ಡ್ಯಾನ್ಸ್ನಲ್ಲಿ ವಿಪರೀತ ಆಸಕ್ತಿ ಹೊಂದಿರೋ ಹುಡುಗನೊಬ್ಬನ ಕಥೆ ಎಂಬ ಸುಳಿವಿನೊಂದಿಗೆ ಒಂದಷ್ಟು ಸದ್ದು ಮಾಡಿದ್ದ ಚಿತ್ರ ಬಿಂದಾಸ್ ಗೂಗ್ಲಿ. ಸಂತೋಷ್ ನಿರ್ದೇಶನದ ಈ ಚಿತ್ರವೀಗ ತೆರೆ ಕಂಡಿದೆ. ಕಾಲೇಜು, ಖಡಕ್ ಪ್ರಿನ್ಸಿಪಾಲ್, ವಿದ್ಯಾರ್ಥಿಗಳ ತರಲೆ ತಾಪತ್ರಯ ಮತ್ತು ಕುಣಿಯೋ ಉಮೇದಿನ ಹೂರಣದೊಂದಿಗೆ ಈ ಚಿತ್ರ ತೆರೆ ಕಂಡಿದೆ. ಗುರುಕುಲ ಎಂಬ ಕಾಲೇಜು. ಅದಕ್ಕೊಬ್ಬ ಶಿಸ್ತಿನ ಸಿಪಾಯಿಯಂಥಾ ಪ್ರಾಂಶುಪಾಲ. ಓದು ಬಿಟ್ರೆ ಬೇರೇನಕ್ಕೂ ಅವಕಾಶವಿಲ್ಲ ಎಂಬಂಥಾ ಕಟ್ಟುನಿಟ್ಟಿನ ಆದೇಶ ಪ್ರಾಂಶುಪಾಲರದ್ದು. ಆದರೆ ಅಲ್ಲಿನ ಕೆಲ ವಿದ್ಯಾರ್ಥಿಗಳಿಗೆ ಓದಂದನ್ನು ಬಿಟ್ಟು […]
ನಡುವಯಸ್ಸು ದಾಟಿದ ಹೆಣ್ಣುಮಗಳಿಗೆ ಮದುವೆ ಮಾಡೋ ಸರ್ಕಸ್ಸು ನಡೆಸೋ ಹೆತ್ತವರೆಲ್ಲರ ಆತ್ಮಕಥೆಯಂತಾ ಚಿತ್ರ ಪತಿಬೇಕು ಡಾಟ್ ಕಾಮ್… ಹೀಗಂತ ಸಾರಾಸಗಟಾಗಿ ಹೇಳಿಬಿಡುವಂಥಾ ಕಥಾ ಹಂದರ ಹೊಂದಿರುವ ಈ ಚಿತ್ರದುದ್ದಕ್ಕೂ ಸಂಕಟ ಹೊದ್ದ ಪಾತ್ರಗಳಿವೆ. ಆದರೆ ನಿರ್ದೇಶಕರು ಅವುಗಳಿಗೆಲ್ಲ ಮುಗುಳುನಗೆಯ ಪೋಷಾಕು ತೊಡಿಸಿದ್ದಾರೆ. ಧಾರಾಕಾರವಾಗಿ ಕಣ್ಣೀರು ಹರಿಸೋ ಇರಾದೆ ಇದ್ದಿದ್ದರೆ ಎಲ್ಲರ ಮನಸುಗಳನ್ನೂ ಕೋಡಿ ಬೀಳಿಸುವಂಥಾ ಅವಕಾಶಗಳಿದ್ದವು. ಆದರೆ ಇಲ್ಲಿ ಎಲ್ಲ ನೋವುಗಳಿಗೂ ಆಹ್ಲಾದದ ಪನ್ನೀರು ಚಿಮುಕಿಸಿ ಇಡೀ ಕಥೆಯನ್ನು ದಡ ಮುಟ್ಟಿಸುವ ಪ್ರಯತ್ನವನ್ನು ನಿರ್ದೇಶಕ ರಾಕೇಶ್ ಮಾಡಿದ್ದಾರೆ. […]
ಸರ್ವಸ್ವ ಚಿತ್ರದ ಮೂಲಕ ನಾಯಕನಟನಾಗಿದ್ದ ರಘು ಭಟ್ ವೈವಾಹಿಕ ಜೀವನಕ್ಕೆ ಅಡಿಯಿರಿಸಿದ್ದಾರೆ. ಬಹು ಕಾಲದಿಂದ ಪ್ರೀತಿಸಿದ್ದ ಸುಗುಣ ಅವರನ್ನು ಕೈ ಹಿಡಿದಿರುವ ರಘು ಅವರ ಆರತಕ್ಷತೆ ಕಾರ್ಯಕ್ರಮ ಅರಮನೆ ಮೈದಾನದಲ್ಲಿ ನೆರವೇರಿದೆ. ಸಿಎಂ ಕುಮಾರಸ್ವಾಮಿ ಸೇರಿದಂತೆ, ಸಿನಿಮಾ, ಧಾರಾವಾಹಿ ಮತ್ತು ಮಾಧ್ಯಮ ತಾರೆಯರ ಸಮ್ಮುಖದಲ್ಲಿ ಆರತಕ್ಷತೆ ಕಾರ್ಯಕ್ರಮವೂ ಅದ್ದೂರಿಯಾಗಿ ನಡೆದಿದೆ. ನೆಲಮಂಗಲದ ಸುಗುಣ ಬಿ.ಸಿ ಮತ್ತು ರಾಘವೇಂದ್ರ.ಎ ಅವರ ಮೊದಲ ಭೇಟಿ ನಡೆದದ್ದು ಕಾರ್ಯಕ್ರಮವೊಂದರಲ್ಲಿ. ಅಲ್ಲಿಂದ ಪರಿಚಯವಾಗಿ, ಅದು ಪ್ರೀತಿಯಾಗಿ ಇತ್ತೀಚೆಗೆ ಇವರಿಬ್ಬರ ನಿಶ್ಚಿತಾರ್ಥ ಕೂಡಾ ನಡೆದಿತ್ತು. […]
ಕಾಂತ ಕನ್ನಲ್ಲಿ ನಿರ್ದೇಶನದ `ಇರುವುದೆಲ್ಲವ ಬಿಟ್ಟು’ ಚಿತ್ರವೀಗ ಎಲ್ಲೆಡೆ ಚರ್ಚೆಯ ಕೇಂದ್ರ ಬಿಂದುವಾಗಿದೆ. ಬದುಕಿನ ಅಂತರಾಳ ತೆರೆದಿಡುವ ಪ್ರಸಿದ್ಧ ಕವಿತೆಯ ಸಾಲೊಂದನ್ನು ಶೀರ್ಷಿಕೆಯಾಗಿಟ್ಟುಕೊಂಡಿರೋ ಈ ಚಿತ್ರದ ಕಥೆಯ ಬಗ್ಗೆ ಜನರಲ್ಲೊಂದು ಕುತೂಹಲವೂ ಹುಟ್ಟಿಕೊಂಡಿದೆ. ಕಥಾ ಎಳೆ ಏನಿರಬಹುದು ಎಂಬುದರ ಸಣ್ಣ ಸುಳಿವನ್ನಷ್ಟೇ ನಿರ್ದೇಶಕ ಕಾಂತ ಬಿಟ್ಟುಕೊಟ್ಟಿದ್ದಾರೆ. ಈ ಹಿಂದೆ ಜಲ್ಸಾ ಎಂಬ ಚಿತ್ರ ನಿರ್ದೇಶನ ಮಾಡಿದ್ದ ಕಾಂತ ಕನ್ನಲ್ಲಿ ಕನಸಿಟ್ಟು ಸೃಷ್ಟಿಸಿರುವ ಕಲಾಕೃತಿಯಿದು. ಬಹಳಷ್ಟು ವರ್ಷಗಳ ಹಿಂದೆಯೇ ಈ ಕಥೆಯನ್ನು ರೆಡಿ ಮಾಡಿಟ್ಟುಕೊಂಡು ತಾನು ಈ ಕಥೆಯನ್ನೇ […]
ಕರ್ನಾಟಕ ಪೊಲೀಸ್ ಇಲಾಖೆ ಎಂದೂ ಮರೆಯದೊಂದು ಮನಮಿಡಿಯುವ ಸತ್ಯ ಘಟನೆಯಾಧಾರಿತ ಚಿತ್ರ ಮಿಸ್ಸಿಂಗ್ ಬಾಯ್. ಈ ಚಿತ್ರದ ಟೀಸರ್ ಬಿಡುಗಡೆಯ ನೆಪದಲ್ಲಿ ನಿರ್ದೇಶಕ ರಘುರಾಮ್ ದಕ್ಷ ಪೊಲೀಸ್ ಅಧಿಕಾರಿಗಳ ಮಾಹಾ ಸಂಗಮಕ್ಕೆ ನಾಂದಿ ಹಾಡಿದ್ದಾರೆ. ಪೊಲೀಸ್ ಠಾಣೆಯ ಮೆಟ್ಟಿಲೇರೋ ಪ್ರತೀ ಪ್ರಕರಣಗಳೂ ಅಧಿಕಾರಿಗಳನ್ನು ರೋಷಾವೇಶದಿಂದ ಮುನ್ನುಗ್ಗುವಂತೆ ಮಾಡುತ್ತದಲ್ಲಾ? ಆದರೆ ರಘುರಾಮ್ ಚಿತ್ರವಾಗಿಸಿಕೊಂಡಿರೋ ಈ ಪ್ರಕರಣ ಮಾತ್ರ ತನಿಖಾಧಿಕಾರಿಗಳನ್ನೇ ಹನಿಗಣ್ಣಾಗುವಂತೆ ಮಾಡಿತ್ತು. ಇಂಥಾ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸೂಪ್ ಕಾಪ್ಗಳ ಸಮ್ಮಿಲನವಾದದ್ದು ನಿಜಕ್ಕೂ ಅರ್ಥಪೂರ್ಣ. ಫಸ್ಟ್ ರ್ಯಾಂಕ್ […]
ಎಂ ಪ್ರಸನ್ನ ಕುಮಾರ್ ನಿರ್ಮಾಣ ಮಾಡಿ ನಿರ್ದೇಶನವನ್ನೂ ಮಾಡಿರುವ ಚಿತ್ರ ಮನೋರಥ. ನಾಳೆ ರಾಜ್ಯಾಧ್ಯಂತ ಬಿಡುಗಡೆಯಾಗಲಿರುವ ಈ ಚಿತ್ರ ಮೂಲಕ ಅಂಜಲಿ ಎಂಬ ಬಹುಮುಖ ಪ್ರತಿಭೆ ನಾಯಕಿಯಾಗಿ ಪಾದಾರ್ಪಣೆ ಮಾಡಲಿದ್ದಾರೆ. ಮಾಮೂಲಿಯಾದ ಪಾತ್ರಗಳಿಗಿಂತಲೂ ನಟಿಸಲು ಅವಕಾಶವಿರುವ ಭಿನ್ನ ಜಾಡಿನ ಪಾತ್ರಗಳನ್ನು ಬಯಸುತ್ತಾ ಬಂದಿರೋ ಅಂಜಲಿ ಮನೋರಥ ಚಿತ್ರದ ಒಟ್ಟಾರೆ ಕಥೆ ಮತ್ತು ತಮ್ಮ ಪಾತ್ರದ ಬಗ್ಗೆ ತುಂಬು ಅಭಿಮಾನ ಹೊಂದಿದ್ದಾರೆ. ತನ್ನ ಇಂಗಿತಕ್ಕೆ ತಕ್ಕುದಾಗಿಯೇ ಮನೋರಥ ಚಿತ್ರದ ಮೂಡಿ ಬಂದಿದೆ ಎಂಬ ಖುಷಿಯನ್ನೂ ಹೊಂದಿದ್ದಾರೆ. ಅಂಜಲಿ ನಟನೆಯ […]
ಪಾರ್ವತಮ್ಮ ರಾಜ್ಕುಮಾರ್ ಅವರ ತಂಗಿಯ ಮಗ ಸಂತೋಷ್ ನಿರ್ದೇಶನದ ಎರಡನೇ ಚಿತ್ರ ಬಿಂದಾಸ್ ಗೂಗ್ಲಿ. ಕಾಲೇಜು ಮತ್ತು ಆ ಕಾರಿಡಾರಿಂದಲೇ ಅರಳಿಕೊಳ್ಳುವ ಡ್ಯಾನ್ಸ್ ವ್ಯಾಮೋಹದ ಸುತ್ತ ಹರಡಿಕೊಳ್ಳುವ ಯೂಥ್ಫುಲ್ ಕಥೆಯನ್ನು ಹೊಂದಿರೋ ಈ ಚಿತ್ರ ನಾಳೆ ರಾಜ್ಯಾಧ್ಯಂತ ಬಿಡುಗಡೆಯಾಗಲಿದೆ. ಕಳೆದ ವರ್ಷ ಸಂತೋಷ್ ಸ್ಟೂಡೆಂಟ್ಸ್ ಅಂತೊಂದು ಚಿತ್ರವನ್ನು ನಿರ್ದೇಶನ ಮಾಡಿದ್ದರು. ಅದು ತಕ್ಕಮಟ್ಟಿಗೆ ಯಶಸನ್ನೂ ಗಳಿಸಿಕೊಂಡಿತ್ತು. ಇದೀಗ ಯುವ ಹುಮ್ಮಸ್ಸಿನ ಹೊಸಾ ಬಗೆಯ ಕಥೆಯೊಂದಿಗೆ ಬಿಂದಾಸ್ ಗೂಗ್ಲಿ ಚಿತ್ರ ಅವರ ಎರಡನೇ ಪ್ರಯತ್ನವಾಗಿ ಮೂಡಿ ಬಂದಿದೆ. ಪ್ರತಿಯೊಬ್ಬರಲ್ಲಿಯೂ […]
ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ನಂತರ ಹರಿಪ್ರಿಯಾ ಯಾವ ಚಿತ್ರದಲ್ಲಿ ನಟಿಸಲಿದ್ದಾರೆಂಬ ಬಗ್ಗೆ ಅವರ ಅಭಿಮಾನಿಗಳೆಲ್ಲ ಕಾತರರಾಗಿದ್ದರು. ಆದರೀಗ ಸದ್ದೇ ಇಲ್ಲದೆ ಹರಿಪ್ರಿಯಾ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಅದರ ಸ್ಕ್ರಿಫ್ಟ್ ಪೂಜೆ ಕೂಡಾ ನೆರವೇರಿದೆ! ಇದುವರೆಗೂ ಭಿನ್ನವಾದ ಪಾತ್ರಗಳಿಗೇ ಹೆಚ್ಚು ಒತ್ತು ನೀಡುತ್ತಾ ಬಂದಿರುವ ಹರಿಪ್ರಿಯಾ ಇದೀಗ ಅಷ್ಟೇ ವಿಶಿಷ್ಟವಾಗಿರೋ ಕಥೆ ಹೊಂದಿರುವ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ‘ಕನ್ನಡ ಗೊತ್ತಿಲ್ಲ’ ಎಂಬ ಕ್ಯಾಚೀ ಟೈಟಲ್ಲನ್ನೂ ಇಡಲಾಗಿದೆ. ಈ ಶೀರ್ಷಿಕೆಯಂತೆಯೇ ಕುತೂಹಲಕರವಾದ ಕಥೆ ಮತ್ತು ಪಾತ್ರವಿರೋ ಕಾರಣದಿಂದಲೇ […]
ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರ ಬಿಡುಗಡೆಯಾಗೋ ದಿನಾಂಕ ಪಕ್ಕಾ ಆಗಿದೆ. ಇದೇ ತಿಂಗಳ ಇಪ್ಪತ್ತೇಳನೇ ತಾರೀಕಿನಂದು ಈ ಚಿತ್ರ ಬಿಡುಗಡೆಯಾಗಲಿರೋದರಿಂದ ಶಿವಣ್ಣನ ಅಭಿಮಾನಿಗಳ ಸಂಭ್ರಮ ತಾರಕಕ್ಕೇರಿದೆ. ಅತ್ತ ಕಿಚ್ಚಾ ಸುದೀಪ್ ಅಭಿಮಾನಿಗಳು ಕೂಡಾ ಈ ಬಗ್ಗೆ ಥ್ರಿಲ್ ಆಗಿದ್ದಾರೆ. ಚಿತ್ರ ಬಿಡುಗಡೆಯಾಗಲು ಇನ್ನೊಂದು ವಾರ ಬಾಕಿ ಇದ್ದರೂ ಕೂಡಾ ಅಭಿಮಾನಿಗಳೆಲ್ಲ ಈಗಾಗಲೇ ತಯಾರಿ ಆರಂಭಿಸಿದ್ದಾರೆ. ಮುಖ್ಯವಾದ ಥೇಟರುಗಳು ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ದಿ ವಿಲನ್ ಚಿತ್ರಕ್ಕೆ ಅದ್ದೂರಿ ಸ್ವಾಗತ ಕೋರಲು ತಯಾರಿಗಳು ಭರದಿಂದ ಸಾಗುತ್ತಿವೆ. ಇದಕ್ಕಾಗಿ […]
ಇನ್ನೇನು ಬಿಡುಗಡೆಗೆ ಸಂಪೂರ್ಣ ತಯಾರಿ ಮುಗಿಸಿಕೊಂಡು ನಿಂತಿರೋ ಚಿತ್ರ ಕರ್ಷಣಂ. ಪ್ರತೀ ಚಿತ್ರದ ಹಿಂದೆಯೂ ಒಂದೊಂದು ಸಾಹಸಗಾಥೆಯಿರುತ್ತೆ. ಏನೇ ಬಂದರೂ ಗುರಿ ಮುಟ್ಟುವ ಛಲದ ಕಹಾನಿಯೂ ಇರುತ್ತೆ. ಅಷ್ಟಿಲ್ಲದೇ ಹೋದರೆ ಒಂದು ಚಿತ್ರ ನಿರ್ಮಾಣವಾಗೋದಿಲ್ಲ. ನಿರ್ಮಾಣವಾದರೂ ಪ್ರೇಕ್ಷಕರನ್ನು ತಟ್ಟೋದಿಲ್ಲ. ಕರ್ಷಣಂ ಚಿತ್ರವನ್ನು ಸ್ವತಃ ನಿರ್ಮಾಣ ಮಾಡಿ ನಾಯಕನಾಗಿಯೂ ನಟಿಸಿರೋ ಧನಂಜಯ್ ಅತ್ರೆ ಅವರದ್ದೂ ಕೂಡಾ ಪಕ್ಕಾ ಛಲದ ಹಾದಿ! ಈವತ್ತಿಗೆ ಕಿರುತೆರೆಯ ಖ್ಯಾತ ನಿರ್ದೇಶಕ ಶರವಣ ನಿರ್ದೇಶಿಸಿರುವ ಕರ್ಷಣಂ ಚಿತ್ರ ಟ್ರೈಲರ್, ಹಾಡು ಮುಂತಾದವುಗಳ ಮೂಲಕ ಜನ […]