ನಟ ಧರ್ಮಕೀರ್ತಿರಾಜ್, ನಟಿಯರಾದ ಅನುಷಾ ರೈ ಹಾಗೂ ರಿಷಾ ಗೌಡ ಹಾಗೂ ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಪ್ರತಿಷ್ಠಿತ ಪ್ರಶಸ್ತಿಯಾದ ಎಜುಕೇಷನ್ ಎಕ್ಸಲೆನ್ಸ್ ಆ್ಯಂಡ್ ಹಾನರ್ ೨೦೨೬ ಅವಾರ್ಡ್ ಅನ್ನು “ಚೆನ್ನೈಸ್ ಅಮಿರ್ತಾ ( Chennais Amirta hotel management and Aviation ) ಹೋಟೆಲ್ ಮ್ಯಾನೇಜ್‌ಮೆಂಟ್ ಅಂಡ್ ಏವಿಯೇಷನ್ ಕಾಲೇಜಿನ ಚೇರ್ಮನ್ ಆದ ಆರ್. ಬೂಮಿನಾಥನ್ ಅವರ ಪರವಾಗಿ ಬಂದ ಕಾಲೇಜಿನ ಪ್ರಿನ್ಸಿಪಲ್ ಪ್ರೋ. ಸ್ವಾಮಿನಾಥನ್ ಅವರಿಗೆ ನೀಡಿ ಗೌರವಿಸಿದ್ದಾರೆ.

ವಿದ್ಯಾರ್ಥಿಗಳನ್ನು ತಿದ್ದಿತೀಡಿ ಅವರನ್ನು ಸಂಪೂರ್ಣ ಶಿಲೆಯನ್ನಾಗಿ ನಿರ್ಮಿಸುವವರು ನೀವು, ನಿಮಗೆ ಪ್ರಶಸ್ತಿ ನೀಡೋದು ಖುಷಿ ಎಂದಿದ್ದಾರೆ ನಟ ಬಿಗ್‌ಬಾಸ್ ಕನ್ನಡ ಸೀಸನ್ ೧೧ರ ಕಂಟೆಸ್ಟೆಂಟ್ ಧರ್ಮಕೀರ್ತಿ ರಾಜ್. ಪ್ರತೀಯೊಬ್ಬರ ಜೀವನಕ್ಕೂ ಶಿಕ್ಷಣ ತುಂಬ ಮುಖ್ಯ, ಎಜುಕೇಶನ್ ನಮಗೆ ಸಿಕ್ಕಿರೋದಕ್ಕೆ ನಾನಿವತ್ತು ಇಲ್ಲಿ ನಿಲ್ಲೋಕೆ ಸಾಧ್ಯ ಆಗಿದೆ ಅಂತಾರೆ ನಟಿ ಅನುಷಾ ರೈ. ಮಕ್ಕಳ ಬದುಕನ್ನು ರೂಪಿಸುವ ಶಿಕ್ಷಣ ಕ್ಷೇತ್ರದ ಸಾಧಕರನ್ನು ಗುರುತಿಸಿ ಎಜುಕೇಶನ್ ಎಕ್ಷಲೆನ್ಸ್ ಪ್ರಶಸ್ತಿ ಕೊಡ್ತಿರೋದು ತುಂಬ ಖುಷಿ ಅಂದ್ರು ಮಾಡೆಲ್ ಹಾಗೂ ನಟಿ ರಿಷಾ ಗೌಡ. ಪ್ರತಿಷ್ಟಿತ ಸಂಸ್ಥೆಯೊಂದು ನೀಡುವಂತೆ ಈ ಪ್ರತಿಷ್ಠಿತ ಅವಾರ್ಡ್ನ ಚೆನ್ನೈಸ್ ಅಮಿರ್ತಾ ಹೋಟೆಲ್ ಮ್ಯಾನೇಜ್‌ಮೆಂಟ್ ಹಾಗೂ ಏವಿಯೇಷನ್ ಬೆಂಗಳೂರು ವಿಭಾಗದ ಪ್ರಿನ್ಸಿಪಲ್ ಸ್ವಾಮಿನಾಥನ್ ಅವರಿಗೆ ಧರ್ಮಕೀರ್ತಿ ರಾಜ್, ಅನುಷಾ ರೈ, ರಿಷಾ ಗೌಡ ಹಾಗೂ ಸಚಿವರಾದ ಶಿವಾನಂದ ಪಾಟೀಲ್ ನೀಡಿ ಗೌರವಿಸಿದ್ದಾರೆ. ಈ ಮೂಲಕ ಚೆನ್ನೈಸ್ ಅಮಿರ್ತಾ ಕಾಲೇಜು ಬೆಂಗಳೂರಿನ ಬೆಸ್ಟ್ ಹೋಟೆಲ್ ಮ್ಯಾನೇಜ್‌ಮೆಂಟ್ ಹಾಗೂ ಏವಿಯೇಷನ್ ಕಾಲೇಜು ಎನ್ನುವ ಹೆಗ್ಗಳಿಕೆಗೆ ಕಾರಣವಾಗಿದೆ.

ನಮ್ಮ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಿದಕ್ಕೆ ಧನ್ಯವಾದ , ನಾವು ಇನ್ನಷ್ಟು ಸ್ಪೂರ್ತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇವೆ ಎಂದಿದ್ದಾರೆ ಪ್ರಶಸ್ತಿ ಸ್ವೀಕರಿಸಿದ ಕಾಲೇಜಿನ ಪ್ರಿನ್ಸಿಪಲ್ ಸ್ವಾಮಿನಾಥನ್ ಅವರು.











































