ವೈಜ್ಞಾನಿಕ ಕಥೆಯ ನ್ಯೂರಾನ್!

Picture of Cinibuzz

Cinibuzz

Bureau Report

ನ್ಯೂರಾನ್ ಎಂದಕೂಡಲೇ ಇದು ಸೈನ್ಸ್‌ಗೆ ಸಂಬಂಧಪಟ್ಟ ಕಥೆಯಿರಬಹುದು ಅಂತ ತಕ್ಷಣವೇ ಊಹಿಸಬಹುದು, ನಿಮ್ಮ  ಊಹೆ ಸರಿಯಾಗಿದೆ.  ಇದು  ಮನುಷ್ಯನ ಮನಸಿಗೆ ಸಂಬಂಧಿಸಿದ ಕಥೆ  ಇರುವ ಚಿತ್ರ. ವಿಕಾಸ್ ಪುಷ್ಪಗಿರಿ  ಈ  ಚಿತ್ರಕ್ಕೆ  ಆಕ್ಷನ್ ಕಟ್ ಹೇಳಿದ್ದಾರೆ.   ವಿನಯ್‌ಕುಮಾರ್   ಈ ಚಿತ್ರಕ್ಕೆ  ಬಂಡವಾಳ ಹೂಡಿದ್ದಾರೆ.  ನ್ಯೂರಾನ್  ಚಿತ್ರದ  ಟೀಸರ್ ಅನಾವರಣ ಕಾರ್ಯಕ್ರಮ  ಇತ್ತೀಚೆಗೆ   ನೆರವೇರಿತು.  ವಿಕಾಸ್ ಪುಷ್ಪಗಿರಿ   ಈ ಚಿತ್ರದ ಕಥೆ, ಚಿತ್ರಕಥೆ  ಬರೆದು  ನಿರ್ದೇಶನ ಮಾಡಿರುವ  ಈ ಚಿತ್ರಕ್ಕೆ  ಮಡಿಕೇರಿ, ಸಕಲೇಶಪುರ ಹಾಗೂ ಬೆಂಗಳೂರು  ಸುತ್ತಮುತ್ತ  ಸುಮಾರು  45 ದಿನಗಳ ಕಾಲ  ಚಿತ್ರೀಕರಣ ನಡೆಸಲಾಗಿದೆ. ಯುವ  ಈ ಚಿತ್ರದಲ್ಲಿ  ನಾಯಕನಾಗುವ ಮೂಲಕ ಚಿತ್ರರಂಗ ಪ್ರವೇಶಿಸಿದ್ದಾರೆ.  ಒಂದು ಸೈನ್ಸ್  ಫಿಕ್ಷನ್  ಕಥಾನಕವನ್ನು  ಒಳಗೊಂಡಿರುವ ಈ ಚಿತ್ರದಲ್ಲಿ  ಒಂದು   ಲವ್ ಟ್ರ್ಯಾಕ್ ಕೂಡ  ಇದೆ. ಅಲ್ಲದೆ  ಚಿತ್ರಕಥೆಯಲ್ಲಿ  ಸಾಕಷ್ಟು  ಟ್ವಿಸ್ಟ್‌ಗಳಿದ್ದು,  ಕುತೂಹಲ   ಮೂಡಿಸುತ್ತವೆ.  ಇತ್ತೀಚಿಗಷ್ಟೇ  ಈ ಚಿತ್ರದ  ಟ್ರೇಲರನ್ನು ಬಿಡುಗಡೆ  ಮಾಡಿದ  ನಟ ಶಿವರಾಜ್‌ಕುಮಾರ್,  ಶ್ರೀಮುರುಳಿ, ಯೋಗಿ  ಚಿತ್ರದ ಬಗ್ಗೆ ಮೆಚ್ಚುಗೆಯ  ತುಗಳನ್ನಾಡಿ  ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ನಮ್ಮ  ಮನಸಿಗೆ  ಬಂದ ಯಾವುದೇ  ಒಂದು ವಿಷಯವಾದರೂ ಅದು  ಮೊದಲು  ತಲುಪುವುದು  ಮೆದುಳಿಗೆ.  ಆದರೆ  ನಮ್ಮ  ಮನಸಿನಿಂದ  ಅದು  ಯಾವ ರೀತಿ ಮೆದುಳಿಗೆ ರೀಚ್ ಆಗುತ್ತದೆ, ಹೇಗೆಲ್ಲಾ  ಆಪರೇಟ್ ಆಗುತ್ತದೆ,  ಮನಸಿನ ವಿಚಾರವಾಗಿ ನಡೆಯುವ  ಘಟನೆಗಳು  ನಮ್ಮ  ಜೀವನದಲ್ಲಿ  ಹೇಗೆ ಮುಖ್ಯವಾಗುತ್ತವೆ ಎಂಬುದನ್ನು  ಒಂದು ಸಸ್ಪೆನ್ಸ್, ಥ್ರಿಲ್ಲರ್ ಕಥಾನಕದ  ಮೂಲಕ  ಈ ಚಿತ್ರದಲ್ಲಿ  ಹೇಳುವ ಪ್ರಯತ್ನ ನಿರ್ದೇಶಕ  ವಿಕಾಸ್ ಪುಷ್ಪಗಿರಿ ಅವರಿಂದ  ನಡೆದಿದೆ. ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ  ವಿಕಾಸ್ ಪುಷ್ಪಗಿರಿ ಅವರಿಗೆ  ಇದು  ಚೊಚ್ಚಲ ನಿರ್ದೇಶನದ ಚಿತ್ರ. ಒಂದು ಮೈಂಡ್ ಗೇಮ್ ಆಧಾರದ ಮೇಲೆ  ಈ ಚಿತ್ರದ ಕಥೆ ನಡೆಯುತ್ತದೆ. ಪುಟ್ಟಣ್ಣ ಕಣಗಾಲ್ ಅವರ  ಎಡಕಲ್ಲು ಗುಡ್ಡದ  ಮೇಲೆ ಚಿತ್ರವನ್ನು ಶೂಟ್ ಮಾಡಿದ್ದ ಬೆಟ್ಟದಲ್ಲಿ   ನ್ಯೂರಾನ್ ಚಿತ್ರದ ಚಿತ್ರೀಕರಣ  ನಡೆಸಿರುವುದು  ಚಿತ್ರದ ಮತ್ತೊಂದು ವಿಶೇಷ.  ದಶಕಗಳ ನಂತರ  ಆ  ಸ್ಥಳದಲ್ಲಿನ  ಸುಮಾರು  6 ಕಿಲೋಮೀಟರ್‌ಗಳಷ್ಟು   ಜಾಗವನ್ನು  ಸ್ಚಚ್ಚ  ಮಾಡಿಕೊಂಡು  ಈ ಚಿತ್ರದ ಪ್ರಮುಖ ದೃಶ್ಯವನ್ನು  ಚಿತ್ರೀಕರಿಸಲಾಗಿದೆ.

ಯುವನಟ  ಯುವ ಈ ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಇನ್ನುಳಿದಂತೆ ನೇಹಾ ಪಾಟೀಲ್, ವೈಷ್ಣವಿ ಮೆನನ್  ಹಾಗೂ ಶಿಲ್ಪಾ  ಶೆಟ್ಟಿ  ಚಿತ್ರದ  ಮೂವರು ನಾಯಕಿಯರ ಪಾತ್ರಗಳಲ್ಲಿ  ಕಾಣಿಸಿಕೊಂಡಿದ್ದಾರೆ.  ಹಿರಿಯ ನಟ ಜೈಜಗದೀಶ್,  ವರ್ಷ, ಅರವಿಂದ್ ರಾವ್, ಕಬೀರ್ ಸಿಂಗ್(ಬಾಂಬೆ), ರಾಕ್‌ಲೈನ್ ಸುಧಾಕರ್, ಕಾರ್ತಿಕ್ ಮುಂತಾದವರು  ಈ ಚಿತ್ರದ  ಉಳಿದ ತಾರಾಬಳಗದಲ್ಲಿದ್ದಾರೆ.  ಶ್ರೀನಿವಾಸ ಗೌಡ ಈ ಚಿತ್ರದ  ನಿರ್ಮಾಪಕರ ಜೊತೆ ನಿಂತು  ಅವರಿಗೆ  ಪೋರ್ಟ್  ಮಾಡುತ್ತಿದ್ದಾರೆ.

ಗುರುಕಿರಣ್  ಅವರ  ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಹೈದರಾಬಾದ್‌ನ ಶೋಯಬ್ ಅಹಮದ್ ಛಾಯಾಗ್ರಹಣ ಮಾಡಿದ್ದಾರೆ.  ಶ್ರೀಧರ್  ಅವರ ಸಂಕಲನ, ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಹಾಗೂ ಶಿವಕುಮಾರ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಡಾ|| ವಿ.ನಾಗೇಂದ್ರ ಪ್ರಸಾದ್ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಶ್ರೀಹರ್ಷ  ಅವರ ಸಂಭಾಷಣೆ  ಚಿತ್ರಕ್ಕಿದೆ.

ಇನ್ನಷ್ಟು ಓದಿರಿ

Scroll to Top