ತಮಿಳು ನಟ ಹೊಸ ಸಿನಿಮಾ ʼಕರುಪ್ಪುʼ..ಡ್ರೀಮ್ ವಾರಿಯರ್ ಪಿಕ್ಚರ್ಸ್ ನಿರ್ಮಾಣದಲ್ಲಿ ಚಿತ್ರ

Picture of Cinibuzz

Cinibuzz

Bureau Report

ಡ್ರೀಮ್ ವಾರಿಯರ್ ಪಿಕ್ಚರ್ಸ್ ಸಂಸ್ಥೆಯು ದಕ್ಷಿಣ ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದು. ಧೀರನ್, ಅರುವಿ, ಎನ್‌ಜಿಕೆ, ರಾಕ್ಷಸಿ, ಖೈದಿ, ಭೋಲಾ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳು ಈ ಸಂಸ್ಥೆಯಡಿ ನಿರ್ಮಾಣಗೊಂಡಿವೆ. ಇದೀಗ ಡ್ರೀಮ್ ವಾರಿಯರ್ ಪಿಕ್ಚರ್ಸ್ ಸಂಸ್ಥೆಯು ತಮಿಳಿನ ಸೂಪರ್ ಸ್ಟಾರ್ ಸೂರ್ಯ ಚಿತ್ರ ನಿರ್ಮಾಣವಾಗುತ್ತಿದೆ. ಇದು ಸೂರ್ಯ ಅವರ 45ನೇ ಚಿತ್ರ. ಈ ಚಿತ್ರಕ್ಕೆ ʼಕರುಪ್ಪುʼ ಎಂಬ ಟೈಟಲ್‌ ಇಡಲಾಗಿದೆ.

‘ಕರುಪ್ಪು’ ಕಮರ್ಷಿಯಲ್ ಎಂಟರ್‌ಟೈನರ್ ಚಿತ್ರವಾಗಿದೆ. ಇತ್ತೀಚೆಗೆ ನಿರ್ದೇಶಕ ಆರ್‌ಜೆ ಬಾಲಾಜಿ ಅವರ ಹುಟ್ಟುಹಬ್ಬದಂದು ಶೀರ್ಷಿಕೆ ಲುಕ್ ಅನ್ನು ಅನಾವರಣಗೊಳಿಸಲಾಯಿತು. ಈ ಹಿಂದೆ ಬಾಲಾಜಿ ‘ಮೂಕುತಿ ಅಮ್ಮನ್’ ಮತ್ತು ‘ವೀಟ್ಲ ವಿಶೇಷಂ’ ಅಂತಹ ಸಾಮಾಜಿಕ ಜವಾಬ್ದಾರಿಯುತ ಚಿತ್ರಗಳನ್ನು ನಿರ್ದೇಶಿಸಿದ್ದರು. ಕರುಪ್ಪು ಚಿತ್ರದ ಮೂಲಕ ಎರಡು ದಶಕಗಳ ನಂತರ ಸೂರ್ಯ ಮತ್ತು ತ್ರಿಶಾ ಕೃಷ್ಣನ್ ಮತ್ತೆ ಒಂದಾಗುತ್ತಿದ್ದಾರೆ.

ಚಿತ್ರದಲ್ಲಿ ಇಂದ್ರನ್ಸ್, ನಾಟಿ, ಸ್ವಸಿಕಾ, ಅನಘ ಮಾಯಾ ರವಿ, ಶಿವದಾ ಮತ್ತು ಸುಪ್ರೀತ್ ರೆಡ್ಡಿ ಅಭಿನಯಿಸುತ್ತಿದ್ದಾರೆ. ಸಾಯಿ ಅಭ್ಯಂಕರ್ ಸಂಗೀತ ನಿರ್ದೇಶನ, ಜಿಕೆ ವಿಷ್ಣು ಕ್ಯಾಮೆರಾ, ಕಲೈವಾನನ್ ಸಂಕಲನ, ಇಡೀ ದೇಶವನ್ನು ಮೆಚ್ಚಿಸಿದ ಸಾಹಸ ಸಂಯೋಜಕರಾದ ಅನ್ಬರಿವ್ ಮತ್ತು ವಿಕ್ರಮ್ ಮೋರ್ ಜೋಡಿ, ಕರುಪ್ಪು ಚಿತ್ರದಲ್ಲಿ ಹೈ-ಆಕ್ಟೇನ್ ಸಾಹಸ ಸನ್ನಿವೇಶಗಳನ್ನು ನಿರ್ವಹಿಸಿದ್ದಾರೆ. ಪ್ರಶಸ್ತಿ ವಿಜೇತ ನಿರ್ಮಾಣ ವಿನ್ಯಾಸಕ ಅರುಣ್ ವೆಂಜರಮೂಡು ಈ ಚಿತ್ರಕ್ಕಾಗಿ ಭವ್ಯವಾದ ಸೆಟ್‌ಗಳನ್ನು ವಿನ್ಯಾಸಗೊಳಿಸಿದ್ದಾರೆ.

ಇನ್ನಷ್ಟು ಓದಿರಿ

Scroll to Top