ನಾಯಕನಾಗಿ “ಅಣ್ಣಯ್ಯ” ಧಾರಾವಾಹಿಯ ಜನಪ್ರಿಯ ನಟ ವಿಕಾಶ್ ಉತ್ತಯ್ಯ . ಕನ್ನಡದಲ್ಲಿ ಕಂಟೆಂಟ್ ಓರಿಯಂಟೆಡ್ ಚಿತ್ರಗಳನ್ನು ಜನ ಹೆಚ್ಚು ಮೆಚ್ಚಿಕೊಳ್ಳುತ್ತಿದ್ದಾರೆ. ಚಿತ್ರದ ಮೋಷನ್ ಪೋಸ್ಟರ್ ನೋಡಿದಾಗ ಆ ಸಾಲಿಗೆ “ಅಪಾಯವಿದೆ ಎಚ್ಚರಿಕೆ” ಚಿತ್ರ ಸಹ ಸೇರುವ ಎಲ್ಲಾ ಲಕ್ಷಣಗಳಿದೆ. ತೀರ್ಥಹಳ್ಳಿ ಮೂಲದವರಾದ ಅಭಿಜಿತ್ ತೀರ್ಥಹಳ್ಳಿ ಈ ಚಿತ್ರವನ್ನು ನಿರ್ದೇಶಿಸಿದ್ದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಅಣ್ಣಯ್ಯ” ಧಾರಾವಾಹಿ ಖ್ಯಾತಿಯ ನಟ ವಿಕಾಶ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ. ವಿ.ಜಿ.ಮಂಜುನಾಥ್ ಹಾಗು ಪೂರ್ಣಿಮಾ ಎಂ ಗೌಡ ಈ ನಿರ್ಮಾಣ ಮಾಡಿದ್ದಾರೆ. […]
ಗೆದ್ದಮೇಲೆ ಒದ್ದು ನಡೆಯಬಾರದು! ನಮ್ಮವರ ಬೆಳವಣಿಗೆ ನಮಗೇ ಮಾರಕವಾಗಬಾರದು!ಕೆ.ಜಿ.ಎಫ್ ಸಿನಿಮಾ ಐತಿಹಾಸಿಕ ಗೆಲುವಿನ ನಂತರ ಅದರ ಹೀರೋ ಯಶ್ ನಟಿಸಬೇಕಿದ್ದ ಒಂದಿಷ್ಟು ಕನ್ನಡ ಸಿನಿಮಾಗಳು ಅಸುನೀಗಿದವು. ಕೆಲವೊಂದನ್ನು ಭ್ರೂಣಾವಸ್ಥೆಯಲ್ಲೇ ಚಿವುಟಿಹಾಕಲಾಯಿತು. ಮತ್ತೆ ಕೆಲವು ಸಿನಿಮಾಗಳ ಚಿತ್ರೀಕರಣವನ್ನು ನಿಲ್ಲಿಸಿ, ಆ ತನಕ ಚಿತ್ರೀಕರಿಸಿದ್ದ ಫುಟೇಜುಗಳನ್ನು ನಿರ್ದಾಕ್ಷಿಣ್ಯವಾಗಿ ಬಿಸಾಕಿದರು. ಒಂದೇ ಒಂದು ವಿಚಾರವನ್ನು ನೆನಪಿಡಬೇಕು. ಯಶ್ ಈ ಸಿನಿಮಾಗಳಿಗೆ ಸಂಬಂಧಪಟ್ಟ ಯಾವುದೇ ನಿರ್ಮಾಪಕ, ನಿರ್ದೇಶಕ, ತಂತ್ರಜ್ಞರಿಗೆ ನಷ್ಟವಾಗಲು ಬಿಟ್ಟಿರಲಿಲ್ಲ. ಖರ್ಚಾಗಿದ್ದ ಮೊತ್ತವನ್ನು ತಮ್ಮ ಕೈಯಾರೆ ನೀಡಿದ್ದರು; ಅವರವರ ಶ್ರಮಕ್ಕೆ ಬೆಲೆ […]
ಪಿ.ಆರ್.ಕೆ ಪ್ರೊಡಕ್ಷನ್ಸ್, ಜಯಣ್ಣ ಫಿಲಂಸ್, ಕೆ.ಆರ್.ಜಿ.ಸ್ಟುಡಿಯೋಸ್ ಸಹಯೋಗದಲ್ಲಿ ಮೂಡಿಬರುತ್ತಿರುವ ಯುವ ರಾಜ್ ಕುಮಾರ್ ಅವರ ಬಹು ನಿರೀಕ್ಷಿತ ಚಿತ್ರ “ಎಕ್ಕ” ಇಂದು ತನ್ನ ನಾಂದಿ ಪೂಜೆ/ಮುಹೂರ್ತವನ್ನು ಶ್ರೀ ಬಂಡೆ ಮಾಕಾಳಮ್ಮ ದೇವಸ್ಥಾನದಲ್ಲಿ ನೆರವೇರಿಸಿ, ಚಿತ್ರೀಕರಣವನ್ನು ಆರಂಭಿಸಿದೆ. ವಿಜಯ್ ಕಿರಗಂದೂರ್ ಅವರ ಪತ್ನಿ ಶ್ರೀಮತಿ ಶೈಲಜಾ ವಿಜಯ್ ಕ್ಲಾಪ್ ಮಾಡುವ ಮೂಲಕ “ಎಕ್ಕ” ಚಿತ್ರಕ್ಕೆ ನಾಂದಿ ಹಾಡಲಾಯಿತು, ಮೊದಲ ಶಾಟ್ ಅನ್ನು ನಟರಾಕ್ಷಸ ಡಾಲಿ ಧನಂಜಯ್ ನಿರ್ದೇಶಿಸಿದ್ದು, ನಿರ್ಮಾಪಕ ಕಾರ್ತಿಕ ಗೌಡ ಅವರ ತಾಯಿ ಶ್ರೀಮತಿ ವಿಜಯಲಕ್ಷ್ಮೀ ರಾಮಕೃಷ್ಣ […]
ನಿರ್ಮಾಪಕ, ನಿರ್ದೇಶಕ, ನಟ ಹಾಗೂ ಪ್ರಸ್ತುತ ಇವೆಂಟ್ ಮ್ಯಾನೇಜ್ಮೆಂಟ್ ಮೂಲಕ ಚಿತ್ರರಂಗದ ಎಲ್ಲರ ಮನ ಗೆದ್ದಿರುವ ನವರಸನ್, ಕಳೆದ ಎರಡು ವರ್ಷಗಳ ಹಿಂದೆ ಚಿತ್ರಗಳ ಪ್ರಮೋಷನ್ ಗೆ ಅನುಕೂಲವಾಗುವಂತಹ MMB legacy ಎಂಬ ಸುಸಜ್ಜಿತ ಸಭಾಂಗಣ ಆರಂಭಿಸಿದ್ದರು. ಎರಡು ವರ್ಷಗಳಲ್ಲಿ 300 ರ ಆಸುಪಾಸಿನ ಸಮಾರಂಭಗಳು ಈ ಸ್ಥಳದಲ್ಲಿ ನಡೆದಿದೆ. ಆ ಎಲ್ಲಾ ಕಾರ್ಯಕ್ರಮಗಳು ಚಲನಚಿತ್ರದ ಕುರಿತಾದ ಕಾರ್ಯಕ್ರಮಗಳೇ ಆಗಿರುವುದು ವಿಶೇಷ. ಇತ್ತೀಚಿಗೆ MMB legacy ಯ ದ್ವಿತೀಯ ವಾರ್ಷಿಕೋತ್ಸವ ಅದ್ದೂರಿಯಾಗಿ ನೆರವೇರಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ […]
‘ರಜನಿಕಾಂತ್ ಇಷ್ಟು ವರ್ಷ ದುಡಿದಿದ್ದಾರೆ. ಬದುಕು ಅವರಿಗೆ ಸಕಲವನ್ನೂ ಕೊಟ್ಟಿದೆ. ಈ ಹೊತ್ತಲ್ಲಿ ಮಕ್ಕಳು, ಮೊಮ್ಮಕ್ಕಳ ಜೊತೆ ಸಮಯ ಕಳೆಯೋದು ಬಿಟ್ಟು ತ್ರಾಸಪಟ್ಟು ಸಿನಿಮಾಗಳಲ್ಲಿ ನಟಿಸೋ ಜರೂರತ್ತೇನು?’ ಇದು ಸಾಕಷ್ಟು ಜನರ ಪ್ರಶ್ನೆ ಮತ್ತು ಅಭಿಪ್ರಾಯ. ಇಂಥ ಪ್ರಶ್ನೆಗಳಿಗೆ ನಮ್ಮ ನಡುವಿನ ಕ್ರಿಯಾಶೀಲ ನಿರ್ದೇಶಕ ರವೀಂದ್ರ ವೆಂಶಿ ಉತ್ತರಿಸಿದ್ದಾರೆ. ರಜನಿ ಭಾರತೀಯ ಚಿತ್ರೋದ್ಯಮಕ್ಕೆ ಈ ಕ್ಷಣಕ್ಕೂ ಎಷ್ಟು ಅವಶ್ಯಕ ಅನ್ನೋದನ್ನು ಬಿಡಿಸಿಟ್ಟಿದ್ದಾರೆ. ಓದಿದ ನಂತರ ನಿಮ್ಮಲ್ಲೂ ಇದೇ ಅನಿಸಿಕೆ ಮೂಡಬಹುದು…. ರಜನಿಕಾಂತ್ ಗೆ ಈ ವಯಸ್ಸಿನಲ್ಲಿ ಇದೆಲ್ಲಾ […]
ಎಸ್ಜಿಎಸ್ ಕ್ರಿಯೇಶನ್ಸ್ ಅಡಿಯಲ್ಲಿ, ಎಸ್.ಜಿ.ಸತೀಶ್ ನಿರ್ಮಾಣ, ಗುರುಮೂರ್ತಿ ರಚನೆ ಮತ್ತು ನಿರ್ದೇಶನದ ’ಉಗ್ರಾವತಾರ’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಎಂಎಂಬಿ ಲೆಗೆಸಿದಲ್ಲಿ ಅದ್ದೂರಿಯಾಗಿ ನಡೆಯಿತು. ರಿಯಲ್ ಸ್ಟಾರ್ ಉಪೇಂದ್ರ ತುಣುಕುಗಳನ್ನು ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದರು. ನಂತರ ಮಾತನಾಡಿ ನಿರ್ದೇಶಕರ ಶ್ರಮ ಇದರಲ್ಲಿ ಕಾಣಿಸುತ್ತದೆ. ಆದರೂ ಅವರು ದುಗಡದಿಂದ ಇದ್ದಾರೆ. ಮೊದಲಬಾರಿ ನನಗೂ ಅದೇ ಆಗಿತ್ತು. ಭವಿಷ್ಯದಲ್ಲಿ ನೀವು ಸ್ಟಾರ್ ನಿರ್ದೇಶಕರಾಗುತ್ತಿರಾ. ಮನೆಯಲ್ಲಿ ಉಗ್ರಾವತಾರ ಅವತಾರವನ್ನು ನೋಡಿದ್ದೇನೆ. ಮುಂದೆ ನೀವುಗಳು ನೋಡುತ್ತಿರಾ. ಆದರೆ ಪೋಲೀಸ್ರು ಗ್ಲಾಮರಸ್ ಆಗಿ […]
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇತ್ತೀಚೆಗಷ್ಟೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅದ್ವಿತ ಫಿಲಂ ಫ್ಯಾಕ್ಟರಿ ಹಾಗೂ ಮಸ್ಕ್ಯುಲರ್ ಗ್ರೂಪ್ ಲಾಂಛನದಲ್ಲಿ ಭಾರ್ಗವಿ ಮುರಳಿ ಹಾಗೂ ರಂಗನಾಥ್ ಬಿ ನಿರ್ಮಿಸಿರುವ ಹಾಗೂ ತಿರುಮಲೇಶ್ ವಿ ನಿರ್ದೇಶನದ “ಆಪರೇಶನ್ ಡಿ” ಚಿತ್ರದ ಟೀಸರ್ ಅನ್ನು ಬಿಡುಗಡೆ ಶುಭ ಹಾರೈಸಿದ್ದಾರೆ. ಇತ್ತೀಚೆಗೆ ನಡೆದ ಈ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಟೀಸರ್ ಬಿಡುಗಡೆ ಮಾಡಿಕೊಟ್ಟ ಧ್ರುವ ಸರ್ಜಾ ಅವರಿಗೆ ಧನ್ಯವಾದ ತಿಳಿಸಿ, “ಆಪರೇಷನ್ ಡಿ” ಕುರಿತು ಮಾತನಾಡಿದರು. ಟೀಸರ್ […]
ಮಾಸ್ ಸಿನಿಮಾಗಳಲ್ಲಿಯೇ ಹೆಚ್ಚಾಗಿ ನಟಿಸಿರೋ ಅನೀಶ್ ತೇಜೇಶ್ವರ್ ಆರಾಮ್ ಅರವಿಂದ ಸ್ವಾಮಿ ಸಿನಿಮಾ ಮೂಲಕ ರೋಮ್ಯಾಂಟಿಕ್ ಹೀರೋ ಆಗಿ ನಿಮ್ಮ ಮುಂದೆ ಬರ್ತಿದ್ದಾರೆ. ಆರಂಭದಿಂದಲೂ ವಿಭಿನ್ನ ಪ್ರಚಾರದ ಮೂಲಕ ಪ್ರೇಕ್ಷಕರನ್ನು ಗಮನಸೆಳೆಯುತ್ತಿರುವ ಚಿತ್ರತಂಡ ಈಗ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ. ಆರಾಮ್ ಅರವಿಂದ ಸ್ವಾಮಿ ಸಿನಿಮಾ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದು, ನವೆಂಬರ್ 22ಕ್ಕೆ ರಾಜ್ಯಾದ್ಯಂತ ಚಿತ್ರ ತೆರೆಗೆ ಬರ್ತಿದೆ. ಮುಂದೆ ಹೇಗೋ ಕುಣಿದು ಅನೀಶ್ ಟೈಟಲ್ ಟ್ರ್ಯಾಕ್ ಮೂಲಕ ಜಬರ್ದಸ್ತ್ ಆಗಿ ಕುಣಿದಿದ್ದ ಅನೀಶ್ ತೇಜೇಶ್ವರ್ ಈಗ […]
ಸೌಂದರ್ಯ ಸಿನಿ ಕಂಬೈನ್ಸ್ ಹಾಗೂ ನರಸಿಂಹ ಸಿನಿಮಾಸ್ ಲಾಂಛನದಲ್ಲಿ ಅನುಸೂಯ ಕೋಮಲ್ ಕುಮಾರ್, ಸಹನ ಮೂರ್ತಿ ರವರು ನಿರ್ಮಿಸಿರುವ, ಹೊಸ ಪ್ರತಿಭೆ N R ಪ್ರದೀಪ್ ಕಥೆ, ಚಿತ್ರಕಥೆ, ಸಾಹಿತ್ಯ,ಸಂಭಾಷಣೆ ಬರೆದು ನಿರ್ದೇಶಿಸಿರುವ ಹಾಗೂ ಕೋಮಲ್ ಕುಮಾರ್ ನಾಯಕರಾಗಿ ನಟಿಸಿರುವ “ಯಲಾಕುನ್ನಿ” ಚಿತ್ರದ ಟೀಸರ್ ಇತ್ತೀಚೆಗೆ ನಡೆದ “ಗಿಚ್ಚಿ ಗಿಲಿಗಿಲಿ” ಫೈನಲ್ ನಲ್ಲಿ ಬಿಡುಗಡೆಯಾಯಿತು. ಕೋಮಲ್ ಕುಮಾರ್ ಸ್ಟುಡಿಯೋಸ್ ಯೂಟ್ಯೂಬ್ ಚಾನಲ್ ನಲ್ಲಿ ಈ ಚಿತ್ರದ ಟೀಸರ್ ಲಭ್ಯವಿದೆ. ಟೀಸರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, […]
ಕನ್ನಡ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುತ್ತಿಲ್ಲ ಎಂಬ ಮಾತನ್ನು ದೂರ ಮಾಡಿದ, ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣದ, ಶ್ರೀನಿವಾಸರಾಜು ನಿರ್ದೇಶನದ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ಕೃಷ್ಣಂ ಪ್ರಣಯ ಸಖಿ” ಚಿತ್ರ ಬಿಡುಗಡೆಯಾಗಿ ಇಪ್ಪತ್ತೈದು ದಿನಗಳಾಗಿದೆ. ಇಪ್ಪತ್ತೈದು ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿರುವ ಈ ಚಿತ್ರದ ಗೆಲುವಿನ ಓಟ ಈಗಲೂ ಮುಂದುವರೆದಿದೆ. ಈ ಸಂಭ್ರಮವನ್ನು ಸಂಭ್ರಮಿಸಲು ನಿರ್ಮಾಪಕರು ಪ್ರಸನ್ನ ಚಿತ್ರಮಂದಿರದಲ್ಲಿ ಸಮಾರಂಭ ಆಯೋಜಿಸಿದ್ದರು. ಚಿತ್ರದ ಗೆಲುವಿಗೆ ಕಾರಣರಾದ ಪ್ರತಿಯೊಬ್ಬರಿಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. […]