ಪೃಥ್ವಿ ರಾಜ್ ಸುಕುಮಾರನ್ ಅಭಿನಯದ ದಿ ಗೋಟ್ ಲೈಫ್, ದಿ ಎಪಿಕ್ ಟೇಲ್ ಆಫ್ ದಿ ಗ್ರೇಟೆಸ್ಟ್ ಸರ್ವೈವಲ್ ಅಡ್ವೆಂಚರ್ ಸಿನಿಮಾಗೆ ರಿಲೀಸ್ ಡೇಟ್ ಫಿಕ್ಸ್ ಆಗಿದೆ. 2024ರ ಏಪ್ರಿಲ್ 10 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದು ರಾಷ್ಟ ಪ್ರಶಸ್ತಿ ವಿಜೇತ ಬ್ಲೆಸ್ಸಿ ನಿರ್ದೇಶನದ ಸಿನಿಮಾ.ದಿ ಗೋಟ್ ಲೈಫ್ ಚಿತ್ರದಲ್ಲಿ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆನ್ಯಾಮಿನ್ ಅವರ ಗೋಟ್ ಡೇಸ್ ಕಾದಂಬರಿ ಆಧರಿಸಿದ ಸಿನಿಮಾ ಇದಾಗಿದೆ. ಒಂದು ದಶಕದ ಪ್ರಯತ್ನದ […]
ಲೋಕೇಶ್ ಕನಕರಾಜ್ ಸದ್ಯ ಇಂಡಿಯಾದ ಸ್ಟಾರ್ ಡೈರೆಕ್ಟರ್. ಮಾನಗರಮ್, ಕೈದಿ, ಮಾಸ್ಟರ್ ಮತ್ತು ವಿಕ್ರಂ ಈ ನಾಲ್ಕು ಹಿಟ್ ಸಿನಿಮಾಗಳನ್ನು ನೀಡಿರುವ ಲೋಕೇಶ್ ಲಿಯೋ ಚಿತ್ರವನ್ನು ಆರಂಭಿಸಿದ್ದಾರೆ. ಇದಾಗುತ್ತಿದ್ಧಂತೇ ಪ್ಯಾನ್ ಇಂಡಿಯಾ ಲೆವೆಲ್ಲಿನ ಮಲ್ಟಿ ಸ್ಟಾರರ್ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರದಲ್ಲಿ ಭಾರತದ ಎಲ್ಲ ಭಾಷೆಗಳ ಸೂಪರ್ ಸ್ಟಾರ್ಗಳು ಪಾಲ್ಗೊಳ್ಳಲಿದ್ದಾರೆ. ಸಂಜಯ್ ದತ್, ತ್ರಿಶಾ, ವಿಜಯ್ ಸೇತುಪತಿ, ಕಮಲಹಾಸನ್ ಮತ್ತು ವಿಜಯ್ ಈ ಚಿತ್ರದಲ್ಲಿರಲಿರೋದು ಬಹುತೇಕ ಕನ್ಫರ್ಮ್ ಆಗಿದೆ. ಕನ್ನಡದಿಂದ ಯಾವ ನಟ ಆ […]
ಕನ್ನಡ ಚಿತ್ರರಂಗದಲ್ಲಿ ಮಲ್ಟಿ ಸ್ಟಾರ್ ಸಿನಿಮಾಗಳು ಆಗಾಗ ಅರಳುತ್ತಿರುತ್ತವೆ. ಈ ವಾರ ತೆರೆಗೆ ಬರುತ್ತಿರುವ ಕಬ್ಜ ಸಿನಿಮಾದಲ್ಲೇ ಕನ್ನಡದ ಮೂವರು ಟಾಪ್ ಸ್ಟಾರ್ಗಳಿದ್ದಾರೆ. ಹಾಗೆ ನೋಡಿದರೆ ಕನ್ನಡದಲ್ಲಿ ಅತಿ ಹೆಚ್ಚು ಮಲ್ಟಿ ಸ್ಟಾರ್ ಸಿನಿಮಾ ಮಾಡಿರೋರಲ್ಲಿ ಮುಂಚೂಣಿಯಲ್ಲಿ ನಿಲ್ಲುವುದು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್. ರಮೇಶ್ ಅರವಿಂದ್, ಉಪೇಂದ್ರ, ಜಗ್ಗೇಶ್, ರವಿಚಂದ್ರನ್ ರಿಂದ ಹಿಡಿದು ಸುದೀಪ್, ಶ್ರೀಮುರಳಿ ತನಕ ಕನ್ನಡ ಹಿರಿ, ಕಿರಿಯ ಹೀರೋಗಳೊಂದಿಗೆ ತೆರೆ ಹಂಚಿಕೊಂಡ ಹಿರಿಯ ನಟ ಶಿವಣ್ಣ! ಸದ್ಯ ಗೋಲ್ಡನ್ ಸ್ಟಾರ್ ಗಣೇಶ್ […]
ಅದೇನು ದುರಂತವೋ ಗೊತ್ತಿಲ್ಲ. ತಮಿಳಿನ ಹಾಸ್ಯನಟರೆಲ್ಲಾ ಒಬ್ಬರ ಹಿಂದೆ ಒಬ್ಬರು ಕಾಲವಾಗುತ್ತಿದ್ದಾರೆ. ನೆನ್ನೆ ಫೆಬ್ರವರಿ 19ರಂದು ಸುಪ್ರಸಿದ್ದ ಕಾಮಿಡಿ ಕಲಾವಿದ ಮೈಲ್ಸಾಮಿ ಇಹಲೋಕ ತ್ಯಜಿಸಿದ್ದಾರೆ. (57 ವರ್ಷ ವಯಸ್ಸು) ಸತ್ಯಮಂಗಲ ಮೂಲದ ಮೈಲ್ಸಾಮಿ ಬೆಳೆದಿದ್ದೆಲ್ಲಾ ಕೊಯಮತ್ತೂರಿನಲ್ಲಿ. 1984ರಲ್ಲಿ ಬಂದ ದಾವಣಿ ಕನವುಗಳ್ ಸಿನಿಮಾದಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಗುಂಪಿನಲ್ಲಿ ಕಾಣಿಸಿಕೊಂಡಿದ್ದವರು ಮೈಲ್ಸಾಮಿ. ನಂತರ ಪಾಂಡ್ಯರಾಜ ನಿರ್ದೇಶನದ ಕನ್ನಿ ರಾಸಿ ಸಿನಿಮಾದ ದಿನಸಿ ಅಂಗಡಿ ಹುಡುಗನ ಪಾತ್ರ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿತು. ಅದಾಗುತ್ತಿದ್ದಂತೇ ಪ್ರಭು ನಟನೆಯ ಎನ್ ತಂಗಚ್ಚಿ […]
ಬದುಕು ನಿರ್ದಯಿ ಅನ್ನಿಸೋದೇ ಇಂಥಾ ಸಂದರ್ಭಗಳಲ್ಲಿ. ಕನ್ನಡ ಚಿತ್ರರಂಗದಲ್ಲಿ ಸರಿ ಸುಮಾರು 55 ಸಿನಿಮಾಗಳಿಗೆ ನಿರ್ದೇಶಕರಾಗಿ ಕೆಲಸ ಮಾಡಿರುವವರು ಬಿ.ಆರ್. ಕೇಶವ. ಸಿನಿಮಾ ಮಾಡೋದು ತುಂಬಾ ಕಷ್ಟದ ಕೆಲಸ ಅಂತ ಅಂದುಕೊಳ್ಳುವ ಕಾಲದಲ್ಲಿ ತಿಂಗಳಿಗೊಂದು ಚಿತ್ರವನ್ನು ಸುತ್ತಿ ಬಿಸಾಕುತ್ತಿದ್ದವರು ಇದೇ ಕೇಶವ್. ಆಗಿನ್ನೂ ಎಂಜಿನಿಯರಿಂಗ್ ಓದುತ್ತಿದ್ದಾಗಲೇ ಧಾರಾವಾಹಿಗಳ ನಿರ್ದೇಶನ ಶುರು ಮಾಡಿದ ಕೇಶವ್ ಅತೀ ಕಡಿಮೆ ವಯಸ್ಸಿಗೇ ಡೈರೆಕ್ಟರ್ ಕ್ಯಾಪ್ ತೊಟ್ಟವರು. ಈ ವರೆಗೆ ಇವರು ನಿರ್ದೇಶಿಸಿದ ಸಿನಿಮಾಗಳ ಸಂಖ್ಯೆ ಬರೋಬ್ಬರಿ 55. ಕೇಶವ್ ಸಿನಿಮಾ ಮಾಡೋ […]
sarpini kannada movie snake
ನಿರೀಕ್ಷೆಗಳು ನಿಜವೇ ಆದರೆ ದಿಲ್ ಪಸಂದ್ ʻಲವ್ ಮಾಕ್ಟೇಲ್ʼ ಸರಣಿ ಸಿನಿಮಾಗಳಂತೆ ದೊಡ್ಡ ಮಟ್ಟದಲ್ಲಿ ಗೆಲ್ಲಲಿದೆ. ಮದರಂಗಿ ಕೃಷ್ಣ ಅವರನ್ನು ಹೇಗೆಲ್ಲಾ ನೋಡಲು ಜನ ಬಯಸುತ್ತಿದ್ದಾರೋ ಅಂಥಾದ್ದೇ ರೋಲಲ್ಲಿ ಕೃಷ್ಣ ಕಾಣಿಸಿಕೊಂಡಿದ್ದಾರೆ. ನಿಮಗೆಲ್ಲ ನೆನಪಿರಬೇಕು. ಇಸವಿ 2016ರಲ್ಲಿ ʻನಾನಿʼ ಹೆಸರಿನ ಸಿನಿಮಾ ಬಂದಿತ್ತು. ಪ್ರಣಾಳ ಶಿಶುವನ್ನು ಆವರಿಸಿದ್ದ ನೈಜ ಮತ್ತು ಭಯಾನಕ ಘಟನೆಯೊಂದರ ಸುತ್ತ ಹೆಣೆದಿದ್ದ ಸಿನಿಮಾವದು. ಆ ಚಿತ್ರವನ್ನು ನಿರ್ದೇಶಿಸಿದ್ದವರು ಸುಮಂತ್. ಇವರ ಮೂಲ ಹೆಸರು ರಾಘವೇಂದ್ರ ಗೊಲ್ಲಹಳ್ಳಿ. ತೀರಾ ಸಣ್ಣ ವಯಸ್ಸಿಗೇ ಚಿತ್ರ ನಿರ್ದೇಶಕನಾಗಬೇಕು […]