ಪ್ರಣವ್ ಮೋಹನ್‌ಲಾಲ್ ನಟನೆಯ ಡೀಯಸ್ ಈರೇ

Picture of Cinibuzz

Cinibuzz

Bureau Report

ಪ್ರಣವ್ ಮೋಹನ್‌ಲಾಲ್ ನಟನೆಯ ಡೀಯಸ್ ಈರೇಎಸ್.ಶಶಿಕಾಂತ್ ಮತ್ತು ಚಕ್ರವರ್ತಿರಾಮಚಂದ್ರ ಒಡೆತನದ ’ನೈಟ್ ಶಿಫ್ಟ್ ಸ್ಟುಡಿಯೋ’ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಡೀಯಸ್ ಈರೇ ಸಿನಿಮಾದಲ್ಲಿ ಮಾಲಿವುಡ್ ಸೂಪರ್ ಸ್ಟಾರ್ ಮೋಹನ್‌ಲಾಲ್ ಪುತ್ರ ಪ್ರಣವ್ ಮೋಹನ್‌ಲಾಲ್ ನಾಯಕನಾಗಿ ಅಭಿನಯಿಸಿದ್ದಾರೆ. ಇಂದು 1.18 ನಿಮಿಷದ ಟ್ರೇಲರ್ ಹೊರಬಂದಿದ್ದು, ಕೆಲವೇ ಗಂಟೆಗಳಲ್ಲಿ ಒಂದು ಮುಕ್ಕಾಲು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡು ಸದ್ದು ಮಾಡುತ್ತಿದೆ. ’ಕೋಪದ ದಿನ’ ಎಂದು ಇಂಗ್ಲೀಷ್‌ದಲ್ಲಿ ಅಡಿಬರಹ ಇದೆ. ಹಾರರ್ ಥ್ರಿಲ್ಲರ್ ಕಥೆಯಲ್ಲಿ ಒಂದಷ್ಟು ನೈಜ ಘಟನೆಗಳನ್ನು ಹೆಕ್ಕಿಕೊಳ್ಳಲಾಗಿದೆ. ಅಂದ ಹಾಗೆ ಸಿನಿಮಾವು ಮಲಯಾಳಂ ಭಾಷೆಯಲ್ಲಿ ಇದೇ ಅಕ್ಟೋಬರ್, 31ರಂದು ವಿಶ್ವದಾದ್ಯಂತ ತೆರೆ ಕಾಣುತ್ತಿದೆ.


ರಾಹುಲ್‌ಸದಾಸಿವನ್ ರಚನೆ ಹಾಗೂ ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ತಾರಾಗಣದಲ್ಲಿ ಜಿಬಿನ್ ಗೋಪಿನಾಥ್, ಅರುಣ್ ಅಜಿಕುಮಾರ್, ಮನೋಹರಿ ಜಾಯ್ ಮುಂತಾದವರು ನಟಿಸಿದ್ದಾರೆ.

ಸಂಗೀತ ಕ್ರಿಸ್ಟೋ ಕ್ಸೇವಿಯರ್, ಛಾಯಾಗ್ರಹಣ ಶೆಹನಾದ್ ಜಲಾಲ್, ಸಂಕಲನ ಶಫಿಕ್ಯೂ ಮೊಹಮ್ಮದ್ ಅಲಿ ಅವರದಾಗಿದೆ.

ಇನ್ನಷ್ಟು ಓದಿರಿ

Scroll to Top