ಅವನಿರಬೇಕಿತ್ತು Song release

Picture of Cinibuzz

Cinibuzz

Bureau Report

ಅವನಿರಬೇಕಿತ್ತು ಚಿತ್ರಕ್ಕೆ ರೊರಿಂಗ್ ಸ್ಟಾರ್ ಸಾಥ್ ಅಂದಕಾಲತ್ತಿಲ್ಲೆ ಹಾಡು ರಿಲೀಸ್ ಮಾಡಿದ ಶ್ರೀ ಮುರಳಿ ರೆಟ್ರೋ ಸ್ಟೈಲ್ ಡ್ಯಾನ್ಸಿಂಗ್ ಡ್ಯುಯೆಟ್ ನೋಡಿ ಕೊಂಡಾಡಿದ ಬಘೀರ.

ಟೈಟಲ್ ನಲ್ಲೆ ಗಮನ ಸೆಳೆದಿದ್ದ “ಅವನಿರಬೇಕಿತ್ತು” ಚಿತ್ರ ಈಗ ಬಿಡುಗಡೆಗೆ ಸಿದ್ದವಾಗಿದ್ದು. ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿಯವರು ಅಂದಕಾಲತ್ತಿಲ್ಲೆ ಅನ್ನೋ ರೆಟ್ರೋ ಸ್ಟೈಲ್ ಡ್ಯಾನ್ಸಿಂಗ್ ಡ್ಯುಯೆಟ್  ಹಾಡನ್ನ  ನೋಡಿ ಕೊಂಡಾಡಿದ್ದಾರೆ. ಜೊತೆಗೆ ಇದೊಂದು ಟ್ರೆಂಡ್ ಸೆಟ್ ಮಾಡುತ್ತೆ ನಂಬಿ ಅಂತ ಭವಿಷ್ಯ ನುಡಿದಿದ್ದಾರೆ.

ಅಂದಕಾಲತ್ತಿಲ್ಲೆ ಹೊಸತನದ ಸಾಹಿತ್ಯವಿದೆ. ಈಗಾಗಲೆ ಕೇಳುಗರಿಂದ ಸೈ ಎನಿಸಿಕೊಂಡು ಹಾಡು  ಸೋಶಿಯಲ್ ಮಿಡಿಯಾದಲ್ಲಿ ದೊಡ್ಡಮಟ್ಟದ ಸದ್ದು ಮಾಡುತ್ತಿದ್ದೆ.
ಹಳೆಗನ್ನಡ ಹಾಗೂ ಹೊಸಗನ್ನಡ ಎರಡನ್ನೂ ಹದಗೊಳಿಸಿ ಉತ್ತಮವಾಗಿ ಸಾಹಿತ್ಯ ಬರೆದಿದ್ದಾರೆ ನಿರ್ದೇಶಕ ಅಶೋಕ್‌ ಸಾಮ್ರಾಟ್. ಹಾಡಿನ ಮೆಕ್ ಓವರ್ ಉತ್ತಮವಾಗಿದ್ದು, ಜನಕಾರ್ ಸಂಸ್ಥೆ ಆಡಿಯೊ ಹಕ್ಕನ್ನು ಪಡೆದಿದೆ.

ನೋವಿಕಾ ಸಿನಿ ಕ್ರೀಯೆಶನ್ ನಲ್ಲಿ ನಿರ್ಮಾಣಗೊಂಡ ಈ ಚಿತ್ರಕ್ಕೆ ಅಶೋಕ್ ಸಾಮ್ರಾಟ್ ಅವರ ಚೊಚ್ಚಲ ನಿರ್ದೇಶನದ ಜೊತೆಗೆ ಸಾಹಿತ್ಯವೂ ಇದೆ.ವಿಜಯ ಪ್ರಕಾಶ್ ದ್ವನಿಯಾಗಿರುವ ಈ “ಅಂದಾಕಾಲತಲ್” ಹಾಡನ್ನು ಸಂಗೀತ ಸಂಯೋಜಿಸದವರು ಲೋಕಿ ತವಸ್ಯ. ಅಂದಹಾಗೆ ದೇವರಾಜ್ ಪೂಜಾರಿ , ಪೃಥ್ವಿ ಮಾಲೂರ್ ಛಾಯಾಗ್ರಹಣವಿರುವ  ಈ ಚಿತ್ರಕ್ಕೆ ಬಂಡವಾಳ ಹೂಡಿದವರು ನವ ನಿರ್ಮಾಪಕ  ಮುರಳಿ ಬಿ.ಟಿ.

ತಾರಾಗಣದಲ್ಲಿ ಸೌಮ್ಯ ಜಾನ್ ,ಜೈ ಸಿಂಹ, ಪ್ರಶಾಂತ್ ಸಿದ್ದಿ, ಕಿರಣ್ ನಾಯ್ಕ್,  ಭರತ್ ,ಲಕ್ಷ್ಮೀ ದೇವಮ್ಮ, ಮಂಜುನಾಥ್,  ಮುಂತಾದವರಿದ್ದು. ಹಾಡನ್ನು ಜನಕಾರ್ ಯೂ ಟ್ಯೂಬ್ ಚಾನಲ್ ನಲ್ಲಿ ನೋಡಲು ಲಭ್ಯವಿದೆ.

Extra Details
Movie name : ಅವನಿರಬೇಕಿತ್ತು / AVANIRABEKITTU

Production name : ನೋವಿಕಾ ಸಿನಿ ಪ್ರೊಡಕ್ಷನ್ಸ್ / Novika cine productions

Producer : ಮುರಳಿ ಬಿ.ಟಿ / Murali BT

Writer & Director :ಅಶೋಕ್ ಸಾಮ್ರಾಟ್
/ Ashok Samrat

Music : ಲೋಕಿ ತವಸ್ಯ/  Loki Tavasya

DOP : ದೇವರಾಜ್ ಪೂಜಾರಿ-/Devraj poojary

Additional DOP: ಪೃಥ್ವಿ ಮಾಲೂರು  – Prithvi malur

ತಾರಾಗಣ :, ಸೌಮ್ಯ ಜಾನ್ /Sowmya john, ಜೈ ಸಿಂಹ, ಪ್ರಶಾಂತ್ ಸಿದ್ದಿ, ಕಿರಣ್ ನಾಯ್ಕ್, ಲಕ್ಷ್ಮೀ ದೇವಮ್ಮ, ಭರತ್.

ಗಾಯಕರು :ವಿಜಯ್ ಪ್ರಕಾಶ್,
                  ಅನುರಾಧ ಭಟ್,
                  ನವೀನ್ ಸಜ್ಜು

ಸಾಹಿತ್ಯ :ಅಶೋಕ್ ಸಾಮ್ರಾಟ್,
              ಅರುಣ್ ಪ್ರಸಾದ್

ಇನ್ನಷ್ಟು ಓದಿರಿ

Scroll to Top