ನೆನಪಿರಲಿ ಪ್ರೇಮ್ ಚಿತ್ರರಂಗಕ್ಕೆ ಕಾಲಿಟ್ಟು ಕರೆಕ್ಟಾಗಿ 24 ವರ್ಷ ಆಗಿದೆ. ಬೇರೆ ನಟರಿಗೆ ಹೋಲಿಸಿದರೆ ಪ್ರೇಮ್ ನಟಿಸಿದ ಚಿತ್ರಗಳ ಸಂಖ್ಯೆ ತೀರಾ ಕಡಿಮೆ. ಹಾಗೆ ನೋಡಿದರೆ ಪ್ರೇಮ್ ಇಂಡಸ್ಟ್ರಿಗೆ ಬಂದಾಗ ಹೀರೋಗಳ ಕೊರತೆ ಸಿಕ್ಕಾಪಟ್ಟೆ ಇತ್ತು. ಆಗಿನ್ನೂ ಗಣೇಶ್, ದುನಿಯಾ ವಿಜಿ, ಶ್ರೀನಗರ ಕಿಟ್ಟಿ, ಅಜಯ್ ರಾವ್ ಮೊದಲಾದವರೆಲ್ಲ ಹೀರೋಗಳಾಗಿರಲಿಲ್ಲ. ಪೋಷಕ ಪಾತ್ರಗಳಲ್ಲಷ್ಟೇ ಅಭಿನಯಿಸಿಕೊಂಡಿದ್ದರು. ಶರಣ್ ಕೋಮಲ್ ತರದ ಕಲಾವಿದರು ಕಾಮಿಡಿ ಪಾತ್ರಗಳನ್ನು ಮಾಡಿಕೊಂಡಿದ್ದರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಕಿಚ್ಚ ಸುದೀಪ್ ಮತ್ತು ದರ್ಶನ್ […]
ಸವ್ಯಸಾಚಿ ಸಿನಿಮಾದ ಮುಖಾಂತರ ಬಣ್ಣದ ಬದುಕಿನಲ್ಲಿ ʻಓಂʼಕಾರ ಹಾಕಿದವರು ನಟಿ ಪ್ರೇಮ. ಸರಿಸುಮಾರು ಒಂದೂವರೆ ದಶಕಗಳಿಗೂ ಹೆಚ್ಚು ಕಾಲ ಕನ್ನಡ ಚಿತ್ರರಂಗವನ್ನು ಅನಾಯಾಸವಾಗಿ ಆಳುತ್ತಾ ತೆಲುಗಲ್ಲೂ ಮೆರೆದ ನಾಯಕನಟಿ ಈಕೆ. ಒಂದು ಕಾಲದಲ್ಲಿ ಉಪೇಂದ್ರ ಹೆಸರಿನ ಜೊತೆಗೆ ಪ್ರೇಮಾ ನಾಮಧೇಯ ನಾನಾ ರೀತಿಯಲ್ಲಿ ತಳುಕು ಹಾಕಿಕೊಂಡಿತ್ತು. ಗಾಸಿಪ್ಪುಗಳಿಗೆಲ್ಲಾ ಉಫ್ ಅಂದು ಮತ್ತಷ್ಟು ಬೆಳೆಯುತ್ತಲೇ ಹೋದಳು ಲಂಬೂ ಹುಡುಗಿ. ಹೀಗೆ ವೃತ್ತಿ ಬದುಕಿನಲ್ಲಿ ಉತ್ತುಂಗಕ್ಕೇರಿದ ಪ್ರೇಮಾ, ಖಾಸಗೀ ಬದುಕನ್ನು ಬಹುಪಾಲು ಸಂಕಟದಲ್ಲೇ ಕಳೆದವರು. ಚಿತ್ರರಂಗದಲ್ಲಿ ಕೈತುಂಬಾ ಅವಕಾಶಗಳಿದ್ದ ಹೊತ್ತಲ್ಲೇ […]
ವಾರಕ್ಕೆ ಮುಂಚೆ ಮೆಹಬೂಬ ಎನ್ನುವ ಸಿನಿಮಾವೊಂದು ತೆರೆಗೆ ಬಂದಿತ್ತು. ಸನ್ ಎರಡು ಸಾವಿರದ ಇಪ್ಪತ್ತನೇ ಮಾಹೆಯಲ್ಲಿ ಶುರುವಾಗಿ ವರ್ಷಾಂತರಗಳ ನಂತರ ಬಿಡುಗಡೆಗೊಂಡ ಚಿತ್ರವಿದು. ಬಿಗ್ ಬಾಸ್ ಎನ್ನುವ ರಿಯಾಲಿಟಿ ಶೋನಲ್ಲಿ ಗೆದ್ದ ಸ್ಪರ್ಧಿಗಳು ಆರಂಭದಲ್ಲಿ ಶ್ಯಾನೆ ಟಾಪಲ್ಲಿ ಕುಂತಿರುತ್ತಾರೆ. ಶಶಿ ಎನ್ನುವ ಹುಡುಗ ಕೂಡಾ ಬಿಗ್ ಬಾಸ್ ಶೋ ವಿನ್ನರ್ ಆಗಿದ್ದವರು. ನೀರ್ ದೋಸೆ ಖ್ಯಾತಿಯ ಸ್ಕಂದ ಪ್ರಸನ್ನ ನಿರ್ಮಾಣದಲ್ಲಿ ಆರಂಭಗೊಂಡಿದ್ದ ಸಿನಿಮಾ ಮೆಹಬೂಬ. ಈ ಪಿಚ್ಚರ್ ತಯಾರಾಗೋದು ಕೂಡಾ ತೀರಾ ವಿಳಂಬವಾಯಿತು. ಪ್ರಸನ್ನ ಶುರು ಮಾಡಿದ […]
Rachitaram_kannada_hero_notreachable_bengaluru_bangalore_cinibuzz_election
`ಗಂಟುಮೂಟೆ’ ಚಿತ್ರತಂಡದ ಕಡೆಯಿಂದ ರೂಪುಗೊಂಡಿರುವ `ಕೆಂಡ’ ಚಿತ್ರ ಹಂತ ಹಂತವಾಗಿ ಕುತೂಹಲದ ಕಾವೇರಿಸಿಕೊಂಡು ಸಾಗಿ ಬಂದಿತ್ತು. ಇದೀಗ ಕೆಂಡ ಬಿಡುಗಡೆಯ ಹೊಸ್ತಿಲಿನಲ್ಲಿ ನಿಂತಿದೆ. ಈ ಹೊತ್ತಿನಲ್ಲಿ ಜಯಂತ್ಕಾಯ್ಕಣಿ ರಚಿಸಿದ `ತಾಜಾ ತಾಜಾ ಸುದ್ದಿ’ ಗೀತೆಗೆ ಪುತ್ರ ರಿತ್ವಿಕ್ಕಾಯ್ಕಣಿ ಪ್ರಥಮ ಬಾರಿ ಸಂಗೀತ ಸಂಯೋಜಿಸಿರುವ ಲಿರಿಕಲ್ ವಿಡಿಯೋ ಹಾಡಿನ ಬಿಡುಗಡೆ ಕಾರ್ಯಕ್ರಮ ಎಸ್ಆರ್ವಿ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು. ತಂಡಕ್ಕೆ ಶುಭಹಾರೈಸಲು ಯೋಗರಾಜಭಟ್, ಸಂಗೀತ ಸಂಯೋಜಕ ವಿ.ಹರಿಕೃಷ್ಣ, ಡಿ.ಬೀಟ್ಸ್ನ ಶೈಲಜಾನಾಗ್ ಮತ್ತು ಜಯಂತ್ಕಾಯ್ಕಣಿ ಆಗಮಿಸಿದ್ದರು. ರೂಪಾ ರಾವ್ ಕೆಂಡ ಚಿತ್ರದ […]
ಈ ಹಿಂದೆ ತಾರಕಾಸುರ ಚಿತ್ರದ ಮೂಲಕ ಅಬ್ಬರದ ಎಂಟ್ರಿ ಕೊಟ್ಟಿದ್ದವರು ರವಿ. ಇದೀಗ ಅವರು ಕೈಲಾಸ ಎಂಬ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ. ನಾಗ್ ವೆಂಕಟ್ ನಿರ್ದೇಶನದ ಕೈಲಾಸ ಚಿತ್ರಕ್ಕೆ ಕಾಸಿದ್ರೆ ಎಂಬ ಅಡಿ ಬರಹವಿದೆ. ಈಗಾಗಲೇ ಟೀಸರ್ ಮೂಲಕ ಝಲಕ್ಕುಗಳನ್ನು ಅನಾವರಣಗೊಳಿಸಿದ್ದ ಚಿತ್ರತಂಡವೀಗ ಕನ್ನಡದ ಮಟ್ಟಿಗೆ ಹೊಸತೆನ್ನಿಸುವಂಥಾ ಟ್ರಾನ್ಸ್ ಸಾಂಗ್ ವೊಪಂದನ್ನು ಬಿಡುಗಡೆಗೊಳಿಸಿದೆ. ದೃಷ್ಯಗಳ ಮೂಲಕವೇ ಕಿಕ್ಕೇರಿಸೋ ಶೈಲಿಯ ಈ ಟ್ರಾನ್ಸ್ ವೀಡಿಯೋ ಸಾಂಗ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ನೋಡುಗರ ಕಡೆಯಿಂದ […]
ತೆಲುಗು ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ಸೂಪರ್ ಹಿಟ್ ಸಿನಿಮಾ ‘ಗೂಢಚಾರಿ’. ಅಡಿವಿ ಶೇಷ್ ನಟನೆಯಲ್ಲಿ ಮೂಡಿ ಬಂದ ಆಕ್ಷನ್ ಅಂಡ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಗಳಿಕೆ ಕಂಡಿತ್ತು. ಈ ಚಿತ್ರದ ಸೀಕ್ವೆಲ್ ಬರ್ತಿರೋದು ಗೊತ್ತೇ ಇದೆ. ಈಗಾಗಲೇ ರಿಲೀಸ್ ಆಗಿದ್ದ ‘ಗೂಢಚಾರಿ 2’ ಫಸ್ಟ್ ಲುಕ್ ಬರೀ ಸದ್ದು ಮಾಡಿತ್ತು. ಇದೀಗ ಚಿತ್ರತಂಡ ನಾಯಕಿಯನ್ನು ಪರಿಚಯಿಸಿದೆ. ಗೂಢಚಾರಿ-2 ಸಿನಿಮಾಗೆ ನಾಯಕಿ ಸಿಕ್ಕಿದ್ದಾರೆ. ಪ್ರತಿಭಾನ್ವಿತ ನಟಿ ಬನಿತಾ ಸಂಧು […]
ಬಾಲಿವುಡ್ ಕಂಡ ಅಪರೂಪದ ಸಿನಿಮಾ ಮೇಕರ್ಸ್..ನಾಲ್ಕು ರಾಷ್ಟ್ರಪ್ರಶಸ್ತಿ ಗೆದ್ದಿರುವ ಸ್ಟಾರ್ ಡೈರೆಕ್ಟರ್ ರಾಜ್ ಕುಮಾರ್ ಹಿರಾನಿಗಿಂದು ಜನ್ಮದಿನದ ಶುಭಾಶಯ. ಮುನ್ನಾ ಬಾಯ್ ಎಂಬಿಬಿಎಸ್, ತ್ರಿ ಇಡಿಯಟ್ಸ್, ಪಿಕೆ, ಸಂಜುನಂತಹ ಸೂಪರ್ ಡೂಪರ್ ಹಿಟ್ ಚಿತ್ರ ಕೊಟ್ಟಿರುವು ಹಿರಾನಿ ಡಂಕಿ ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಸಾಮಾನ್ಯವಾಗಿ ರಾಜ್ ಕುಮಾರ್ ಹಿರಾನಿ ಚಿತ್ರಗಳು ಮನರಂಜನೆ ಜೊತೆಗೆ ಒಂದೊಳ್ಳೆ ಸಂದೇಶಗಳನ್ನು ಒಳಗೊಂಡಿರುತ್ತದೆ. ಫ್ಯಾಮಿಲಿ ಕುಳಿತು ನೋಡುವ ಸಿನಿಮಾಗಳಾಗಿರುತ್ತವೆ. ಇಂತಹ ಸ್ಟಾರ್ ಡೈರೆಕ್ಟರ್ ಶಾರುಖ್ ಖಾನ್ ಗೆ ಡಂಕಿ ಎಂಬ […]
ಸಮಾಜ ಸೇವೆ, ರಾಜಕಾರಣ, ವಾಣಿಜ್ಯ ವ್ಯವಹಾರಗಳ ಜೊತೆಗೆ ಸಿನಿಮಾ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವ ಯುವ ಪ್ರತಿಭೆ ಅಭಿ ರಾಣವ್. ದುನಿಯಾ ವಿಜಯ್ ಅವರ ಜಾಕ್ಸನ್ ಚಿತ್ರದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದವರು ಅಭಿ. ಪೂರ್ಣ ಪ್ರಮಾಣದ ಹೀರೋ ಆವಿ ಒನ್ ಕ್ರೋರ್, ಯಾಕೋ ಬೇಜಾರ್ ಸಿನಿಮಾಗಳಲ್ಲೂ ನಟಿಸಿದ್ದಾರೆ. ವೆಸ್ಲಿ ಬ್ರೌನ್ ನಿರ್ದೇಶನದ ಬೆನ್ಜ್ ಲವ್ ಸ್ಟೋರಿ ಕೂಡಾ ನಿರ್ಮಾಣ ಹಂತದಲ್ಲಿದೆ… ಇವರ ತಂದೆ ಹೊಸಕೋಟೆಯಲ್ಲಿ ಹೆಸರಾಂತ ರಾಜಕಾರಣಿ. ತಮ್ಮದೇ ಉದ್ಯಮ ಹೊಂದಿದ್ದರೂ ಅಭಿ ಅವರಿಗೆ ಸಿನಿಮಾ ಕ್ಷೇತ್ರದಲ್ಲಿ ಬೆಳೆದು ನಿಲ್ಲಬೇಕು […]