‘ದೇವರು ರುಜು ಮಾಡಿದನು’ ಎಂದ ಸಿಂಪಲ್ ಸುನಿ…ಬೆಳ್ಳಿಪರದೆಗೆ ನವನಾಯಕ ಪರಿಚಯ

Picture of Cinibuzz

Cinibuzz

Bureau Report

ಜನರ ನಾಡಿಮಿಡಿತವನ್ನು ಅರಿತಿರುವ, ನಮ್ಮ ನಡುವೆ ನಡೆಯುವ ಘಟನೆಯನ್ನು ನಿರ್ಮಾಪಕರಿಗೆ ಹೊರೆಯಾಗದೆ ದೃಶ್ಯ ರೂಪಕ್ಕೆ ಇಳಿಸುವ ನಿರ್ದೇಶಕರಲ್ಲಿ ನಿಸ್ಸೀಮರು ಸಿಂಪಲ್ ಸುನಿ.. ಅಪಾರ ಭಾಷಾಭಿಮಾನ ಹೊಂದಿರುವ ಕೆಲಸಲ್ಲಿ ಬದ್ಧತೆ, ಹಾಗೂ ಶುದ್ಧತೆ ತೋರುವ ನಿರ್ದೇಶಕ ಸುನಿ ಈಗ ದೇವರು ರುಜು ಮಾಡಿದನು ಎನ್ನುತ್ತಿದ್ದಾರೆ. ಕುವೆಂಪುರವರ ಆಶೀರ್ವಾದದೊಂದಿಗೆ ಅವರ ದೇವರು ರುಜು ಮಾಡಿದನು ಎಂಬ ರಸವತ್ತಾದ ಪದ್ಯದ ಸಾಲನ್ನು ತಮ್ಮ ಮುಂದಿನ ಚಿತ್ರದ ಶೀರ್ಷಿಕೆಯಾಗಿಸಿದ್ದಾರೆ.

ಸಿಂಪಲ್ ಸುನಿ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ದೇವರು ರುಜು ಮಾಡಿದನು ಚಿತ್ರ ಮೂಲಕ ಬೆಳ್ಳಿಪರದೆಗೆ ನವ ನಾಯಕನ್ನು ಪರಿಚಯಿಸಿದ್ದಾರೆ. ರಂಗಭೂಮಿ ಕಲಾವಿದರಾಗಿರುವ, ಅಪಾರ ಸಿನಿಮಾ ಪ್ರೀತಿ ಹೊಂದಿರುವ ವೀರಾಜ್ ಅವರು ಹೀರೋ ಆಗಿ ಸ್ಯಾಂಡಲ್ ವುಡ್ ಗೆ ಅಡಿ ಇಡುತ್ತಿದ್ದಾರೆ. ಕೈಯಲ್ಲಿ ಗಿಟಾರ್ ಹಿಡಿದು ರಕ್ತಸಿಕ್ತರಾಗಿ ಕಾಣಿಸಿಕೊಂಡಿರುವ ವೀರಾಜ್ ಗೆ ಸುನಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿಂಪಲ್ ಸುನಿ ಅವರ ಕಥನ, ವಚನ, ರಚನ ನಿರ್ದೇಶನ ಈ ಚಿತ್ರಕ್ಕಿದೆ.

ಪುಟ್ಟದೊಂದು ಝಲಕ್ ಮೂಲಕ ಹೀರೋ ಹಾಗೂ ಟೈಟಲ್ ರಿವೀಲ್ ಮಾಡಲಾಗಿದೆ. ಈಗಾಗಲೇ ನಾಯಕ ವೀರಾಜ್ ಟೀಸರ್ ಶೂಟ್ ಮಾಡಲಾಗಿದೆ. ರಕ್ತಚರಿತ್ರೆ ಜೊತೆಗೆ ಸಂಗೀತದ ಕಥೆಯನ್ನು ದೇವರು ರುಜು ಮಾಡಿದನು ಸಿನಿಮಾ ಮೂಲಕ ಸುನಿ ತೆರೆಯಲ್ಲಿ ಅನಾವರಣ ಮಾಡಲು ಹೊರಟಿದ್ದಾರೆ. ಇದೇ ತಿಂಗಳ 20ರಂದು ಸಿನಿಮಾದ ಮುಹೂರ್ತ ನಡೆಯಲಿದ್ದು, ಮುಹೂರ್ತದ ನಂತರ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ.

ಗ್ರೀನ್ ಹೌಸ್ ಮೂವೀಸ್ ಬ್ಯಾನರ್ ನಡಿಯಲ್ಲಿ ಬರ್ತಿರುವ ದೇವರು ರುಜು ಮಾಡಿದನು ಸಿನಿಮಾಗೆ ಗೋವಿಂದ್ ರಾಜ್ ಸಿಟಿ ನಿರ್ಮಾಣ ಮಾಡುತ್ತಿದ್ದಾರೆ. ಜೆಜೆ ಮತ್ತು ಜೇಡ್ ಸ್ಯಾಂಡಿ ಸಂಗೀತ ನಿರ್ದೇಶನ, ಸಂತೋಷ್ ರೈ ಪತಾಜಿ ಛಾಯಾಗ್ರಹಣ, ವಿನಯ್ ಸಂಕಲನ ಚಿತ್ರಕ್ಕಿದೆ. ಬೆಂಗಳೂರು, ಉತ್ತರ ಕನ್ನಡ, ಗೋವಾ ಸುತ್ತಮುತ್ತ ದೇವರು ರುಜು ಮಾಡಿದನು ಚಿತ್ರದ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಇನ್ನಷ್ಟು ಓದಿರಿ

Scroll to Top