ಸಂಬರಲ ಏಟಿಗಟ್ಟು ಗ್ಲಿಂಪ್ಸ್ ರಿಲೀಸ್.. ನಟ ಸಾಯಿ ದುರ್ಗಾ ತೇಜ್‌ ಭರ್ಜರಿ ಆಕ್ಷನ್

Picture of Cinibuzz

Cinibuzz

Bureau Report

ತೆಲುಗಿನ ಮೆಗಾ ಸುಪ್ರೀಂ ಹೀರೋ ಸಾಯಿ ದುರ್ಗಾ ತೇಜ್ ನಟಿಸುತ್ತಿರುವ ಪ್ಯಾನ್-ಇಂಡಿಯಾ ಸಿನಿಮಾ SYG-ಸಂಬರಲ ಏಟಿಗಟ್ಟು ಗ್ಲಿಂಪ್ಸ್ ರಿಲೀಸ್ ಆಗಿದೆ. ಪ್ರೈಮ್ ಶೋ ಎಂಟರ್ಟೈನ್ಮೆಂಟ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿರುವ ಝಲಕ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಭರ್ಜರಿ ಆಕ್ಷನ್ ಮೂಲಕ ಅಬ್ಬರಿಸಿರುವ ಸಾಯಿ ದುರ್ಗಾ ತೇಜ್ ರಕ್ತಸಿಕ್ತ ಇತಿಹಾಸ ಕಥೆಯೊಂದಿಗೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ವಿಡಿಯೊದಲ್ಲಿ ಸಾಯಿ ದುರ್ಗ ತೇಜ್‌ ಅವರು ಭರ್ಜರಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರೊಬ್ಬ ಫೈಟರ್‌ನಂತೆ ಗೋಚರಿಸುತ್ತಿದ್ದಾರೆ. ತಮ್ಮ ಲುಕ್‌ ಬದಲಿಸಿಕೊಳ್ಳಲು ಅವರು ಕಠಿಣ ಪರಿಶ್ರಮ ಹಾಕಿದ್ದು, ದೇಹವನ್ನ ಹುರಿಗೊಳಿಸಿಕೊಂಡಿದ್ದು ಸ್ಪಷ್ಟವಾಗಿ ಕಾಣಿಸುತ್ತದೆ.

ಚಿತ್ರದಲ್ಲಿ ಸಾಯಿಗೆ ಜೋಡಿಯಾಗಿ ಐಶ್ವರ್ಯ ಲಕ್ಷ್ಮೀ ಸಾಥ್ ಕೊಟ್ಟಿದ್ದಾರೆ. ಜಗಪತಿ ಬಾಬು, ಸಾಯಿ ಕುಮಾರ್, ಶ್ರೀಕಾಂತ್ ಹಾಗೂ ಅನನ್ಯ ನಾಗಲ್ಲ ತಾರಾಬಳಗದಲ್ಲಿದ್ದಾರೆ.

ಸಂಬರಲ ಏಟಿಗಟ್ಟು ಸಿನಿಮಾವನ್ನ ಯುವ ಪ್ರತಿಭೆ ರೋಹಿತ್‌ ಕೆ.ಪಿ. ನಿರ್ದೇಶನ ಮಾಡುತ್ತಿದ್ದಾರೆ. ವೆಟ್ರಿವೇಲ್ ಪಳನಿಸ್ವಾಮಿ ಛಾಯಾಗ್ರಹಣ, ಬಿ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ನವೀನ್ ವಿಜಯಕೃಷ್ಣ ಸಂಕಲನ ಸಂಬರಲ ಏಟಿಗಟ್ಟು ಚಿತ್ರಕ್ಕಿದೆ.

ಹನುಮಾನ್ ನಂತಹ ಹಿಟ್ ಕೊಟ್ಟಿರುವ ಕೆ ನಿರಂಜನ್ ರೆಡ್ಡಿ ಹಾಗೂ ಚೈತನ್ಯ ರೆಡ್ಡಿ ಪ್ರೈಮ್ ಶೋ ಎಂಟರ್‌ಟೇನ್‌ಮೆಂಟ್‌ ಬ್ಯಾನರ್‌ನಡಿ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ತೆಲುಗು, ಕನ್ನಡ, ಮಲಯಾಳಂ, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಇನ್ನಷ್ಟು ಓದಿರಿ

Scroll to Top