Swipe right
ಸ್ವೈಪ್ ರೈಟ್
‘ಡಾರ್ಲಿಂಗ್’ ಕೃಷ್ಣ ಅಭಿನಯದ ಚಿತ್ರಗಳಲ್ಲಿ ಇಬ್ಬರು ಹೀರೋಯಿನ್ ಗಳಿದ್ದರೆ, ಚಿತ್ರ ಹಿಟ್ ಆಗುತ್ತದಾ? ಇಂಥದ್ದೊಂದು ಕುತೂಹಲ ಗಾಂಧಿನಗರದ ಮಂದಿಯಲ್ಲಿದೆ. ಅದಕ್ಕೆ ಕಾರಣ, ಕೃಷ್ಣ ಅವರ ಹಿಂದಿನ ಯಾವ್ಯಾವ ಚಿತ್ರಗಳಲ್ಲಿ ಅವರಿಗೆ ಇಬ್ಬಿಬ್ಬರು ನಾಯಕಿಯರಿದ್ದರೋ ಅವೆಲ್ಲವೂ ಹಿಟ್ ಆಗಿವೆ. ‘ಲವ್ ಮಾಕ್ಟೇಲ್’ನಲ್ಲಿ ಇಬ್ಬರು ನಾಯಕಿಯರಿದ್ದರು. ಅದು ಹಿಟ್ ಆಯಿತು. ಕೆಲವು ತಿಂಗಳುಗಳ ಹಿಂದೆ ‘ಲಕ್ಕಿ ಮ್ಯಾನ್’ ಚಿತ್ರ ಬಿಡುಗಡೆಯಾಯಿತು. ಅದು ಸಹ ಯಶಸ್ವಿಯಾಯಿತು. ಈಗ ‘ದಿಲ್ ಪಸಂದ್’ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಅದರಲ್ಲೂ ಇಬ್ಬರು ನಾಯಕಿಯರು. ಹಾಗಾಗಿ, ಈ ಚಿತ್ರ […]
ನಿರೀಕ್ಷೆಗಳು ನಿಜವೇ ಆದರೆ ದಿಲ್ ಪಸಂದ್ ʻಲವ್ ಮಾಕ್ಟೇಲ್ʼ ಸರಣಿ ಸಿನಿಮಾಗಳಂತೆ ದೊಡ್ಡ ಮಟ್ಟದಲ್ಲಿ ಗೆಲ್ಲಲಿದೆ. ಮದರಂಗಿ ಕೃಷ್ಣ ಅವರನ್ನು ಹೇಗೆಲ್ಲಾ ನೋಡಲು ಜನ ಬಯಸುತ್ತಿದ್ದಾರೋ ಅಂಥಾದ್ದೇ ರೋಲಲ್ಲಿ ಕೃಷ್ಣ ಕಾಣಿಸಿಕೊಂಡಿದ್ದಾರೆ. ನಿಮಗೆಲ್ಲ ನೆನಪಿರಬೇಕು. ಇಸವಿ 2016ರಲ್ಲಿ ʻನಾನಿʼ ಹೆಸರಿನ ಸಿನಿಮಾ ಬಂದಿತ್ತು. ಪ್ರಣಾಳ ಶಿಶುವನ್ನು ಆವರಿಸಿದ್ದ ನೈಜ ಮತ್ತು ಭಯಾನಕ ಘಟನೆಯೊಂದರ ಸುತ್ತ ಹೆಣೆದಿದ್ದ ಸಿನಿಮಾವದು. ಆ ಚಿತ್ರವನ್ನು ನಿರ್ದೇಶಿಸಿದ್ದವರು ಸುಮಂತ್. ಇವರ ಮೂಲ ಹೆಸರು ರಾಘವೇಂದ್ರ ಗೊಲ್ಲಹಳ್ಳಿ. ತೀರಾ ಸಣ್ಣ ವಯಸ್ಸಿಗೇ ಚಿತ್ರ ನಿರ್ದೇಶಕನಾಗಬೇಕು […]
ಇಲ್ಲಿ ಕಾಣ್ತಿರೋ ಯಂಗ್’ಸ್ಟರ್ಸ್ ಮತ್ತವರ ಟೀಮ್ ಕಟ್ಟಿಕೊಟ್ಟಿರೋ ‘ಕಂಬ್ಳಿಹುಳ’ ಚಿತ್ರದ ಬಗ್ಗೆ ಬಹಳಷ್ಟು ಹೇಳಲಿಕ್ಕಿದೆ. ಈ ಚಿತ್ರ ಬರೀ ಒಂದು ಲವ್’ಸ್ಟೋರಿಯಾಗಿದ್ರೆ ನೋಡಿದವ್ರನ್ನ ಇಷ್ಟೆಲ್ಲ ಕಾಡ್ತಿರಲಿಲ್ಲ. ಇದು ಲವ್ ಸ್ಟೋರಿ ಫಾರ್ಮಟ್ಟನ್ನು ಜಂಪ್ ಮಾಡಿದ ಸಿನಿಮಾ. ಕನ್ನಡ ಸಿನಿಮಗಳಲ್ಲಿ ಹತ್ತತ್ತಿರ ಮಾಯವಾಗಿಯೇ ಹೋಗಿರುವ ‘ಸ್ಥಳೀಯ ಪರಿಸರ, ಜನಜೀವನ, ಹುಲುಮಾನವರು, ಸಣ್ಣ ಊರುಗಳ ಸಣ್ಣ ಬದುಕು ಬದುಕುವ ಜನಗಳ ನಡುವೆ ಈ ಕಥೆ ನಡೆಯುತ್ತದೆ. ಇಲ್ಲೊಮ್ಮೆ ಬರುವ ಹಾವಾಡಿಸುವ ವೃತ್ತಿಯವ ತನ್ನ ಕೆಲಸವೇ ಅಕ್ರಮವೆಂದಾಗಿ ಅವರಿವರನ್ನು ಅನ್ನಕ್ಕೆ ಕಾಸು […]
ನೀನು ದಿನಾ ಇಷ್ಟು ಊಟ ಮಾಡ್ತೀಯಾ? ಒಂದೊಂದು ಸರ್ತಿ ಇಷ್ಟೆಲ್ಲ ಊಟ ಕೊಡಿಸುವಷ್ಟು ದುಡ್ಡು ನನ್ನ ಹತ್ರ ಇರುತ್ತೋ ಇಲ್ವೋ…. ಎಂದು ಬಿಕ್ಕುತ್ತಾ ಹೇಳುತ್ತಾನೆ ಹುಡುಗ. ಇಲ್ಲ ಕಣೋ, ಇವತ್ತು ನೀನು ಹೋಗ್ತಿದ್ದೀಯ ಅಂತ ಬೇಜಾರಲ್ಲಿ ಬೆಳಿಗ್ಗೆಯಿಂದ ಏನೂ ತಿಂದಿರಲಿಲ್ಲ, ಅದಕ್ಕೆ ಸ್ವಲ್ಪ ಹೆಚ್ಚು ತಿಂದುಬಿಟ್ಟೆ, ಸಾರಿ ಕಣೋ ಎನ್ನುತ್ತಾಳೆ ಹುಡುಗಿ… ಇದು ಎಲ್ಲ ಹುಡುಗರ ಎದೆಯೊಳಗಿನ ಗಿಲ್ಟು, ಆತಂಕ. ಪ್ರೇಮ ಅನ್ನೋದು ಏನೇನೆಲ್ಲ ಮಾತಾಡಿಸುತ್ತೆ, ಚಂದ್ರನನ್ನೇ ಮಡಿಲಿಗೆ ತಂದುಕೊಡ್ತೀನಿ ಅಂತೀವಿ. ಆದರೆ ಬದುಕಿನ ವಾಸ್ತವ ಬೇರೆ. […]
ಬಹುತೇಕ ಹೆಣ್ಣುಮಕ್ಕಳ ವಿವಾಹ ನಂತರದ ಬದುಕಿಗೂ ಮುಂಚಿನದಕ್ಕೂ ವ್ಯತ್ಯಾಸಗಳಿರುತ್ತವೆ. ಬದುಕಲ್ಲಿ ಸಾಧನೆ ಮಾಡಬೇಕು, ನೊಂದವರಿಗೆ ಸಹಾಯ ಹಸ್ತ ಚಾಚಬೇಕು ಅಂದುಕೊಂಡವರೆಷ್ಟೋ ಜನ ಮದುವೆ ನಂತರ ಅವರದ್ದೇ ಜಂಜಾಟಗಳು, ಹೊಸ ಬದುಕಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲೇ ಮಗ್ನರಾಗಿಬಿಡುತ್ತಾರೆ. ಆದರೆ ಸುನಿತಾ ಅವರ ಸುಕೃತವೋ ಏನೋ ಅವರ ಎಲ್ಲ ಕನಸುಗಳಿಗೆ ಬೆಳಕಾಗುವಂತೆ ಪತಿ ಮಂಜುನಾಥ್ ಅವರ ಬೆನ್ನೆಲುಬಾಗಿ ನಿಂತರು. ಬದುಕಲ್ಲಿ ಕಷ್ಟ ಕಂಡವರು ಮಾತ್ರ ಮತ್ತೊಬ್ಬರ ಕಣ್ಣೀರು ಒರೆಸಲು ಸಾಧ್ಯ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಗಿರುವ ದೊಡ್ಡಬಳ್ಳಾಪುರದಲ್ಲಿ ದೊಡ್ಡರಾಯಪ್ಪನಹಳ್ಳಿ ಎನ್ನುವ ಪುಟ್ಟ […]
ಈ ವರ್ಷ ಪ್ರಾರಂಭವಾಗುವುದಕ್ಕೆ ಮುನ್ನ ಕನ್ನಡ ಚಿತ್ರರಂಗದ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಇದು ಚಿತ್ರರಂಗದ ಪಾಲಿಗೆ ಬಹಳ ಮಹತ್ವದ ವರ್ಷವಾಗಿತ್ತು. ‘ಕೆಜಿಎಫ್ 2’, ‘ವಿಕ್ರಾಂತ್ ರೋಣ’, ‘777 ಚಾರ್ಲಿ’, ಜೇಮ್ಸ್, ಅವತಾರ ಪುರುಷ ಸೇರಿದಂತೆ ಒಂದಿಷ್ಟು ನಿರೀಕ್ಷೆಯ ಚಿತ್ರಗಳು ಬಿಡುಗಡೆಗೆ ಕಾದಿದ್ದವು. ಅವೆಲ್ಲವೂ ದೊಡ್ಡ ಬಜೆಟ್ ಚಿತ್ರಗಳಷ್ಟೇ ಅಲ್ಲ, ಪ್ಯಾನ್ ಇಂಡಿಯಾ ಮಟ್ಟದ ಚಿತ್ರಗಳು. ಹಾಗಾಗಿ, ಈ ಚಿತ್ರಗಳು ಏನಾಗಬಹುದು ಎಂದು ಎಲ್ಲರಿಗೂ ಕುತೂಹಲವಿತ್ತು. ಈಗ 2022 ಮುಗಿಯುತ್ತಾ ಬಂದಿದೆ. ಈ ವರ್ಷ ಹೇಗಿತ್ತು ಎಂಬುದನ್ನು ಬಿಡಿಸಿ […]
ಲವ್ ಸಬ್ಜೆಕ್ಟಿನ ಸಿನಿಮಾ ಮಾಡುವವರು ತೀರಾ ಫ್ರೆಶ್ ಎನಿಸುವ ಸಂಭಾಷಣೆ ಬೇಕೆನಿಸಿದರೆ, ಹೇಗಾದರೂ ಅಜ್ಜೀಪುರದ ಈ ರವಿಯನ್ನು ಒಪ್ಪಿಸಿ ಬರೆಸಿಕೊಳ್ಳಿ. ಇವರು ರವಿ ಅಜ್ಜೀಪುರ. ಮಾಧ್ಯಮ ವಲಯದಲ್ಲಿವರು ಸದಾ ಪ್ರವಹಿಸುವ ಅಚ್ಚರಿ. ಪ್ರಿಂಟ್ ಮೀಡಿಯಾದಲ್ಲಿ ಹೆಸರು ಮಾಡುತ್ತಿದ್ದಾಗಲೇ ಸಡನ್ನಾಗಿ ಟೀವಿ ಮಾಧ್ಯಮದತ್ತ ಮುಖ ಮಾಡಿದವರು. ಅಲ್ಲಿಂದ ಮತ್ತೆ ಪತ್ರಿಕೆಯ ಕಡೆ ‘ಮನಸು’ ಕೊಟ್ಟವರು. ಪತ್ರಕರ್ತರಾಗಿದ್ದುಕೊಂಡೇ ವಿನ್ಯಾಸ ಕಲಾವಿದರಾಗಿ, ನೂರಾರು ಪುಸ್ತಕಗಳ ಮುಖಪುಟಗಳಿಗೆ ಬಣ್ಣ ತುಂಬಿದವರು. ಒಂದು ಪತ್ರಿಕೆಯ ಕಂಟೆಂಟ್ ಹೇಗಿರಬೇಕು ಅನ್ನೋದರ ಜೊತೆಗೆ ಅದರ ಪ್ರೆಸೆಂಟೇಷನ್ ಕೂಡಾ […]