್ಯಂತ ನೂರಾರು ನಾಟಕ ಪ್ರದರ್ಶನಗಳಲ್ಲಿ ಅಭಿನಯ, ಐವತ್ತರಷ್ಟು ನಾಟಕಗಳ ನಿರ್ದೇಶನ, ಮುಂಬಾಯಿಯ “ಇಪ್ಟಾ” ಮೊದಲಾದ ಸಂಸ್ಥೆಗಳ ನಂಟು.ಹೀಗೆ ರಂಗಭೂಮಿಯಲ್ಲಿ ಸಾಕಷ್ಟು ಪಳಗಿದ ಅವರ ಅನುಭವವೇ ಸಿನಿಮಾವನ್ನು ಈ ಮಟ್ಟಕ್ಕೆ ಕೊಂಡೊಯ್ದಿದೆ- ಎಂದು ಸೇರಿಸಿದರು

“ಕೊರಗಜ್ಜ” ಸಿನಿಮಾ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಹೊಂದಲು ವೇದಿಕೆ ಸಜ್ಜಾಗುತ್ತಿದೆ.

ಇನ್ನಷ್ಟು ಓದಿರಿ

Scroll to Top