ಸಂಚಾರಿ ವಿಜಯ್ ಅವರನ್ನು ಭಿನ್ನವಾದ ಗೆಟಪ್ಪಿನಲ್ಲಿ ನೋಡೋ ಕ್ಷಣಗಳು ಹತ್ತಿರಾಗಿವೆ. ಆರ್ಟ್ ಆಂಡ್ ಸೋಲ್ ಮೀಡಿಯಾ ನಿರ್ಮಾಣ ಮಾಡಿರುವ, ಹೃಷಿಕೇಶ್ ಜಂಬಗಿ ನಿರ್ದೇಶನದ ಪಾದರಸ ಅಬ್ಬರದೊಂದಿಗೇ ನಾಳೆ ರಾಜ್ಯಾದಂತ ಬಿಡುಗಡೆಯಾಗಲಿದೆ. ಅಷ್ಟಕ್ಕೂ ಪಾದರಸ ಏಕಾಏಕಿ ಅಸೀಮ ಕೌತುಕವೊಂದರ ಮೂಲಕ ಪ್ರೇಕ್ಷಕರ ಮನಸು ಹೊಕ್ಕು ಹರಿದಾಡಲಾರಂಭಿಸಿದ್ದು ಟ್ರೈಲರ್ ಮೂಲಕ. ಆ ಮೂಲಕ ಚೆಂದದ, ಡಿಫರೆಂಟಾದ ಹಾಡಾಗಿಯೂ ಸೆಳೆದುಕೊಂಡಿದ್ದ ಪಾದರಸ ಈ ಪರಿಯಾಗಿ ಕ್ರೇಜ್ ಹುಟ್ಟು ಹಾಕಲು ಪ್ರಧಾನ ಕಾರಣ ಸಂಚಾರಿ ವಿಜಯ್ ಅವರ ವಿಶಿಷ್ಟವಾದ ಗೆಟಪ್. ಸಂಚಾರಿ ವಿಜಯ್ಗೆ […]
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹೋದರ ದಿನಕರ್ ತೂಗುದೀಪ ನಿರ್ದೇಶನದ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಜೊತೆಜೊತೆಯಲಿ, ನವಗ್ರಹ, ಸಾರಥಿಯಂಥಾ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿರೋ ದಿನಕರ್ ಈ ಚಿತ್ರದ ಮೂಲಕ ಮತ್ತೊಂದು ಮಹಾ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಸಿನಿಬಜ಼್ ದಿನಕರ್ ಅವರೊಂದಿಗೆ ಈ ಚಿತ್ರದ ಬಗ್ಗೆ ಮಾತಿಗಿಳಿದಾಗ ಮಜವಾದ, ಇಂಟರೆಸ್ಟಿಂಗ್ ಆದ ಹಲವಾರು ಸಂಗತಿಗಳ ಬಗ್ಗೆ ಮುಕ್ತವಾಗಿ ಮಾತಾಡಿದ್ದಾರೆ. ಅದರ ಸಂಕ್ಷಿಪ್ತ ವಿವರ ನಿಮಗಾಗಿ… ನೀವೊಂದು ಸಿನಿಮಾ ಮಾಡಲು ಹೊರಟಾಗ ಭಾರೀ ನಿರೀಕ್ಷೆ […]
ಇದೀಗ ಬೆಲ್ ಬಾಟಮ್ ಚಿತ್ರದಲ್ಲಿ ನಟಿಸುತ್ತಿರುವ ರಿಷಬ್ ಶೆಟ್ಟಿ ಒಂದು ಭಿನ್ನ ಕಥಾ ವಸ್ತುವನ್ನು ಮುಟ್ಟಿದ್ದಾರೆ. `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು- ಕೊಡುಗೆ ರಾಮಣ್ಣ ರೈ’ ಎಂಬ ಕಲಾತ್ಮಕ ಚಿತ್ರವೊಂದನ್ನು ಅವರು ನಿರ್ದೇಶನ ಮಾಡಿದ್ದಾರೆ. ಇನ್ನೇನು ಬಿಡುಗಡೆಗೆ ಸಜ್ಜಾಗಿರುವ ಈ ಚಿತ್ರ ಯಾವ ಕಮರ್ಷಿಯಲ್ ಚಿತ್ರಗಳಿಗೂ ಸರಿಸಾಟಿಯಾಗುವಂತೆ ಟ್ರೆಂಡಿಂಗ್ನಲ್ಲಿದೆ! ಆರ್ಟ್ ಮೂವಿಗೂ ಪ್ರೇಕ್ಷಕರು ಹೃದಯಪೂರ್ವಕವಾಗಿ ಬೆಂಬಲಿಸುತ್ತಾರೆ, ಕಾತರದಿಂದ ಕಾಯುತ್ತಾರೆಂಬುದಕ್ಕೆ ಈ ಚಿತ್ರ ಸ್ಪಷ್ಟ ಸಾಕ್ಷಿಯಾಗಿದೆ. ರಿಕ್ಕಿಯಂಥಾ ಚಿತ್ರದಲ್ಲಿ ಉದ್ದಿಮೆಗಳಿಗೆ ರೈತರ ಭೂಮಿ ವಶ ಪಡಿಸಿಕೊಳ್ಳುವುದರ ಸುತ್ತ […]
ದರ್ಶನ್ ಅವರ ಹುಟ್ಟುಹಬ್ಬದ ದಿನದಂದೇ ಒಡೆಯರ್ ಚಿತ್ರದ ಟೈಟಲ್ ಲಾಂಚ್ ಆಗಿತ್ತು. ಅವರ ಅಭಿಮಾನಿಗಳೆಲ್ಲ ಈ ಟೈಟಲ್ ಕೇಳಿ ಥ್ರಿಲ್ ಆಗಿದ್ದರು. ಆದರೆ ಮೈಸೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಈ ಟೈಟಲ್ ವಿರುದ್ಧದ ಕೂಗು ಕೇಳಿ ಬಂದಿತ್ತು. ಕೆಲ ಸಂಘಟನೆಗಳಂತೂ ನಿರ್ಮಾಪಕರು ಮತ್ತು ನರ್ದೇಶಕರ ವಿರುದ್ಧ ದೂರು ದಾಖಲಿಸಿ ರಾಜಮನೆತನದ ಗೌರವ ಸಾರುವ ಈ ಟೈಟಲ್ ಅನ್ನು ಇಡಲೇ ಕೂಡದೆಂಬಂತೆ ಪಟ್ಟು ಹಿಡಿದಿದ್ದವು. ಇದೀಗ ಚಿತ್ರ ತಂಡ ಟೈಟಲ್ಲು ಬದಲಾಯಿಸಿಕೊಂಡಿದೆ. ಈ ಚಿತ್ರಕ್ಕೆ ಒಡೆಯ ಎಂಬ […]
ವರ್ಷದ ಹಿಂದೆ ಮದುವೆಯಾಗೋ ಮೂಲಕ ಸಂಸಾರಸ್ಥೆಯಾಗಿದ್ದ ಪ್ರಿಯಾಮಣಿ ಆ ನಂತರ ಚಿತ್ರರಂಗದಿಂದ ಸಂಪೂರ್ಣವಾಗಿಯೇ ಕಣ್ಮರೆಯಾಗಿದ್ದಳು. ಆಕೆ ಸಾಮಾಜಿಕ ಜಾಲತಾಣಗಳಲ್ಲಿಯೂ ಹೆಚ್ಚು ಆಕ್ಟೀವ್ ಆಗಿರದ ಕಾರಣ ಅಭಿಮಾನಿಗಳೆಲ್ಲ ಕಸಿವಿಸಿಗೊಂಡಿದ್ದರು. ಇದೀಗ ಪ್ರಿಯಾಮಣಿ ಟ್ವಿಟರ್ನಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷಳಾಗಿದ್ದಾಳೆ! ಹಾಗಂತ ಟ್ವಿಟರ್ ಮೂಲಕ ಪ್ರಿಯಾಮಣಿ ಮತ್ತೆ ನಟನೆಗೆ ವಾಪಾಸಾಗೋದರ ಬಗೆಗಾಗಲಿ, ಹೊಸಾ ಚಿತ್ರದ ವಿಚಾರವನ್ನಾಗಲಿ ಹೇಳಿಕೊಂಡಿಲ್ಲ. ಆದರೆ ಸುತ್ತೀ ಬಳಸಿ ತಾನು ತಾಯಿಯಾಗುತ್ತಿರೋ ಸೂಚನೆಯನ್ನು ನೀಡಿದ್ದಾಳೆ! ಟ್ವಿಟರ್ನಲ್ಲಿ ತಂನ್ನ ಪತಿ ಮುಸ್ತಫಾ ರಾಜ್ ಜೊತೆಗಿನ ಕಲರ್ ಕಲರ್ ಫೋಟೋಗಳನ್ನು ಹಾಕಿಕೊಂಡಿರೋ ಪ್ರಿಯಾಮಣಿ […]
ವಾಸು ನಾನ್ ಪಕ್ಕಾ ಕಮರ್ಷಿಯಲ್ ಸಿನಿಮಾ ಬಿಡುಗಡೆಯಾಗಿದೆ. ಹೆಸರಿಗೆ ತಕ್ಕಂತೆ ಇದು ಇತ್ತೀಚೆಗೆ ತೆರೆಕಂಡಿರುವ ಗಮನಾರ್ಹ ಕಮರ್ಷಿಯಲ್ ಚಿತ್ರ. ಅನೀಶ್ ಅಕಿರಾ ಚಿತ್ರದ ನಂತರ ವರ್ಷಗಳ ಗ್ಯಾಪ್ ತೆಗೆದುಕೊಂಡು ಸ್ವತಃ ನಿರ್ಮಾಣವನ್ನೂ ಮಾಡಿ ತೆರೆಗೆ ತಂದಿರುವ ಚಿತ್ರ ವಾಸು ನಾನ್ ಪಕ್ಕಾ ಕಮರ್ಷಿಯಲ್. ಈಗಾಗಲೇ ಚಿತ್ರದ ಟ್ರೇಲರು ಮತ್ತು ಹಾಡುಗಳೆಲ್ಲಾ ಸೌಂಡು ಮಾಡಿರೋದರಿಂದ `ವಾಸು ನಾನ್ ಪಕ್ಕಾ ಕಮರ್ಷಿಯಲ್ ಸಿನಿಮಾ’ದ ಬಗ್ಗೆ ಕ್ಯೂರಿಯಾಸಿಟಿ ಹೆಚ್ಚಾಗಿತ್ತು. ಬಾಕ್ಸಿಂಗ್ ಮ್ಯಾಚುಗಳಲ್ಲಿ ಸ್ಪರ್ಧಿಸಿ ಎಂಥಾ ಘಟಾನುಘಟಿಗಳ ಎದೆಗೂ ಗುದ್ದಿ, ಕಪ್ ಗೆಲ್ಲೋದು […]
ಕನ್ನಡ ದೃಶ್ಯಮಾಧ್ಯಮದಲ್ಲಿ ತನ್ನದೇ ಆದಂಥ ಸ್ಥಾನವನ್ನು ಪಡೆದುಕೊಂಡಿರುವ ಜೀ ಕನ್ನಡ ವಾಹಿನಿ ಇಲ್ಲಿಯವರೆಗೂ ಪ್ರೇಕ್ಷಕರಿಗೆ ಇಷ್ಟವಾದ ಕಾರ್ಯಕ್ರಮಗಳನ್ನೇ ಕೊಡಲು ಹಗಲಿರುಳು ಶ್ರಮಿಸುತ್ತಲಿದೆ. ಮನೋರಂಜನೆಗೆ ಮತ್ತೊಂದು ಹೆಸರಾಗಿ ಈ ವಾಹಿನಿ ಮೂಡಿಬರುತ್ತಲಿದೆ. ತನ್ನ ವಿಭಿನ್ನ ಪ್ರಯತ್ನಗಳ ಮೂಲಕ ಹೊಸ ಹೊಸ ಮೈಲಿಗಲ್ಲುಗಳನ್ನು ಸೃಷ್ಟಿಸುತ್ತಾ, ಸಾಮಾಜಿಕ ಬದ್ದತೆಯನ್ನು ಏಕಕಾಲಕ್ಕೆ ಉಳಿಸಿಕೊಳ್ಳುವತ್ತ ಇದು ಹೆಜ್ಜೆ ಹಾಕುತ್ತಿದೆ. ಈಗಾಗಲೇ ಜನಪ್ರಿಯ ರಿಯಾಲಿಟಿ ಶೋಗಳು ಹಾಗೂ ಧಾರಾವಾಹಿಗಳ ಮೂಲಕ ಕರ್ನಾಟಕದಲ್ಲಿ ಮನೆಮಾತಾಗಿರುವ ಜೀ ಕನ್ನಡ ಈಗ ತನ್ನ ಜನಪ್ರಿಯ ಶೋಗಳಲ್ಲಿ ಒಂದಾದ ಯಾರಿಗುಂಟು ಯಾರಿಗಿಲ್ಲ […]
ಸರಿಸುಮಾರು 95 ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ಕಲಾವಿದೆ, ನಿರ್ಮಾಪಕಿ, ಸದ್ಯ ನಿರ್ಮಾಪಕರ ಸಂಘದ ಆಡಳಿತಮಂಡಳಿ ಸದಸ್ಯೆಯೂ ಆಗಿರುವ ಅನಿತಾ ರಾಣಿ ಅವರ ಪರ್ಸನ್ನು ಕಿಡಿಗೇಡಿ ಕಳ್ಳನೊಬ್ಬ ಎಗರಿಸಿದ್ದಾನೆ. ಬೆಂಗಳೂರಿನ ಸುಲ್ತಾನ್ ಪಾಳ್ಯದಲ್ಲಿ ವಾಸವಿರುವ ಅನಿತಾ ರಾಣಿ ಅವರು ಆರ್.ಟಿ.ನಗರದ ಬ್ಯಾಂಕ್ ಆಫ್ ಇಂಡಿಯಾದಿಂದ ಹೊರಬಂದು ಕಾರು ತೆರೆಯೋ ಹೊತ್ತಿಗೆ ಆ ಕಡೆಯಿಂದ ಬಂದ ಪಲ್ಸರ್ ಬೈಕ್ ಸವಾರನೊಬ್ಬ ವಿಸಿಟಿಂಗ್ ಕಾರ್ಡ್ ತೋರಿ ಅಡ್ರೆಸ್ ಕೇಳಿದ್ದಾನೆ. `ಇದೇನಪ್ಪಾ ಪೀಣ್ಯದಲ್ಲಿರುವ ವಿಳಾಸವನ್ನ ಇಲ್ಲಿ ಕೇಳುತ್ತಿದ್ದೀಯ?’ ಎಂದು ಪ್ರಶ್ನಿಸೋ ಹೊತ್ತಿಗೆ ಕಾರಿನ […]
ತಮ್ಮ ಎರಡನೇ ಮಗ ಪ್ರಣಾಮ್ ಹೀರೋ ಆಗಿರೋ ಕುಮಾರಿ೨೧ ಎಫ್ ಚಿತ್ರದ ಪ್ರೀಮಿಯರ್ ಶೋ ನಡೆದ ಕ್ಷಣವೇ ಡೈನಾಮಿಕ್ ಸ್ಟಾರ್ ದೇವರಾಜ್ ಬೇಸರಗೊಂಡಿದ್ದಾರೆ. ಅದಕ್ಕೆ ಕಾರಣವಾಗಿರೋದು ನಟ ಚಿರಂಜೀವಿ ಸರ್ಜಾ ಪಟಾಲಮ್ಮಿನ ದಾಂಧಲೆ! ನೆನ್ನೆ ರಾತ್ರಿ ನಗರದ ಓರಾಯನ್ ಮಾಲ್ನ ಪಿವಿಆರ್ನಲ್ಲಿ ಕುಮಾರಿ ಚಿತ್ರದ ಪ್ರೀಮಿಯರ್ ಶೋ ನಡೆದಿತ್ತು. ಇದಕ್ಕೆ ಸೆಲೆಬ್ರಿಟಿಗಳು, ಮಾಧ್ಯಮ ಮಂದಿಯೆಲ್ಲ ಕಿಕ್ಕಿರಿದು ಸೇರಿದ್ದರು. ಆದರೆ ಓರಾಯನ್ ಮಾಲಿನ ಪಿವಿಆರ್ನಲ್ಲಿ ಒಂದು ಶೋಗೆ ನಿಗಧಿಯಾಗಿರೋ ಸೀಟಿಗಿಂತ ಒಬ್ಬರೇ ಹೆಚ್ಚಾದರೂ ಹೊರ ಕಳಿಸಲಾಗುತ್ತದೆ. ಆದರೆ ಸರ್ಜಾ […]