‘ಒಮ್ಮೆ ನಿಶ್ಯಬ್ದ ಒಮ್ಮೆ ಯುದ್ಧ’ ಟ್ರೇಲರ್ ಬಿಡುಗಡೆ ಮಾಡಿದರು ಕಿಚ್ಚ!

Picture of Cinibuzz

Cinibuzz

Bureau Report

ರೋಲಿಂಗ್ ಡ್ರೀಮ್ಸ್ ಎಂಟರ್‌ಟೈನ್‌ಮೆಂಟ್ ಲಾಂಛನದಲ್ಲಿ ಪ್ರವೀಣ್‌ರಾಜ್ ಹಾಗೂ ವಿ.ವಿ.ಎನ್.ವಿ ಸುರೇಶ್‌ಕುಮಾರ್ ಅವರು ನಿರ್ಮಿಸಿರುವ ‘ಒಮ್ಮೆ ನಿಶ್ಯಬ್ದ ಒಮ್ಮೆ ಯುದ್ಧ‘ ಚಿತ್ರದ ಟ್ರೇಲರ್ ಕಿಚ್ಚ ಸುದೀಪ್ ಅವರಿಂದ ಇತ್ತೀಚೆಗೆ ಬಿಡುಗಡೆಯಾಯಿತು.

ಶ್ರೀನಾಗ್ ಕಥೆ, ಚಿತ್ರಕಥೆ ಬರೆದು ನಿರ್ದೆಶಿಸಿರುವ ಈ ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಸದ್ಯದಲ್ಲೇ ಸೆನ್ಸಾರ್ ಮುಂದೆ ಹೋಗಲಿದೆ. ಶೀಘ್ರದಲ್ಲೇ ಚಿತ್ರದ ಹಾಡುಗಳು ಬಿಡುಗಡೆಯಾಗಲಿದ್ದು, ಚಿತ್ರ ಕೂಡ ಸದ್ಯದಲ್ಲೇ ತೆರೆ ಕಾಣಲಿದೆ.

ಕಿರಣ್ ವಾರಣಾಸಿ ಅವರ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಕಲ್ಯಾಣ್ ಸಮಿ ಅವರ ಛಾಯಾಗ್ರಹಣವಿದೆ. ವಿ.ಸುರೇಶ್‌ಕುಮಾರ್ ಸಂಕಲನ, ಸ್ನೇಹ ನೃತ್ಯ ನಿರ್ದೇಶನ, ಕರವ ವೆಂಕಟೇಶ್ ಸಾಹಸ ನಿರ್ದೇಶನ ಹಾಗೂ ಸುಮಿತ್ ಪಟೇಲ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಪ್ರವೀಣ್ ಸೂಡ ಸಂಭಾಷಣೆ ಬರೆದಿದ್ದಾರೆ. ಪ್ರಭು ಮುಂಡಕರ್(ಊರ್ವಿ), ಸಂಯುಕ್ತ ಹೆಗಡೆ(ಕಿರಿಕ್ ಪಾರ್ಟಿ), sಸುಶ್ಮಿತಾ ಗೌಡ, ರಾಮಕೃಷ್ಣ, ಅರವಿಂದ್, ಎಡಕಲ್ಲು ಗುಡ್ದ ಚಂದ್ರಶೇಖರ್, ವಿಜಯ್ ಭೋಲೇನಾಥ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  #

ಇನ್ನಷ್ಟು ಓದಿರಿ

Scroll to Top