ನಟಿಯ ಸುತ್ತ ಮತ್ತೆ ನೆಟಿಗೆ ಮುರಿದ ವಿವಾದ!

Picture of Cinibuzz

Cinibuzz

Bureau Report

ನಟಿ ಕಾರುಣ್ಯಾ ರಾಮ್ ಮತ್ತೆ ಸುದ್ದಿಯಾಗಿದ್ದಾಳೆ. ಹಾಗಂತ ಆಕೆ ಯಾವ ಚಿತ್ರಕ್ಕೂ ನಾಯಕಿಯಾಗಿಲ್ಲ. ಯಾವ ಚಿತ್ರದಲ್ಲಿಯೂ ನಟಿಸುತ್ತಿರೋ ಸೂಚನೆಯೂ ಇಲ್ಲ. ಆದರೂ ಈಕೆ ಸುದ್ದಿಯಾಗಿರೋದು ವೈಯಕ್ತಿಕ ಜೀವನದ ಅಸ್ತವ್ಯಸ್ತ ಸ್ಥಿತಿಯಿಂದಲೇ. ಖುದ್ದು ಕಾರುಣ್ಯಾ ತನ್ನ ಲವರ್ ಸಚಿನ್ ಯಾದವ್ ಮೇಲೊಂದು ಕೇಸು ದಾಖಲಿಸಿದ್ದಾಳೆ. ಈ ವಿಚಾರವೀಗ ಕಮಿಷನರ್ ಕಚೇರಿವರೆಗೂ ತಲುಪಿಕೊಂಡಿದೆ.

ಈ ಸಚಿನ್ ಯಾದವ್ ಈ ಹಿಂದೆ ಕಿರುತೆರೆ ನಟಿ ಅನಿಕಾ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡು ಇನ್ನೇನು ಹಸೆಮಣೆ ಏರಲು ರೆಡಿಯಾಗಿದ್ದ ಹುಡುಗ. ಕಡೇ ಕ್ಷಣದಲ್ಲಿ ಎಂಟ್ರಿ ಕೊಟ್ಟಿದ್ದ ಕಾರುಣ್ಯ ಇವನು ನನ್ನವನು ಅಂತ ಇಡೀ ಮದುವೆಯನ್ನೇ ಕ್ಯಾನ್ಸಲ್ ಮಾಡಿ ಬಿಟ್ಟಿದ್ದಳು. ಆ ನಂತರದಲ್ಲಿ ಸಚಿನ್ ಯಾದವನ ಕಥೆ ಏನಾಯ್ತೆಂಬ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ. ಆದರೀಗ ಖುದ್ದು ಕಾರುಣ್ಯಾಳೇ ಸಚಿನ್ ಮೇಲೆ ಕಂಪ್ಲೇಂಟು ಕೊಡೋ ಮೂಲಕ ಹಳೇ ವಿವಾದ ಹೊಸಾ ರೂಪದೊಂದಿಗೆ ಮೈ ಕೊಡವಿಕೊಂಡಿದೆ.

ಈ ಸಚಿನ್ ಯಾದವ್ ಅದೇನು ಯಡವಟ್ಟು ಮಾಡಿಕೊಂಡನೋ, ಈ ಕಾರುಣ್ಯ ಅದೇಕೆ ಇಂಥಾ ನಿರ್ಧಾರ ಕೈಗೊಂಡಳೋ ಗೊತ್ತಿಲ್ಲ. ಆದರೆ ಒಂದು ಕಾಲದಲ್ಲಿ ಸಚಿನ್ ಕಾರುಣ್ಯಾ ಮೋಹಕ್ಕೆ ಬಿದ್ದು ಧಾರಾಳವಾಗಿಯೇ ಖರ್ಚು ಮಾಡಿದ್ದಾನೆಂಬ ಸುದ್ದಿಯೂ ಇದೆ. ಇಂಥಾ ಸಚಿನ್ ಈ ಹಿಂದೆ ಕಿರುತೆರೆ ನಟಿ ಅನಿಕಾ ಜೊತೆ ಮದುವೆ ಮಾಡಿಕೊಳ್ಳಲು ಮುಂದಾಗಿದ್ದನಲ್ಲಾ? ಆಗ ಸುಮ್ಮನೆ ಬದುಕು ಕಟ್ಟಿಕೊಳ್ಳಲು ಬಿಡದೆ ಕಾರುಣ್ಯಾ ಯಾಕೆ ಎಂಟ್ರಿ ಕೊಟ್ಟಿದ್ದಳು? ಈ ಸಚಿನ್ ತಾನೇ ಮತ್ತೆ ಮತ್ತೆ ಕಾರುಣ್ಯಾಳತ್ತ ಸುಳಿಯುತ್ತಾ ಯಡವಟ್ಟು ಮಾಡಿಕೊಂಡನಾ? ಅತ್ತ ಹೊಸ ಬದುಕು ಕಟ್ಟಿಕೊಳ್ಳಲೂ ಅವಕಾಶ ಕೊಡದೆ, ಇತ್ತ ತನ್ನೊಂದಿಗೆ ಬಾಳೋ ಸಾಧ್ಯತೆಯನ್ನೂ ಇಲ್ಲವಾಗಿಸುತ್ತಾ ಕಾರುಣ್ಯಾಳೇ ಕಾಡುತ್ತಿದ್ದಾಳಾ? ಇವೆಲ್ಲದಕ್ಕೆ ಪೊಲೀಸರ ಕ್ರಮವೇ ಉತ್ತರ ಹೇಳಬೇಕಿದೆ!

  #

ಇನ್ನಷ್ಟು ಓದಿರಿ

Scroll to Top