ವಿಷ್ಣು ವರ್ಧನ್ ಅವರನ್ನು ನೆನಪಿಸಿದ ವಿಷ್ಣು ಸರ್ಕಲ್!

Picture of Cinibuzz

Cinibuzz

Bureau Report

ಸಾಹಸ ಸಿಂಹ ಡಾ. ವಿಷ್ಣು ವರ್ಧನ್ ಅವರ ಹೆಸರಿಟ್ಟುಕೊಂಡು ತಯಾರಾದ ಬಹಳಷ್ಟು ಚಿತ್ರಗಳು ಸ್ಯಾಂಡಲ್ ವುಡ್ ನಲ್ಲಿ ಸಕ್ಸಸ್ ಕಂಡಿವೆ. ಸದ್ಯ ಅದೇ ದಾರಿಯಲ್ಲಿರುವ ವಿಷ್ಣು ಸರ್ಕಲ್ ಕೂಡ ಅಂತಹುದೇ ನಿರೀಕ್ಷೆಯಲ್ಲಿದೆ. ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ವಿಷ್ಣು ಸರ್ಕಲ್ ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು, ನವರಸ ಜಗ್ಗೇಶ್ ರವರು ಕಾರ್ಯಕ್ರಮದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದರು. ಧ್ವನಿ ಸಾಂದ್ರಿಕೆಯನ್ನು ರಿಲೀಸ್ ಮಾಡಿ ಮಾತನಾಡಿದ ಅವರು, “ವಿಷ್ಣು ಸರ್ ಅವರನ್ನು ವಿಜಯ್ ವಿಕ್ರಂ ಚಿತ್ರದ ಶೂಟಿಂಗ್ ನಲ್ಲಿ ನಾನು ಮೊದಲು ನೋಡಿದ್ದೆ. ಮುಂದೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಕಂಡು ಆತ್ಮೀಯವಾಗಿ ಮಾತನಾಡಿಸಿದ್ದರು. ಅವರೊಂದಿಗೆ ಊಟ ಮಾಡುವ ಅವಕಾಶವೂ ಒದಗಿ ಬಂದಿತ್ತು. ಅವರು ಭವಿಷ್ಯವನ್ನು ಚೆನ್ನಾಗಿ ಹೇಳುತ್ತಿದ್ದರು. ಅವರ ಬಾಯಾರಿಕೆಯಿಂದಲೇ ಒಂದೂ ಕಾಲು ಎಕರೆ ಜಾಗವನ್ನು ನಾನು ಪಡೆದುಕೊಂಡಿದ್ದೆ. ಸದ್ಯ ಸುದೀಪ್, ಯಶ್ ತಮ್ಮ ಸಿನಿಮಾಗಳಲ್ಲಿ ಅವರನ್ನು ಜೀವಂತವಾಗಿರಿಸಿದ್ದಾರೆ”.

ಇನ್ನು ವಿಷ್ಣು ಸರ್ಕಲ್ ಚಿತ್ರಕ್ಕೆ ಮಗನ ಸಿನಿಮಾವೆಂದು ತಂದೆಯಾಗಿ ಹಾರೈಸಲು ಬಂದಿದ್ದೇನೆ. ನಮ್ಮ ಕಾಲದಂತೆ ಈಗ ಚಿತ್ರರಂಗವಿಲ್ಲ. ಡಾ. ರಾಜ್ ಕುಮಾರ್ ಅಷ್ಟೊಂದು ಹತ್ತಿರವಾಗಿದ್ದರೂ ಅವರ ಚಿತ್ರದಲ್ಲಿ ನಟಿಸುವ ಭಾಗ್ಯ ಸಿಗಲಿಲ್ಲ. ಜೀವನ ಚೈತ್ರದಲ್ಲಿ ಸಿಕ್ಕರೂ ದೊರೆ ಭಗವಾನ್ ಆಶೀರ್ವಾದದಿಂದ ಅದು ಟೆನ್ನಿಸ್ ಕೃಷ್ಣ ಪಾಲಾಯಿತು. ಸ್ವಾಭಿಮಾನಿ ಕನ್ನಡಿಗರು ಮೊದಲು ನಮ್ಮಚಿತ್ರಕ್ಕೆ ರೆಡ್‍ ಕಾರ್ಪೆಟ್ ಹಾಕಿ, ನಂತರ ಬೇರೆ ಭಾಷೆಯ ಚಿತ್ರಗಳಿಗೆ ಮನ್ನಣೆಕೊಡಬೇಕೆಂದು ಕರೆ ನೀಡಿ ಮಾತಿಗೆ ಫುಲ್ ಸ್ಟಾಪ್ ಹಾಕಿದರು.

ವಿಷ್ಣು ಸರ್ಕಲ್ ಚಿತ್ರದಲ್ಲಿ ಗುರುರಾಜ್ ಜಗ್ಗೇಶ್ ನಾಯಕನಾಗಿ ಅಭಿನಯಿಸಿದ್ದು, ಸಾಲ ಮರು ಪಾವತಿ ಹುಡುಗನಾಗಿ ಗುರುರಾಜ್ ಕಾಣಿಸಿಕೊಂಡಿದ್ದಾರೆ. ಮಿಕ್ಕಂತೆ ಚಿತ್ರದ ಟೈಟಲ್ಲು, ನಾಯಕಿಯರ ಪಾತ್ರದ ಹೆಸರುಗಳಿಗೆಲ್ಲ ಸಿನಿಮಾದಲ್ಲಿ ಉತ್ತರ ಸಿಗಲಿದೆ ಎಂದು ಹೇಳುತ್ತ ನಿರ್ದೇಶಕ ಲಕ್ಷ್ಮೀ ದಿನೇಶ್ ನಕ್ಕು ಸುಮ್ಮನಾದರು. ಆರ್. ಭಾಸ್ಕರ್ ವಿಷ್ಣು ಸರ್ಕಲ್ ಗೆ ಬಂಡವಾಳ ಹೂಡಿದ್ದು, ಅವರು ಸಹ ವಿಷ್ಣು ವರ್ಧನ್ ಅವರ ಕಟ್ಟಾ ಅಭಿಮಾನಿ. ಇನ್ನು ಗುರುರಾಜ್ ಗೆ ನಾಯಕಿಯರಾಗಿ ಸಂಹಿತಾ ವಿನ್ಯಾ, ಜಾಹ್ನಿ ಜ್ಯೋತಿ, ದಿವ್ಯಾ ಗೌಡ ತೆರೆ ಹಂಚಿಕೊಂಡಿದ್ದಾರೆ.

ಇನ್ನಷ್ಟು ಓದಿರಿ

Scroll to Top