ಗ್ರಾಮೀಣ ಭಾಗದಲ್ಲಿ ಬಡ ಜನರು ಅಧಿಕ ರಕ್ತದ ಒತ್ತಡ, ಮಧುಮೇಹ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.. ಹೀಗಾಗಿ ಆಸ್ಪತ್ರೆಗಳು ಉಚಿತ ಆರೋಗ್ಯ ಶಿಬಿರಗಳನ್ನು ಏರ್ಪಡಿಸುವುದು ಅತ್ಯವಶ್ಯಕವಾಗಿದೆ ಎಂದು ಜಾರಿ ನಿರ್ದೇಶನಲಯದ ಮಾಜಿ ಅಧಿಕಾರಿ ಹಾಗೂ ವಿಧಾನಪರಿಷತ್ ಸದಸ್ಯರಾದ H .P. ಸುಧಾಮ ದಾಸ್ ಹೇಳಿದರು. ತಾತಗುಣಿ ಬಳಿಯ ಅಗರ ಗ್ರಾಮದಲ್ಲಿರುವ ಬಿಎಂಎಸ್ ಆಸ್ಪತ್ರೆ ಘಟಕ -೨ ರಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಬಿಎಂಎಸ್ ಆಸ್ಪತ್ರೆ ನಿಯಮಿತವಾಗಿ ಉಚಿತ ಆರೋಗ್ಯ ಶಿಬಿರಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.

ಗಣರಾಜ್ಯೋತ್ಸವ ದಿನದ ಅಂಗವಾಗಿ ಜನವರಿ ೨೬ ರಂದು ಬೆಳಗ್ಗೆ ೯ ರಿಂದ ಸಂಜೆ ೫ ಗಂಟೆವರೆಗೂ ಶಿಬಿರ ನಡೆಸಲಾಯಿತು. ಸುಮಾರು 2000 ಮಂದಿ ಇದರ ಪ್ರಯೋಜನ ಪಡೆದರು.
BMS ಆಸ್ಪತ್ರೆ ಟ್ರಸ್ಟಿ ಗೌತಮ್ ಕಲತ್ತೂರ್ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಅಗರ ಗ್ರಾಮ ಪಂಚಾಯತ್ ಅಧ್ಯಕ್ಷೆ ಲತಾ ಮಂಜುನಾಥ್, ಮಾತೃಛಾಯಾ ಟ್ರಸ್ಟ್ ಸಂಸ್ಥಾಪಕರಾದ ವಿ. ಕೃಷ್ಣಮೂರ್ತಿ, Traneಟೆಕ್ನಾಲಜಿಸ್ ನ ಹಿರಿಯ ಇಂಜಿನಿಯರಿಂಗ್ ಮ್ಯಾನೇಜರ್ ಬಿ. ಕಾರ್ತಿಕೇಯನ್, ಕಗ್ಗಲೀಪುರದ ಆಡಳಿತಾತ್ಮಕ ಆರೋಗ್ಯ ಅಧಿಕಾರಿ ಡಾ. ರಾಧಾ ಅತಿಥಿಗಳಾಗಿ ಭಾಗವಹಿಸಿದ್ದರು.
BMS ಆಸ್ಪತ್ರೆ ಟ್ರಸ್ಟ್ ನ ಟ್ರಸ್ಟಿ ಅವಿರಾಮ್ ಶರ್ಮ, ಟ್ರಸ್ಟಿ ಹಾಗೂ ವೈದ್ಯಕೀಯ ನಿರ್ದೇಶಕ ಡಾ. ಕುಮಾರಸ್ವಾಮಿ ಹಾಗೂ ಬಿಎಂಎಸ್ ಆಸ್ಪತ್ರೆ ಘಟಕ-೨ರ ವೈದ್ಯಕೀಯ ಆಡಳಿತ ವಿಭಾಗದ ಮುಖ್ಯಸ್ಥರಾದ ಡಾ. ಸಂಗಮೇಶ್ ಬಿ ಮಾಲಿ ಪಾಟೀಲ್ ಶಿಬಿರದ ನೇತೃತ್ವ ವಹಿಸಿದ್ದರು.
ಉಚಿತ ನಿಯಮಿತ ರಕ್ತ ಪರೀಕ್ಷೆ ಮತ್ತು ಔಷಧವನ್ನು ನೀಡಲಾಗುತಿದ್ದು, ಅರ್ಹ ವ್ಯಕ್ತಿಗಳಿಗೆ ಉಚಿತ 2Dಇಕೋ, ಪಲ್ಮನರೀ ಫಂಕ್ಷನ್ ಟೆಸ್ಟ್, ECG, Lipid Profile (ಕೊಲೆಸ್ಟರಾಲ್) ಹಾಗೂ ಎಕ್ಸರೇ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಯಿತು.