ಶರತ್ ಲೋಹಿತಾಶ್ವರನ್ನು ಕುರುಕ್ಷೇತ್ರದಲ್ಲಿ ಯಾಕೆ ಕಡೆಗಣಿಸಿದರು?

Picture of Cinibuzz

Cinibuzz

Bureau Report

ತಮ್ಮ ಅಮೋಘ ನಟನೆಯಿಂದ ಕನ್ನಡ ಮಾತ್ರವಲ್ಲದೇ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ನಟ ಶರತ್ ಲೋಹಿತಾಶ್ವ. ಬಹುಶಃ ಅತ್ಯಂತ ಕಿರಿಯವರಾಗಿದ್ದೂ ವಯಸ್ಸಿಗೆ ಮೀರಿದ ಪಾತ್ರಗಳನ್ನೇ ಅತಿ ಹೆಚ್ಚು ನಿಭಾಯಿಸುತ್ತಾ ಬಂದವರು. ಈಗ ರಾಮಾರ್ಜುನ ಸಿನಿಮಾಗಾಗಿ ಶರತ್ ತಮ್ಮ ಎಂದಿನ ಲುಕ್ ಬದಲಿಸಿ ಪೆಪ್ಪರ್ ಸಾಲ್ಟ್ ಗೆಟಪ್ಪಿನಲ್ಲಿ ಮಿಂಚುತ್ತಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುತೇಕ ಸಿನಿಮಾಗಳಲ್ಲಿ ಶರತ್ ಪಾತ್ರ ನಿರ್ವಹಿಸುತ್ತಾ ಬಂದಿದ್ದಾರೆ. ಹೀಗಾಗಿ ಅಜಾನುಬಾಹು ಎತ್ತರ, ಕಂಚಿನ ಕಂಠ ಹೊಂದಿರುವ ಶರತ್ ಲೋಹಿತಾಶ್ವ ಕುರುಕ್ಷೇತ್ರದಲ್ಲಿ ಒಂದೊಳ್ಳೆ ಪಾತ್ರ ನಿರ್ವಹಿಸಿರುತ್ತಾರೆ ಅಂತಾ ಜನ ಅಂದಾಜಿಸಿದ್ದರು. ಯಾವ್ಯಾವುದೋ ಭಾಷೆಯ ನಟರನ್ನು ಕರೆದು ಪಾರ್ಟು ಮಾಡಿಸಿದ್ದ ಮುನಿರತ್ನ ಅಂಡ್ ಟೀಮು ನಮ್ಮ ಕನ್ನಡದಲ್ಲೇ ಇರುವ ಅದ್ಭುತ ನಟನಿಗೆ ಯಾವ ಪಾತ್ರವನ್ನೂ ನೀಡದೆ ಸುಮ್ಮನಾಗಿದೆ.

ಪಾತ್ರಕ್ಕೆ ಹೊಂದಿಕೆಯೇ ಆಗದ ಸೋನು ಸೂದ್ ಮುಂತಾದವರನ್ನು ಕರೆತಂದು ಕುರುಕ್ಷೇತ್ರದಲ್ಲಿ ತುಂಬಿದ್ದರು. ಪ್ರೇಮ್ ನಿರ್ದೇಶನದ ದಿ ವಿಲನ್ ಸಿನಿಮಾದಲ್ಲಿ ಶರತ್ ರಾವಣನ ಪಾತ್ರ ನಿರ್ವಹಿಸುವ ಕಲಾವಿದನಾಗಿಯೇ ಅಬ್ಬರದ ನಟನೆ ನೀಡಿದ್ದರು. ಹೀಗಿರುವಾಗ ಕುರುಕ್ಷೇತ್ರದಲ್ಲಿ ಪಾತ್ರವನ್ನೇನಾದರೂ ನೀಡಿದ್ದಿದ್ದರೆ ನಿಜಕ್ಕೂ ಚಿತ್ರದ ತೂಕ ಹೆಚ್ಚುತ್ತಿತ್ತು. ಇರಲಿ ಬಿಡಿ, ಇನ್ನೇನು ತೆರೆಗೆ ಬರಲಿರು ತೆಲುಗಿನ ಸಾಹೋ ಸಿನಿಮಾದಲ್ಲಿ ಶರತ್ ವಿಲನ್ನುಗಳಲ್ಲೊಬ್ಬರಾಗಿ ಅಭಿನಯಿಸಿದ್ದಾರೆ. ಕನ್ನಡದವರನ್ನು ಕನ್ನಡಿಗರೇ ಕಡೆಗಣಿಸಿದರೂ ಅಕ್ಕಪಕ್ಕದವರಾದರೂ ನಮ್ಮ ಪ್ರತಿಭಾವಂತರಿಗೆ ಗೌರವ ನೀಡುತ್ತಿದ್ದಾರಲ್ಲಾ ಅಂತಾ ಸಮಾಧಾನಿಸಿಕೊಳ್ಳೋಣ!

ಇನ್ನಷ್ಟು ಓದಿರಿ

Scroll to Top