ಮಾದಕ ವ್ಯಸನದ ಜಾಗೃತಿ ಸಿನಿಮಾ ಕನಲೆರಿಯುಂ ಬಾಲ್ಯಂ!

Picture of Cinibuzz

Cinibuzz

Bureau Report

ಮಾದಕ ವ್ಯಸನ ಮತ್ತು ಮಧ್ಯಪಾನದ ಪರಿಣಾಮವಾಗಿ ಹಾದಿ ತಪ್ಪುತ್ತಿರುವ ಯುವ ಜನಾಂಗಕ್ಕೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ “ಕನಲೆರಿಯುಂ ಬಾಲ್ಯಂ(ಬೆಂಕಿಯಲ್ಲಿ ಸುಡುವ ಬಾಲ್ಯ)” ಎಂಬ ಕಿರುಚಿತ್ರವೊಂದು ಸಿದ್ಧವಾಗಿದೆ. ಕಿನಾನೂರು-ಕರಿಂದಳಂ ಗ್ರಾಮ ಪಂಚಾಯತ್ ವತಿಯಿಂದ ರಾಜ್ಯ ಅಬಕಾರಿ, ಆರೋಗ್ಯ, ಶಿಕ್ಷಣ ಇಲಾಖೆಗಳ ಸಹಕಾರದೊಂದಿಗೆ ಈ ಕಿರುಚಿತ್ರದ ನಿರ್ಮಾಣವಾಗುತ್ತಿದೆ. ಇನ್ನು ಈ ಚಿತ್ರದ ಕಥೆ, ಚಿತ್ರಕತೆ ಬರೆದು ಅಜಿ ಕುಟ್ಟಮತ್ ಅವರು ನಿರ್ದೇಶನ ಮಾಡಿದ್ದಾರೆ.

ಮಾದಕ ಪದಾರ್ಥಗಳ ಬಳಕೆ ವಿರುದ್ಧ ಸಾಧಾರಣ ಗತಿಯಲ್ಲಿ ನಡೆಸುವ ಜಾಗೃತಿ ತರಗತಿ ಇತ್ಯಾದಿಗಳಿಗಿಂತ ಭಿನ್ನವಾಗಿ ಹೆಚ್ಚುವರಿ ಪರಿಣಾಮ ನೀಡಲಿದೆ ಎಂಬ ಕಾರಣಕ್ಕಾಗಿ ಕಿರುಚಿತ್ರ ನಿರ್ಮಿಸುವ ಯೋಜನೆ ಕಿನಾನೂರು-ಕರಿಂದಳಂ ಗ್ರಾಮ ಪಂಚಾಯತ್ ಹಮ್ಮಿಕೊಂಡಿತ್ತಂತೆ. ಇದಕ್ಕೆ ವಿವಿಧ ಇಲಾಖೆಗಳ ಬೆಂಬಲವೂ ಲಭಿಸಿದಾಗ ನಿರೀಕ್ಷೆಗೂ ಮೀರಿ ತ್ವರಿತ ಗತಿಯಲ್ಲಿ ಚಿತ್ರೀಕರಣ ಪೂರ್ಣಗೊಳಿಸಲು ಸಾಧ್ಯವಾಯಿತಂತೆ. ಈ ಕಿರುಚಿತ್ರದ ಚಿತ್ರೀಕರಣವನ್ನು ಕಾಸರಗೋಡು, ಪರಪ್ಪ,ನೀಲೇಶ್ವರಂ, ಶಿವಮೊಗ್ಗ, ವಳಪಟ್ಟಣಂ ಮೊದಲಾದ ಪ್ರದೇಶಗಳಲ್ಲಿ ನಡೆಸಲಾಗಿದೆಯಂತೆ. ಒಂದೂವರೆ ಗಂಟೆ ಅವಧಿಯ ಈ ಕಿರುಚಿತ್ರವನ್ನು ಮುಂದಿನ ತಿಂಗಳ ಮೊದಲ ವಾರ ರಿಲೀಸ್ ಮಾಡಲಾಗುವುದಂತೆ.

ಇನ್ನಷ್ಟು ಓದಿರಿ

Scroll to Top