ಶ್ರೀಮುರಳಿ ಬರ್ತಡೇಗೆ ‘ಪರಾಕ್’ ಸಿನಿಮಾ ಅನೌನ್ಸ್…

Picture of Cinibuzz

Cinibuzz

Bureau Report

ಹೊಸ ಪ್ರತಿಭೆಗಳ ಜೊತೆ ಕೈ ಜೋಡಿಸಿದ ಶ್ರೀಮುರಳಿ ಬರ್ತಡೇಗೆ ಪರಾಕ್ ಸಿನಿಮಾ ಘೋಷಣೆ.

ರೋರಿಂಗ್ ಸ್ಟಾರ್ ಶ್ರೀಮುರಳಿ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಶ್ರೀ, ಬರ್ತಡೇ ಪ್ರಯುಕ್ತ ‘ಪರಾಕ್’ ಎಂಬ ಹೊಸ ಚಿತ್ರ ಘೋಷಣೆಯಾಗಿದೆ. ಒಂದು ಕೈಯಲ್ಲಿ ಗನ್ ಹಿಡಿದು ಬೆನ್ನು ತೋರಿಸ್ತಿರುವ ಶ್ರೀ, ಬೆನ್ನಿಗೆ ಪಿಸ್ತೂಲ್ ಹಾಕಿ ಪ್ರತ್ಯಕ್ಷರಾಗಿದ್ದಾರೆ.

ನವ ನಿರ್ದೇಶಕ ಹಾಲೇಶ್ ಕೋಗುಂಡಿ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಒಂದಷ್ಟು ಕಿರು ಚಿತ್ರಗಳನ್ನು ನಿರ್ದೇಶಿಸಿರುವ ಅನುಭವವಿರುವ ಹಾಲೇಶ್, ಪರಾಕ್ ಸಿನಿಮಾ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.

ಮಾರ್ಚ್ ನಲ್ಲಿ ಪರಾಕ್ ಚಿತ್ರದ ಶೂಟಿಂಗ್ ಶುರುವಾಗಲಿದೆ. ದೊಡ್ಡ ಬಜೆಟ್ , ದೊಡ್ಡ ತಾರಾಗಣದಲ್ಲಿ ಚಿತ್ರ ನಿರ್ಮಾಣ ಮಾಡಲು ಚಿತ್ರ ಸಜ್ಜಾಗುತ್ತಿದೆ. ಬ್ರ್ಯಾಂಡ್ ಸ್ಟುಡಿಯೋಸ್ ಬ್ಯಾನರ್ ನಡಿ ಪರಾಕ್ ಸಿನಿಮಾ ನಿರ್ಮಾಣವಾಗುತ್ತಿದೆ.

ಇನ್ನಷ್ಟು ಓದಿರಿ

Scroll to Top