ಬಹು ನಿರೀಕ್ಷೆ ಹುಟ್ಟಿಸಿರುವ ಮಂಗಳೂರಿನ ಕನ್ನಡ ಚಲನಚಿತ್ರ ದಾಮಾಯಣದ ಆಡಿಯೋ ಹಕ್ಕನ್ನು ಲಹರಿ ಮ್ಯೂಸಿಕ್ ಸಂಸ್ಥೆ ತನ್ನದಾಗಿಸಿಕೊಂಡಿದೆ. ಈಗಾಗಲೇ ಕನ್ನಡ, ತಮಿಳು ಹಾಗೂ ತೆಲುಗು ಚಲನಚಿತ್ರಗಳ ಆಡಿಯೋ ಹಕ್ಕುಗಳನ್ನು ಹೊಂದಿರುವುದಕ್ಕೆ ‘ಲಹರಿ ಮ್ಯೂಸಿಕ್ ಹೆಸರುವಾಸಿಯಾಗಿದೆ.

‘ಸೆವೆಂಟಿ ಸೆವೆನ್ ಸ್ಟುಡಿಯೋಸ್’ ಸಂಸ್ಥೆಯ ನಿರ್ಮಾಣದ ‘ದಾಮಾಯಣ’ದಲ್ಲಿ ಒಟ್ಟು ಐದು ಹಾಡುಗಳಿದ್ದು, ಕೀರ್ತನ್ ಬಾಳಿಲ ಅವರ ಸಂಗೀತವಿದೆ. ನಿರ್ದೇಶಕ ಶ್ರೀಮುಖ, ಖ್ಯಾತ ಯಕ್ಷಗಾನ ಅರ್ಥಧಾರಿ ವೆಂಕಟರಾಮ ಭಟ್, ಶಶಿಕಿರಣ್ ಆನೆಕಾರ್ ಅವರ ಸಾಹಿತ್ಯವಿದೆ. ಹೆಸರಾಂತ ಗಾಯಕ ನವೀನ್ ಸಜ್ಜು, ಸರಿಗಮಪ ಖ್ಯಾತಿಯ ಗಾಯಕರಾದ ರಜತ್ ಹೆಗ್ಡೆ, ನಿನಾದ ಯು. ನಾಯಕ್ ಮತ್ತು ನಿಹಾಲ್ ತೌರೋ ಹಿನ್ನೆಲೆ ಗಾಯನವಿದೆ. ಮುಂದಿನ ತಿಂಗಳುಗಳಲ್ಲಿ ‘ದಾಮಾಯಣದ ಆಡಿಯೋ ರಿಲೀಸ್ ಆಗುವ ಸಾಧ್ಯತೆ ಇದೆ. ಚಿತ್ರದ ಒಂದುವರೆ ನಿಮಿಷದ ಟೀಸರ್ ಸಿದ್ದವಾಗಿದ್ದು, ‘ಲಹರಿ ಮ್ಯೂಸಿಕ್’ ಯೂಟ್ಯೂಬ್ ಚಾನಲ್‍ನಲ್ಲಿ ಸದ್ಯದಲ್ಲೇ ಬಿಡುಗಡೆಗೊಳ್ಳಲಿದೆ.











































