ಗ್ಲೋಬಲ್ ಸಿನಿಮಾ ಫಣಿ ಮೋಷನ್ ಪೋಸ್ಟರ್ ಅನಾವರಣ ಮಾಡಿದ ತೆಲುಗು ಲೆಜೆಂಡರಿ ನಿರ್ದೇಶಕ ಕೆ.ರಾಘವೇಂದ್ರ ರಾವ್

Picture of Cinibuzz

Cinibuzz

Bureau Report

ತೆಲುಗಿನಲ್ಲಿ ಬಾಸ್, ಶ್ರೀರಾಮ್, ನೇನುನ್ನಾನು, ಆಟ ಸೇರಿದಂತೆ ಹಲವು ಹಿಟ್ ಚಿತ್ರ ನಿರ್ದೇಶಿಸಿರುವ ಪ್ರತಿಭಾನ್ವಿತ ನಿರ್ದೇಶಕ ಡಾ. ವಿ.ಎನ್. ಆದಿತ್ಯ ಈಗ ‘ಫಣಿ’ ಎಂಬ ಗ್ಲೋಬಲ್ ಸಿನಿಮಾ ಮಾಡುತ್ತಿದ್ದಾರೆ. ಓಎಂಜಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಡಾ. ಮೀನಾಕ್ಷಿ ಅನಿಪಿಂಡಿ ಚಿತ್ರ ನಿರ್ಮಿಸುತ್ತಿದ್ದು, ಎಯು & ಐ ಸ್ಟುಡಿಯೋ ಪ್ರಸ್ತುತಪಡಿಸುತ್ತಿದೆ.

ನಟಿ ಕ್ಯಾಥರೀನ್ ಟ್ರೆಸಾ ‘ಫಣಿ’ಯಲ್ಲಿ ಪ್ರಮುಖ ಪಾತ್ರಕ್ಕೆ ಜೀವ ತುಂಬಲಿದ್ದು, ಮಹೇಶ್ ಶ್ರೀರಾಮ್ ಮುಖ್ಯ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.. ಹಿಂದಿ ಜೊತೆಗೆ, ಫಣಿ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಇತರ ಜಾಗತಿಕ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಲೆಜೆಂಡರಿ ನಿರ್ದೇಶಕ ಕೆ. ರಾಘವೇಂದ್ರ ರಾವ್ ಇಂದು ಹೈದರಾಬಾದ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ‘ಫಣಿ’ ಚಿತ್ರದ ಮೋಷನ್ ಪೋಸ್ಟರ್ ಅನ್ನು ಅನಾವರಣಗೊಳಿಸಿದರು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕೆ. ರಾಘವೇಂದ್ರ ರಾವ್, “ಆದಿತ್ಯ ಎಂದರೆ ಸೂರ್ಯ. ಎಲ್ಲಾ ದೇಶಗಳಲ್ಲಿ ಸೂರ್ಯ ಉದಯಿಸುತ್ತಾನೆ, ಹೀಗಾಗಿ, ವಿ.ಎನ್. ಆದಿತ್ಯ ಫಣಿ ಚಿತ್ರವನ್ನು ಜಾಗತಿಕ ಸಿನಿಮಾ ಮಾಡುತ್ತಿದ್ದಾರೆ. ಆದಿತ್ಯ ನನ್ನೊಂದಿಗೆ ಕೆಲಸ ಮಾಡದಿದ್ದರೂ, ಅವರು ನನ್ನ ನೆಚ್ಚಿನವರಲ್ಲಿ ಒಬ್ಬರು. ಅವರು ಹೊಸ ತಾರೆಯರೊಂದಿಗೆ ಸಿನಿಮಾ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರ ಸಹೋದರಿ ಮೀನಾಕ್ಷಿ ಫಣಿ ನಿರ್ಮಿಸುತ್ತಿದ್ದಾರೆ. ಅಲ್ಲು ಅರ್ಜುನ್ ಅವರ ಸರೈನೋಡು ಚಿತ್ರದಲ್ಲಿ ಶಾಸಕಿಯಾಗಿ ಕ್ಯಾಥರೀನ್ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಅವರು ಯಾವ ರೀತಿಯ ಪಾತ್ರವನ್ನು ನಿರ್ವಹಿಸುತ್ತಾರೆ ಎಂದು ನೋಡಲು ನಾನು ಉತ್ಸುಕನಾಗಿದ್ದೇನೆ. ಫಣಿಯ ಇಡೀ ತಂಡಕ್ಕೆ ನಾನು ಶುಭ ಹಾರೈಸುತ್ತೇನೆ ಮತ್ತು ಚಿತ್ರವು ಉತ್ತಮ ಯಶಸ್ಸನ್ನು ಸಾಧಿಸಲಿ ಎಂದು ಆಶಿಸಿದರು.

ಡಾ.ವಿ.ಎನ್ ಆದಿತ್ಯ ಕಥೆ ಚಿತ್ರಕಥೆ ಬರೆದು ಫಣಿ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದು, ಡಾ. ಮೀನಾಕ್ಷಿ ಅನಿಪಿಂಡಿ ನಿರ್ಮಾಣದ ಜೊತೆಗೆ ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಜನೈದ್‌ ಸಂಕಲನ, ಬುಜ್ಜಿ.ಕೆ, ಸಾಯಿಕಿರಣ್ ಐನಂಪುಡಿ ಛಾಯಾಗ್ರಹಣ, ಜಾನ್‌ ಖಾನ್‌ ಸಾಹಸ ನಿರ್ದೇಶನದ, ಹೆನ್ರಿ, ಬೆವರ್ಲಿ ಫಿಲ್ಮ್ಸ್, ಲಾಸ್ ಏಂಜಲೀಸ್ ವಿಜಿಎಫ್‌ ವರ್ಕ್‌ ಚಿತ್ರಕ್ಕಿರಲಿದೆ.

ಇನ್ನಷ್ಟು ಓದಿರಿ

Scroll to Top