ಅಪಘಾತ ರಹಿತ ಚಾಲನೆ ಮಾಡಿದ 15 ಚಾಲಕರಿಗೆ ಸಾರಥಿ ನಂ1 ಪ್ರಶಸ್ತಿ ಪ್ರದಾನಅಪಘಾತ ತಗ್ಗಿಸುವ ಮಹತ್ವಾಕಾಂಕ್ಷೆಯ ಗುರಿ ಈಡೇರಿಲ್ಲ – ಸಚಿವ ರಾಮಲಿಂಗಾ ರೆಡ್ಡಿ

Picture of Cinibuzz

Cinibuzz

Bureau Report

ಬೆಂಗಳೂರು, ಜ, 11; ಜಗತ್ತಿನಲ್ಲಿ 2025 ರ ವೇಳೆಗೆ ಅಪಘಾತಗಳ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುವ ಮಹತ್ವಾಕಾಂಕ್ಷೆ ಗುರಿ ಹಮ್ಮಿಕೊಳ್ಳಲಾಗಿತ್ತಾದರೂ ಈ ವರೆಗೆ ಅಪಘಾತಗಳ ಪ್ರಮಾಣ ಕಡಿಮೆಯಾಗಿಲ್ಲ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ನಗರದ ಕೊಂಡಜ್ಜಿ ಬಸಪ್ಪ ಆಡಿಟೋರಿಯಂ ಹಾಲ್ ನಲ್ಲಿ ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಮತ್ತು ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ನಿಂದ ಅಪಘಾತ ರಹಿತ ಚಾಲನೆ ಮಾಡಿ ಅನನ್ಯ ಸೇವೆ ಸಲ್ಲಿಸಿದ 25 ಚಾಲಕರಿಗೆ ಸಾರಥಿ ನಂ 1 ಪ್ರಶಸ್ತಿ, ಬೆಳ್ಳಿ ಪದಕ, 25 ಮಂದಿಗೆ ಕಲಾ ಸೇವಾ ರತ್ನ ಮತ್ತು ಸಂಗೀತ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಚಾಲಕರು ಜಾಗರೂಕತೆಯಿಂದ ವಾಹನ ಚಾಲನೆ ಮಾಡುವ ಮೂಲಕ ಹೆಚ್ಚಿನ ಅಪಾಯಗಳನ್ನು ತಪ್ಪಿಸಬೇಕು ಎಂದಪ್ರತಿವರ್ಷ ದೇಶದಲ್ಲಿ ಅಪಘಾತಗಳಿಂದ ಹೆಚ್ಚಿನ ಮಂದಿ ಸಾವಿಗೀಡಾಗುತ್ತಿದ್ದು, ಕೈಕಾಲು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಇದರಿಂದ ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತಿದೆ. ಅಪಘಾತ ಸಂಭವಿಸಬಾರದು ಎಂಬ ಪ್ರತಿಜ್ಞೆ ಕೈಗೊಂಡು ವಾಹನ ಚಾಲನೆ ಮಾಡಿದರೆ ಸಾಕಷ್ಟು ತೊಂದರೆಗಳಿಂದ ಮುಕ್ತಿಹೊಂದಬಹುದು. ಅಪಘಾತಗಳ ಸಂಖ್ಯೆ ತಗ್ಗಿದರೆ ಅಭಿವೃದ್ಧಿಗೆ ಪೂರಕವಾಗಲಿದೆ. ಜಿಡಿಪಿ ಬೆಳವಣಿಗೆಗೂ ಸಹಕಾರಿಯಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಸಂಸ್ಥಾಪಕ ಅಧ್ಯಕ್ಷ. ನಟ, ನಿರ್ಮಾಪಕ ಗಂಡಸಿ ಸದಾನಂದ ಸ್ವಾಮಿ, ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ರಾಜ್ಯಾಧ್ಯಕ್ಷ ಸಂತೋಷ್ ಕುಮಾರ್, ಪ್ರಧಾನ ಕಾರ್ಯದರ್ಶಿ ರಾಜು ಕನ್ನಡಿಗ, ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಹಿರಿಯ ನಿರ್ಮಾಪಕ ಓಂ ಸಾಯಿ ಪ್ರಕಾಶ್, ಗೋವು ಸಂರಕ್ಷಣಾ ಹೋರಾಟಗಾರ ಮಹೇಂದ್ರ ಮನೋತ್, ಹಿರಿಯ ಕಲಾವಿದ ವೈಜನಾಥ ಬಸಪ್ಪ ಬಿರಾದರ್, ನಟ ಮೂಗು ಸುರೇಶ್, ಗಿಚ್ಚಿಗಿಲಿಗಿಲಿ ಖ್ಯಾತಿಯ ಚಂದ್ರಪ್ರಭ, ವಿನೋದ್ ಗೊಬ್ಬರಗಾಲ, ರಜನಿಕಾಂತ್ ಜತೆ ಚಾಲಕರಾಗಿ ಸೇವೆ ಸಲ್ಲಿಸಿದ್ದ ರಾಜ್ ಬಹಾದ್ದೂರ್, ನಿವೃತ್ತ ಎಸಿಪಿ ಲೋಕೇಶ್ವರ್ ಮತ್ತಿತರರು ಉಪಸ್ಥಿತರಿದ್ದರು.

ಇನ್ನಷ್ಟು ಓದಿರಿ

Scroll to Top