Dr 56 ನೋಡಲು ಬನ್ನಿ ಅಂದರು ಹೀರೋ ಪ್ರವೀಣ್

Picture of Cinibuzz

Cinibuzz

Bureau Report

ಇಂದು ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ Dr. 56 ತೆರೆಗೆ ಬರುತ್ತಿದೆ.  ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ, ಈ ವರೆಗೆ ಯಾರೂ ಹೇಳದ ವಿಚಾರದ ಕುರಿತು ಈ ಚಿತ್ರದಲ್ಲಿ ಹೇಳಲಾಗಿದೆ. ಸ್ವತಃ ನಾಯಕನಟರಾಗಿ ಕಾಣಿಸಿಕೊಂಡಿರುವ ಪ್ರವೀಣ್‌ ರೆಡ್ಡಿ ಈ ಚಿತ್ರಕ್ಕೆ ಕಥೆ ಕೂಡಾ ಬರೆದಿದ್ದಾರೆ. ಈ ಚಿತ್ರದಲ್ಲಿ ನಟಿ ಪ್ರಿಯಾಮಣಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇಂದು ಐದು ರಾಜ್ಯಗಳಲ್ಲಿ ಏಕಕಾದಲ್ಲಿ ಬಿಡುಗಡೆಯಾಗುತ್ತಿದೆ. ʻʻಸಿನಿಮಾವನ್ನು ನೋಡಲು ಬನ್ನಿ. ಚಿತ್ರ ನೋಡಿದ ಮೇಲೆ ಖಂಡಿತಾ ನಿಮ್ಮ ಮನಸ್ಸಿನಲ್ಲಿ ಹತ್ತಾರು ಪ್ರಶ್ನೆಗಳು ಮೂಡುತ್ತವೆ. ವಿಜ್ಞಾನ ಎನ್ನುವ ವಿಸ್ಮಯವನ್ನು ಬಳಸಿಕೊಂಡು ವೈದ್ಯಕೀಯ ಲೋಕದಲ್ಲಿ ಇಂಥ ಅನಾಚಾರಗಳು ನಡೆಯುತ್ತಿವೆಯಾ? ಎಂದು ಅನ್ನಿಸುತ್ತದೆʼʼ ಎಂದು ಪ್ರವೀಣ್‌ ರೆಡ್ಡಿ ಹೇಳಿದ್ದಾರೆ.

‌ಬಹುಶಃ ವೈದ್ಯಕೀಯ ವಿಜ್ಞಾನದ ಕುರಿತು ಆಳಕ್ಕಿಳಿದು ಅಧ್ಯಯನ ಮಾಡಿ, ಸಿನಿಮಾ ರೂಪಿಸಿದ ಸಿನಿಮಾವೊಂದು ಭಾರತೀಯ ಸಿನಿಮಾರಂಗದಲ್ಲಿ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಪ್ರಿಯಾಮಣಿ ಇಂಡಿಯಾದ  ಅದ್ಭುತ ನಟಿಯರಲ್ಲೊಬ್ಬರು ಅನ್ನೋದು ಯಾವತ್ತೋ ಪ್ರೂವ್‌ ಆಗಿದೆ. ಅವರಿಗೇ ಚಾಲೆಂಜ್‌ ಎನ್ನಿಸುವಂತಾ ಪಾತ್ರದಲ್ಲಿ ಅವರು ಡಾ. 56 ಚಿತ್ರದಲ್ಲಿ ನಟಿಸಿದ್ದಾರೆ. ಕನ್ನಡ, ತೆಲುಗು ತಮಿಳು ಸೇರಿದಂತೆ ಐದು ರಾಜ್ಯಗಳಲ್ಲಿ ಏಕಕಾಲಕ್ಕೆ ಇದೇ ಡಿಸೆಂಬರ್‌ 9ರಂದು ಡಾ.56 ತೆರೆಗೆ ಬರುತ್ತಿದೆ.

ಹರಿಹರ ಪಿಕ್ಚರ್ಸ್ ಲಾಂಛನದಲ್ಲಿ, ಪ್ರವೀಣ್ ರೆಡ್ಡಿ ನಿರ್ಮಿಸಿ, ರಾಜೇಶ್ ಆನಂದಲೀಲಾ ನಿರ್ದೇಶಿಸುತ್ತಿರುವ ಸಿನಿಮಾ ಡಾ. 56. ಪ್ರಿಯಾಮಣಿ ಪ್ರಧಾನಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೆ ನಿರ್ಮಾಪಕ ಪ್ರವೀಣ್ ರೆಡ್ಡಿ ಕತೆ, ಚಿತ್ರಕತೆ, ಬರೆದು ನಿರ್ಮಾಣವನ್ನೂ ಮಾಡುತ್ತಿದ್ದಾರೆ.

 ʻʻವೈದ್ಯಕೀಯ ವಿಜ್ಞಾನದ ಕುರಿತ ಈ ಸಿನಿಮಾ ಹೊಸ ಬಗೆಯ ಕತೆ ಹೊಂದಿದೆ. ಜೊತೆಗೆ ಮರ್ಡರ್ ಮಿಸ್ಟರಿಯ ಎಳೆ ಕೂಡಾ ರೋಚಕವಾಗಿ ತೆರೆದುಕೊಳ್ಳುತ್ತಾ ಸಾಗುತ್ತದೆ. ಪ್ರಿಯಾಮಣಿ ಈ ಚಿತ್ರದಲ್ಲಿ ಸಿಬಿಐ ಅಧಿಕಾರಿಯಾಗಿ ಕಾಣಿಸಿಕೊಂಡಿದಾರೆ.ʼʼ ಎಂದು ನಿರ್ದೇಶಕ ರಾಜೇಶ್ ಆನಂದಲೀಲಾ ಹೇಳಿಕೊಂಡಿದ್ದಾರೆ. ರಾಕೇಶ್ ಸಿ. ತಿಲಕ್ ಛಾಯಾಗ್ರಹಣ, ವಿಶ್ವ ಸಂಕಲನ, ಶಂಕರ್ ಸಂಭಾಷಣೆ, ಶ್ರೀಕಾಂತ್ ಕಶ್ಯಪ್ ಕಾರ್ಯಕಾರಿ ನಿರ್ಮಾಣದ ಈ ಚಿತ್ರಕ್ಕೆ ನೋಬಿನ್ ಪೌಲ್  ಸಂಗೀತವಿದೆ. ಈ ಚಿತ್ರದಲ್ಲಿ ಪ್ರಿಯಾಮಣಿ, ಪ್ರವೀಣ್, ರಮೇಶ್ ಭಟ್, ಯತಿರಾಜ್, ವೀಣಾ ಪೊನ್ನಪ್ಪ, ದೀಪಕ್ ಶೆಟ್ಟಿ ಮುಂತಾದವರ ಅಭಿನಯವಿದೆ. ಡಾ. 56  ಚಿತ್ರ ಪ್ರಿಯಾಮಣಿ ಅಭಿನಯದ 56ನೇ ಚಿತ್ರವೂ ಆಗಿದೆ!

ಇನ್ನಷ್ಟು ಓದಿರಿ

Scroll to Top