ತುಳು ಹಾಗೂ ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಜೈ ಚಿತ್ರ ಬಿಡುಗಡೆಗೆ ಮುಂಚೆಯೇ ಭರ್ಜರಿ ಸದ್ದು ಮಾಡುತ್ತಿದೆ. ವಿಭಿನ್ನ ಪ್ರಚಾರದಿಂದ ಗಮನ ಸೆಳೆದಿರುವ ಜೈ ಚಿತ್ರ, ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಪ್ರೇಮಿಯರ್ ನಲ್ಲಿ ಅದ್ಭುತ ಪ್ರತಿಕ್ರಿಯೆ ಪಡೆದುಕೊಂದಿದೆ. ಅಕ್ಟೋಬರ್ 24 ರಂದು ಮಸ್ಕಟ್ ನಲ್ಲಿ ಮೊದಲ ಅಂತಾರಾಷ್ಟ್ರೀಯ ಪ್ರೇಮಿಯರ್ ನಡೆಯಿತು,

ಅದಾದ ನಂತರ ಗೋವಾ ದಲ್ಲಿ ಅಕ್ಟೋಬರ್ 26ರಂದು ಭಾರತದ ಮೊದಲ ಪ್ರೇಮಿಯರ್ ನಡೆಯಿತು. ಎಲ್ಲಾ ಜನರಿಂದ ಮುಕ್ತ ಕಂಠದಿಂದ ಜೈ ಚಿತ್ರ ಹೋಗಳಲ್ಪಟ್ಟಿದೆ. ಬಹರೈನ್, ಕತಾರ್, ದುಬೈ ನಲ್ಲಿ ಪ್ರೇಮಿಯರ್ ಗಳು ನಡೆಯಲಿದೆ.ನವೆಂಬರ್ 14 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿರುವ ಜೈ ಚಿತ್ರದ ಮೇಲೆ ಅಪಾರ ನಿರೀಕ್ಷೆ ಹುಟ್ಟಿದೆ.











































