ತ್ರೇತಾ ಯುಗದಲ್ಲಿ ಕಡಿಮೆ ಜನ ಕೆಟ್ಟವರಿದ್ದರಂತೆ. ಆದ್ದರಿಂದ ಅಲ್ಲಿ ರಾಮಾಯಣ ನಡೆಯಿತು. ದ್ವಾಪರ ಯುಗದಲ್ಲಿ ಸ್ವಲ್ಪ ಜಾಸ್ತಿ ಕೆಟ್ಟವರಿದ್ದರು. ಅದಕ್ಕೇ ನೂರೊಂದು ಜನ ಕೌರವರಿದ್ದ ಮಹಾಭಾರತ ನಡೀತು. ಇವೆರಡಕ್ಕೂ ನಡುವೆ ಇದ್ದ ಸತ್ಯ ಯುಗದಲ್ಲಿ ಈ ಥರದ ಯಾವ ಕಥೇನೂ ನಡೀಲಿಲ್ಲ… ಯಾಕೆಂದ್ರೆ ಅಲ್ಲಿ ಕೆಟ್ಟವ್ರೇ ಇರ್ಲಿಲ್ಲ.. ಅಂಥಾ ಸತ್ಯ ಯುಗದಲ್ಲಿ ಶೂನ್ಯ ಅಂತಾ ಒಬ್ಬ ವ್ಯಾಪಾರಿ ಇದ್ದ. ಯಾವುದೋ ಶಾಪದ ಪರಿಣಾಮವಾಗಿ ಸುಳ್ಳು ಹೇಳಲು ಶುರು ಮಾಡಿದ. ಜಗಳವೇ ಇರದಿದ್ದ ಸತ್ಯ ಯುಗದಲ್ಲಿ ಶೂನ್ಯನ ಸುಳ್ಳಿನಿಂದ […]
ಕೆಂಡಸಂಪಿಗೆ, ಕಾಲೇಜ್ ಕುಮಾರ್ ನಂತರ ಹೊರಬರುತ್ತಿರುವ ವಿಕ್ಕಿ ವರುಣ್ ಚಿತ್ರ ಕಾಲಾಪತ್ಥರ್. ಈ ಸಿನಿಮಾದ ಮೂಲಕ ವಿಕ್ಕಿ ನಟನೆಯ ಜೊತೆಗೆ ನಿರ್ದೇಶನಕ್ಕೂ ಕೈ ಇಟ್ಟಿರೋದು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಈ ಚಿತ್ರದ ಮೂಲಕ ವಿಕ್ಕಿ ಹ್ಯಾಟ್ರಿಕ್ ಗೆಲುವು ಪಡೆಯುತ್ತಾರಾ ಇಲ್ಲವಾ ಎನ್ನುವ ಪ್ರಶ್ನೆಗೆ ಇಂದು ತೆರೆಗೆ ಬಂದಿರುವ ಕಾಲಾಪತ್ಥರ್ ಉತ್ತರ ಕೊಟ್ಟಿದೆ. ಅವನು ಶಂಕರ. ಸೇನೆಯಲ್ಲಿ ನೌಕರಿ ಮಾಡುವವನು. ದೇಶ ಕಾಯುವ ಯೋಧರಿಗೆ ಅಡುಗೆ ಮಾಡಿ ಬಡಿಸೋ ಕೆಲಸ ಅವನದ್ದು. ಇವನ ಊರಿನ ಜನಕ್ಕೂ ಇವನ ಕೆಲಸದ […]
ಸ್ಟೈಲಿಷ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ನಿರ್ದೇಶನದ ಸಿನಿಮಾಗಳೆಂದರೆ ಸಹಜವಾಗೇ ಎಲ್ಲರಲ್ಲಿಯೂ ಕುತೂಹಲ ಇದ್ದೇ ಇರುತ್ತದೆ. ಅವರ ಹಿಂದಿನ ಎಲ್ಲ ಸಿನಿಮಾಗಳಲ್ಲೂ ಹೊಸ ಸ್ಟಾರ್ಗಳು ಹುಟ್ಟಿಕೊಂಡಿದ್ದಾರೆ. ಭಾರತೀಯ ಸಿನಿಮಾ ರಂಗಗಳಲ್ಲಿ ಗುರುತಿಸಿಕೊಂಡಿದ್ದಾರೆ. ಈ ಬಾರಿ ಇಂದ್ರಜಿತ್ ಸ್ವತಃ ತಮ್ಮ ಮಗನನ್ನೇ ಕಣಕ್ಕಿಳಿಸಿದ್ದಾರೆ. ಹೀರೋ ಆಗಲು ಬೇಕಿರುವ ಎಲ್ಲ ಅರ್ಹತೆ ಹೊಂದಿರುವ ಸಮರ್ಜಿತ್ ಲಂಕೇಶ್ ಅನ್ನು ಬೆಳ್ಳಿ ತೆರೆಗೆ ಪರಿಚಯಿಸಿದ್ದಾರೆ. ಈ ವಾರ ತೆರೆಗೆ ಬಂದಿರುವ ಗೌರಿ ಸಿನಿಮಾದೊಂದಿಗೆ ಸಾಕಷ್ಟು ಕುತೂಹಲಗಳಿಗೆ ಉತ್ತರ ಸಿಕ್ಕಂತಾಗಿದೆ. ಇದು ಕಥಾಹಂದರ! ತಾಯಿಯ ಬಳುವಳಿ […]
ಈ ನೆಲದ ಗುಣವೋ ಏನೋ? ಬಹುತೇಕರು ತಮ್ಮ ಬದುಕನ್ನು ಒಂದಿಷ್ಟು ಸಿದ್ದ ಸೂತ್ರಗಳಿಗೆ ಕಟ್ಟಿಹಾಕಿಕೊಂಡಿರುತ್ತಾರೆ. ಹುಟ್ಟಿನಿಂದ ಸಾಯೋ ತನಕ ಒಂದಷ್ಟು ವಿಚಾರಗಳು ಬದುಕಿನಲ್ಲಿ ಘಟಿಸಿದರೇನೆ ಜೀವನ ಪರಿಪೂರ್ಣಗೊಳ್ಳುತ್ತದೆ ಎನ್ನುವ ಹುಸಿ ನಂಬಿಕೆಯನ್ನು ಬದುಕು ಬಿತ್ತಿದೆ. ವಿಜ್ಞಾನ, ಮನಸ್ಸು, ಮಬೋಭಾವಗಳು, ನಂಬಿಕೆಗಳು – ಈ ಎಲ್ಲ ವಿಚಾರಗಳ ಸುತ್ತ ಹರಡಿಕೊಂಡಿರುವ ಚಿತ್ರ ‘ಸಾಂಕೇತ’! ವೃತ್ತಿಯಿಂದ ಅವನು ವೈದ್ಯ. ಹೆಸರು ಪೃಥ್ವಿ. ಮದುವೆಯಾಗಿ ಮಕ್ಕಳನ್ನು ಹೊಂದಿದಾಗ ಮಾತ್ರ ತನ್ನ ಬದುಕು ಸಾರ್ಥಕತೆ ಕಾಣುತ್ತದೆ ಅನ್ನೋದು ಅವನ ನಂಬಿಕೆ. ದಂತವೈದ್ಯೆ ಪ್ರಕೃತಿಯನ್ನು […]
ಒಬ್ಬ ರಾಜಕಾರಣಿ, ರಾಜಕೀಯ ಪಕ್ಷ, ಸಂಘಟನೆ, ಲೀಡರು – ಯಾವುದೇ ಆಗಲಿ, ಭದ್ರವಾಗಿ ತಲೆಯೆತ್ತಿ ನಿಲ್ಲಬೇಕೆಂದರೆ ಅದೆಷ್ಟು ಜನರ ಜೀವಗಳು ಪಾಯದ ಕಲ್ಲಾಗಿರುತ್ತವೋ? ಯಾರೆಲ್ಲಾ ಇಟ್ಟಿಗೆ, ಜೆಲ್ಲಿ, ಮರಳಾಗಿ, ಮಣ್ಣಲ್ಲಿ ಮಣ್ಣಾಗಿಬಿಟ್ಟಿರುತ್ತಾರೋ? ಪಂಥ ಅನ್ನೋದು ಎಡದ್ದಾಗಿರಲಿ, ಬಲದ್ದಾಗಿರಲಿ ಬಲಿ ಕೇಳೇ ಕೇಳುತ್ತದೆ! ʻಯಾವುದೇ ವಿಚಾರವನ್ನು ಅತಿಯಾಗಿ ವಿರೋಧಿಸುವುದು ಅಥವಾ ಪರ ವಹಿಸುವವರ ಅಂತಿಮ ಉದ್ದೇಶ ಲಾಭʼ ಅಂತಾ ಪಿ. ಲಂಕೇಶರು ಹೇಳಿದ್ದಾರೆ. ಹಾಗೆಯೇ ರಾಜಕಾರಣ, ಸ್ಥಾನ ಅಂತಾ ಬಂದಾಗ ಮನುಷ್ಯ ಪರಮ ಸ್ವಾರ್ಥಿಯಾಗಿಬಿಡುತ್ತಾನೆ. ಅದು ಯಾವ ಮಟ್ಟಕ್ಕೆ […]
ʻಪ್ರತೀ ಮೋಸ ಶುರುವಾಗೋದೇ ನಂಬಿಕೆಯಿಂದ!ʼ ಹೌದಲ್ವಾ? ಈ ಒಂದು ಸಾಲು ಎಷ್ಟೊಂದು ಅರ್ಥ ಕೊಡುತ್ತದಲ್ಲವಾ? ನಂಬಿಕೆ ಅನ್ನೋದು ಇಲ್ಲದಿದ್ದರೆ ಮೋಸ ಅನ್ನೋದು ಹುಟ್ಟೋದೇ ಇಲ್ಲ… ಇತ್ತೀಚೆಗಂತೂ ಸೋಷಿಯಲ್ ಮೀಡಿಯಾಗಳು ನಂಬಿಕೆಯ ಹೆಸರಲ್ಲಿ ಅದೆಷ್ಟು ಜನರ ಮಾನ, ಪ್ರಾಣಗಳನ್ನು ನುಂಗಿಕೊಂಡಿದೆಯೋ? ಜನ್ಮೇಪಿ ಒಬ್ಬರನ್ನೊಬ್ಬರು ನೋಡಿರೋದೇ ಇಲ್ಲ; ಜೊತೆಗೆ ಆಡಿ ಬೆಳೆದವರೂ ಅಲ್ಲ… ಆನ್ ಲೈನ್ನಲ್ಲಿ ಪರಿಚಯಗೊಂಡು, ಆತ್ಮೀಯತೆ ಬೆಳೆದು, ಒಬ್ಬರಿಗೊಬ್ಬರ ಅಸಲೀಯತ್ತು ತಿಳಿಯೋ ಹೊತ್ತಿಗೆ ಬದುಕೇ ಮುಗಿದು ಹೋಗಿರುತ್ತದೆ. ಇದು ತಂತ್ರಜ್ಞಾನದಿಂದ ಸೃಷ್ಟಿಯಾದ ಗಂಡಾಂತರ! ಇಂಥದ್ದೇ ಒಂದು ಕಥಾವಸ್ತುವನ್ನು […]
ಅದೊಂದು ಫ್ಯಾಮಿಲಿ. ಗಂಡ, ಹೆಂಡತಿ, ಇಬ್ಬರು ಮಕ್ಕಳು. ಕೆಲಸ ಕಾರ್ಯ ಇಲ್ಲದೆ, ಹುಡುಗಿಯ ಹಿಂದೆ ತಿರುಗುವ ತಿರುಬೋಕಿ ಮಗ. ನೆಟ್ಟಗೆ ಇಂಗ್ಲಿಷು ಬರದಿದ್ದರೂ, ತಾನು ಮಾತಾಡಿದ್ದೇ ಭಾಷೆ ಅಂದುಕೊಂಡು ಕೆಲಸ ಹುಡುಕುವ ಮಗಳು. ಸಣ್ಣದೊಂದು ಹೊಟೇಲು ಆರಂಭಿಸುವ ಉದ್ದೇಶದಿಂದ ಹೆಣಗಾಡುವ ಕಿಲಾಡಿ ಮಮ್ಮಿ. ಈ ಮನೆಗೊಬ್ಬ ಕುಡುಕ ತಂದೆ. ಅಸಲಿಗೆ ಅವನು ಏನು ಕೆಲಸ ಮಾಡುತ್ತಿದ್ದಾನೆ ಅನ್ನೋದೇ ಉಳಿದ ಮೂವರಿಗೆ ಗೊತ್ತಿರೋದಿಲ್ಲ. ವಿಲಕ್ಷಣ, ವಿಚಿತ್ರ ಮತ್ತು ಸ್ವಾರ್ಥವನ್ನಷ್ಟೇ ಮುಖ್ಯವಾಗಿಸಿಕೊಂಡ ಕುಟುಂಬ. ಒಟ್ಟಾರೆಯಾಗಿ `ಕಿತ್ತೋದ ಫ್ಯಾಮಿಲಿ’ ಅನ್ನಿಸಿಕೊಳ್ಳುವ ಎಲ್ಲ […]
ಅವನ ಬದುಕಿನಲ್ಲಿ ಅದೇನೇನಾಗಿರುತ್ತದೋ ಗೊತ್ತಿಲ್ಲ. ಸ್ವಂತಕ್ಕೊಂದು ಕ್ಯಾಬ್ ಇಟ್ಟುಕೊಂಡು ಡ್ರೈವರ್ ಕೆಲಸ ಮಾಡುತ್ತಿರುತ್ತಾನೆ. ಕಣ್ಣ ಸುತ್ತ ಕಪ್ಪು ಕವಿದಿರುತ್ತದೆ. ಇಸ್ತ್ರಿ ಇಲ್ಲದ ಬಟ್ಟೆ, ಬಾಡಿದ ಮುಖ, ಕಳಾಹೀನ ಕಣ್ಣುಗಳು. ಅವನನ್ನು ಕಂಡವರಿಗೆ ಬದುಕಿನಲ್ಲಿ ಏನೆಂದರೆ ಏನೂ ಉಳಿದಿಲ್ಲವೆನ್ನುವ ಭಾವ ಮೂಡುತ್ತದೆ. ಇದರ ಜೊತೆಗೆ ಟಿ.ಬಿ. ಕಾಯಿಲೆಯೂ ಮೈಗಂಟಿರುತ್ತದೆ. ಹಾಗಂತ ಇದು ಶೂನ್ಯಕ್ಕೆ ತಲುಪಿದವನ ಹಿನ್ನೆಲೆಯನ್ನು ಕೆದುಕುವ ಕಥೆಯಲ್ಲ. ಡ್ರೈವರ್ ರಾಘವ ವಾಸ್ತವ್ಯಕ್ಕಿರುವ ಬಿಲ್ಡಿಂಗಿಗೇ ಮತ್ತೊಬ್ಬಳು ಯುವತಿ ಬರುತ್ತಾಳೆ. ಇವಳ ಹಿನ್ನೆಲೆಯಲ್ಲಿ ಏನೇನು ಅಧ್ಯಾಯಗಳಿದ್ದವೋ ಗೊತ್ತಿಲ್ಲ. ಒಟ್ಟಿನಲ್ಲಿ ಇಬ್ಬರೂ […]
ಆ ಊರಿನ ಸಮಾರಂಭವೊಂದಕ್ಕೆ ಚೀಫ್ ಗೆಸ್ಟ್ ಆಗಿ ಸ್ಟಾರ್ ನಟ ಮೈಕೆಲ್ ಮಧು ಬರಬೇಕಿರುತ್ತದೆ. ಆದರೆ ಆತ ಅಚಾನಕ್ಕಾಗಿ ಇಹಲೋಕ ತ್ಯಜಿಸಿರುತ್ತಾನೆ. ಇನ್ನು ಅತಿಥಿಯನ್ನು ಕರೆಸಲು ಉಳಿದಿರುವ ಕಾಂಟ್ಯಾಕ್ಟು ಇರೋದು ಕೃಷ್ಣಪ್ಪನಿಗೆ ಮಾತ್ರ. ಆ ಊರಲ್ಲಿ ಮೂರು ಜನ ಕೃಷ್ಣಪ್ಪಗಳಿರುತ್ತಾರೆ. ಅದರಲ್ಲಿ ಮೂರನೇಯವನು ಗಣಿತದ ಮೇಷ್ಟ್ರು. ಈ ಥರ್ಡ್ ಕೃಷ್ಣಪ್ಪನ ಸ್ನೇಹಿತನ ಮೂಲಕ ಊರಿಗೆ ಚೀಫ್ ಮಿನಿಸ್ಟರ್ ಅನ್ನು ಕರೆಸುವ ಪ್ರಯತ್ನವಾಗುತ್ತದೆ. ಈ ಹಂತದಲ್ಲಿ ಏನೇನಾಗುತ್ತದೆ? ಯಾರೆಲ್ಲಾ ಮೋಸ ಹೋಗುತ್ತಾರ್. ಫ್ರಾಡ್ ಅನ್ನುವ ಹಣೆಪಟ್ಟಿ ಕಟ್ಟಿಸಿಕೊಂಡ ಕೃಷ್ಣಪ್ಪ […]
ನಾನು ಕೈಗೆ ತಗೊಂಡ ಕೇಸು ಗೆದ್ದೇಗೆಲ್ಲುತ್ತೆ ಎನ್ನುವ ಕಾನ್ಫಿಡೆನ್ಸ್ ಹೊಂದಿದ ಕ್ರೇಜಿ ಲಾಯರ್ ಅವರು. ಲಾಯರ್ ಗೋವಿಂದ ಮುಟ್ಟಿದ ಕೇಸೆಂದರೆ ಜಡ್ಜ್ಗಳಿಗೂ ಒಂಥರಾ ಕ್ಯೂರಿಯಾಸಿಟಿ. ಇಂಥ ಪಬ್ಲಿಕ್ ಪ್ರಾಸಿಕ್ಯೂಟರ್ ಅದೊಂದು ಮರ್ಡರ್ ಕೇಸನ್ನು ಕೈಗೆತ್ತಿಕೊಳ್ಳುತ್ತಾರೆ. ಅದು ಎನ್ ಜಿ ಓ ಕಾರ್ಯಕರ್ತೆಯೊಬ್ಬಳ ಕೊಲೆ ಪ್ರಕರಣ. ತಮ್ಮದೇ ಶೈಲಿಯಲ್ಲಿ ವಾದ ಮಂಡಿಸುತ್ತಾರೆ. ಆರೋಪಿಗೆ ಶಿಕ್ಷೆಯನ್ನೂ ಕೊಡಿಸುತ್ತಾರೆ. ಅಸಲಿಗೆ ಆತ ಕೊಲೆಯನ್ನು ಮಾಡಿರೋದೇ ಇಲ್ಲ. ಹಾಗೆ ಕೊಲೆ ಕೇಸಿನಲ್ಲಿ ಜೈಲಿಗೆ ಹೋಗೋದೇ ನಾಯಕ ದಿಗಂತ್. ಮಾಡದ ಅಪರಾಧಕ್ಕಾಗಿ ಜೈಲಿಗೆ ಹೋದ […]