ಅಂದೊಂದಿತ್ತು ಕಾಲ ಚಿತ್ರದ ಮುಂಗಾರುಮಳೆಯಲ್ಲಿ‌ ಹಾಡು ರಿಲೀಸ್ ಮಾಡಿದ ಮುಂಗಾರು ಮಳೆ ಜೋಡಿ

Picture of Cinibuzz

Cinibuzz

Bureau Report

2006ರ ಮುಂಗಾರು ಮಳೆಯಂತೆ 2025ರಲ್ಲಿ ಅಂದೊಂದಿತ್ತು ಕಾಲ ಚಿತ್ರ ಆಗಲಿದೆ. ಅದಕ್ಕೆ ಸಾಕ್ಷಿ ಅಂದೊಂದಿತ್ತು ಕಾಲ ಚಿತ್ರದ ಮುಂಗಾರು ಮಳೆಯಲ್ಲಿ ಹಾಡು….
ವಿನಯ್ ರಾಜ್ ಕುಮಾರ್ ಅದಿತಿ ಪ್ರಭುದೇವ ಜೋಡಿಯ ಈ ಹಾಡನ್ನ ಇತ್ತೀಚೆಗಷ್ಟೇ…ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪೂಜಾಗಾಂಧಿ ರಿಲೀಸ್ ಮಾಡಿ ಕೊಂಡಾಡಿದ್ದಾರೆ.. ಸಿದ್ದ್ ಶ್ರೀರಾಮ್ ಹಾಡಿರೋ ರಾಘವೇಂದ್ರ ಸಂಗೀತ ಧನಂಜಯ ರಂಜನ್ ಸಾಹಿತ್ಯವಿದೆ. ಕೇಳೋದಕ್ಕೆ ಇಂಪು
ನೋಡದಕ್ಕೂ ತಂಪು ಅನ್ನಿಸೋ ಈ ನವಿರಾದ ಮೆಲೋಡಿ ಹಾಡು ಸುಧೀರ್ಘ ಕಾಲ ಕೇಳುವ ನೋಡುವ ಹಾಗಿದೆ..

ಅಂದೊಂದಿತ್ತು ಕಾಲ ಚಿತ್ರವನ್ನು ಭುವನ್ ಮೂವೀಸ್ ಬ್ಯಾನರ್ ಅಡಿಯಲ್ಲಿ,
ಭುವನ್ ಸುರೇಶ್ ನಿರ್ಮಾಣ ಮಾಡಿದ್ದಾರೆ.
ಕೀರ್ತಿ ಕುಚೇಲ ನಿರ್ದೇಶನ ಮಾಡಿರೋ,
ಅಂದೊಂದಿತ್ತು ಕಾಲ ಚಿತ್ರಕ್ಕೆ ರಾಘವೇಂದ್ರ ವಿ ಸಂಗೀತ,ಅಭಿಷೇಕ್ ಕಾಸರಗೋಡು ಛಾಯಾಗ್ರಹಣ, ಎ ಆರ್ ಕೃಷ್ಣ ಮತ್ತು ಸುರೇಶ್ ಆರ್ಮುಗಂ ಸಂಕಲನವಿದೆ,‌ ತಾರಾಗಣದಲ್ಲಿ
ವಿನಯ್ ರಾಜಕುಮಾರ್, ಅದಿತಿ ಪ್ರಭುದೇವ,
ನಿಶಾ ರವಿ ಕೃಷ್ಣನ್,ಜಗ್ಗಪ್ಪ, ಗೋವಿಂದೇ ಗೌಡ,ಇನ್ನೂ ಮುಂತಾದವರು ಇದ್ದಾರೆ.

ಗಣೇಶ್ Quote
ವಿನಯ್ ರಾಜಕುಮಾರ್ ಅವ್ರ
ಅಂದೊಂಡಿತ್ತು ಕಾಲ ಚಿತ್ರದ
ಮುಂಗಾರು ಮಳೆಯಲಿ ಹಾಡು ಸಖತ್ ಆಗಿದೆ, ಟೇಕ್ ಆಫ್ ಬ್ರಿಲಿಯಂಟ್,ಇತ್ತೀಚಿಗೆ ಕನ್ನಡದಲ್ಲಿ ಬಹಳಷ್ಟು ಅದ್ಭುತವಾದ ಹಾಡುಗಳು ಬರ್ತಾ ಇವೆ,ತುಂಬಾ ಹಾಡುಗಳನ್ನ ಕೇಳಿದ್ದೇನೆ,ಆದ್ರೆ ಅಂದೊಂದಿತ್ತು ಕಾಲ ಚಿತ್ರದ ಈ ಹಾಡು ತುಂಬಾ ಒಳ್ಳೆಯ ಹಾಡು ಅನ್ನೋದು ನನ್ನ ಅನಿಸಿಕೆ,ರಾಘವೇಂದ್ರ ಮಾಡಿರೋ ಮ್ಯೂಸಿಕ್ ಕಂಪೋಸಿಷನ್ ಮಸ್ತ್ ಆಗಿದೆ, ಸಿದ್ ಶ್ರೀರಾಮ್ ಧ್ವನಿ ಕೇಳೋದಕ್ಕೆ ಇಂಪಾಗಿದೆ, ಸುರೇಶ್ ನಿರ್ಮಾಣ ಮಾಡಿರೋ,ಕೀರ್ತಿ ಡೈರೆಕ್ಷನ್ ಚೆನ್ನಾಗ್ ಬಂದಿದೆ ಅನ್ನೋ ತರಹ ಭರವಸೆ ಕಾಣ್ತಾ ಇದೇ.
ಮ್ಯೂಸಿಕ್ ಡೈರೆಕ್ಟರ್,ಡೈರೆಕ್ಟರ್ ಹಾಗೂ ಹಾಡಿನ ಸಾಹಿತ್ಯ ಎಲ್ಲವಕ್ಕೂ ತುಂಬಾ ಗಟ್ಟಿಯಾದ ಬಾಂಡಿಂಗ್ ಇರೋದು ನಿಜಾ ಅನ್ಸತ್ತೆ,

ಮುಂಗಾರು ಮಳೆ ನಾವೆಲ್ಲ ಪ್ರೀತಿಯಿಂದ ಮಾಡಿದ ಸಿನ್ಮಾ ಆಗಿತ್ತು..

ಅಂದೊಂದಿತ್ತು ಕಾಲ ಚಿತ್ರದಲ್ಲಿನ ನಾನು ನೋಡಿದ ಈ ಮುಂಗಾರು ಮಳೆಯಲಿ
ತುಂಬಾನೇ ಇಂಟೆನ್ಸ್ ಆದ ಫ್ರೆಷ್ ಫೀಲ್ ಕೊಡತ್ತೆ ಹಾಗೆ ಎಲ್ಲರೂ ತುಂಬಾ ಶ್ರಮ ಪಟ್ಟು ಕೆಲ್ಸ ಮಾಡಿರೋ ಹಿಂಟ್ ಕಾಣ್ತಾ ಇದೆ.

ಇಂತಹದೊಂದು ಒಳ್ಳೆಯ ಹಾಡು ಬಿಡುಗಡೆ ಮಾಡಿದ್ದಕ್ಕೆ ನನಗೆ ಖುಷಿ ಇದೆ,
ಅಂದೊಂದಿತ್ತು ಕಾಲ ಚಿತ್ರದ ಕಂಪ್ಲೀಟ್ ಆಲ್ಬಂ ಹಿಟ್ ಆಗ್ಲಿ ಅಂತಾ ನಾನು ಹಾರೈಸ್ತಿನಿ..

ಹಾಡು ಕೇಳಿದ ನಂತರ ಗೋಲ್ಡನ್ ಸ್ಟಾರ್ ಗಣೇಶ್,
ವಿನಯ್ ರಾಜಕುಮಾರ್ ಜೊತೆ ಮಾತನಾಡಿ,,
ತುಂಬಾ ಒಳ್ಳೆಯ ಸಾಂಗ್ ಬಂದಿದೆ,ರೀದಂ ಸಖತ್ ಆಗಿದೆ ಎಂದು ವಿಶ್ ಮಾಡಿದ್ದು ವಿಶೇಷವಾಗಿತ್ತು

ಪೂಜಾ ಗಾಂಧಿ Quote
ನಾವೆಲ್ಲರೂ ಸಾಮಾನ್ಯವಾಗಿ
ಅಂದೊಂದಿತ್ತು ಕಾಲ ಅಂತಾ ಹೇಳ್ತಾನೆ ಇರ್ತೀವಿ,
ಹಾಗೆ ನಾನು ಕೂಡಾ
2006 ರಲ್ಲಿ ನಾವು ಮಾಡಿದ್ದ ಮುಂಗಾರು ಮಳೆ ಚಿತ್ರವನ್ನ,ಅದರ ಸಕ್ಸಸ್ ನ್ನ ನೆನಪು ಮಾಡ್ಕೋತಾನೇ ಇರ್ತೀನಿ.
ಈಗ ನಮ್ಮ ವಿನಯ್ ರಾಜಕುಮಾರ್ ಮತ್ತು ಅದಿತಿ ಪ್ರಭುದೇವ ಜೊತೆಯಾಗಿ ನಟಿಸಿರೋ ಅಂದೊಂದಿತ್ತು ಕಾಲ ಚಿತ್ರದ ಮುಂಗಾರು ಮಳೆಯಲಿ ಅನ್ನೋ ಹಾಡು ಚೆನ್ನಾಗ್ ಮೂಡಿ ಬಂದಿದೆ..

ಮುಂಗಾರು ಮಳೆ ಚಿತ್ರದ ತರಹವೇ ಮುಂಗಾರು ಮಳೆಯಲಿ ಹಾಡು ಕೂಡಾ ದೊಡ್ಡ ಹಿಟ್ ಆಗ್ಲಿ,ಸಿನ್ಮಾ ಹಿಟ್ ಅಂತಾ ವಿಶ್ ಮಾಡ್ತೀನಿ.

ಅಂದೊಂದಿತ್ತು ಕಾಲ
ಚಿತ್ರದ 3D ಸೆಟ್ ನಲ್ಲಿ ಮಾಡಿರೋ ಹಾಡು ನೋಡಿದೆ,ರೊಮ್ಯಾಂಟಿಕ್ ಆದ ಹಾಡಲ್ಲಿ
ವಿನಯ್ ರಾಜಕುಮಾರ್ ಮತ್ತು ಅದಿತಿ ಪ್ರಭುದೇವ ಇಬ್ಬರು ತುಂಬಾ ಮುದ್ದಾಗಿ ಕಾಣ್ತಾ ಇದಾರೆ..

ಇಂತದೊಂದು ಸುಮಧುರವಾದ ಹಾಡು ನಾನು ಲಾಂಚ್ ಮಾಡಿದ್ದು ಖುಷಿ ಆಯ್ತು,
ಅಂದೊಂದಿತ್ತು ಕಾಲ ಸೂಪರ್ ಆಗ್ಲಿ ಅಂತಾ ವಿಶ್ ಮಾಡ್ತೀನಿ

ಇನ್ನಷ್ಟು ಓದಿರಿ

Scroll to Top