ಜೂನ್ 26ಕ್ಕೆ ಬಲರಾಮನ ದಿನಗಳು ಬಿಡುಗಡೆKVN ಪ್ರೊಡಕ್ಷನ್ಸ್ ವಿತರಣೆಸದ್ಯದಲ್ಲೇ ಟ್ರೈಲರ್ ರಿಲೀಸ್

Picture of Cinibuzz

Cinibuzz

Bureau Report

ಬಲರಾಮನ ದಿನಗಳು… ಎರಡೂ ವಿಭಿನ್ನ ಹಾಡು ಮತ್ತು ಟೀಸರ್ ನಿಂದ ಪ್ರೇಕ್ಷಕರ ಗಮನ ಸೆಳೆದಿರೋ, ಉದ್ಯಮದಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿರೋ ಚಿತ್ರ. ಬಲರಾಮನ ದಿನಗಳು ಚಿತ್ರದ ಬಿಡುಗಡೆ ದಿನಾಂಕ ನಿಗಧಿಯಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ವಿತರಣೆ ಮಾಡ್ತಿದ್ದು, ಜೂನ್ 26ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗ್ತಿದೆ. ಬಲರಾಮನ ದಿನಗಳು ಚಿತ್ರ ಆದಿನಗಳ ಮತ್ತೊಂದು ಅಧ್ಯಾಯ.. ಆದಿನಗಳು ಖ್ಯಾತಿಯ ಕೆ.ಎಂ ಚೈತನ್ಯ ನಿರ್ದೇಶನದ ಮತ್ತೊಂದು ಕಲ್ಟ್ ಕ್ಲಾಸಿಕ್..

ಪದ್ಮಾವತಿ ಫಿಲಂಸ್ ಬ್ಯಾನರ್ ನಡಿಯಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಬಲರಾಮನ ದಿನಗಳು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

80ರ ದಶಕದ ಕಥೆಯಾಗಿರೋ ಈ ಚಿತ್ರಕ್ಕೆ ವೇಣುರವರ ಛಾಯಾಗ್ರಹಣವಿದೆ.ವಿನೋದ್ ಪ್ರಭಾಕರ್ ನಾಯಕನಾಗಿ ಬಲರಾಮನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಪ್ರಿಯಾ ಆನಂದ್ ಅಭಿನಯಿಸಿದ್ದಾರೆ.

ಆ ದಿನಗಳು ಚಿತ್ರದ ಪಾತ್ರಗಳು ಇಲ್ಲೂ ಮುಂದುವರೆದಿದ್ದು, ಅತುಲ್ ಕುಲಕರ್ಣಿ, ಶರತ್ ಲೋಹಿತಾಶ್ವ ,ಆಶೀಶ್ ವಿದ್ಯಾರ್ಥಿ ಹಾಗೂ ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಸೇರಿ ಹಲವು ಪ್ರತಿಭಾನ್ವಿತ ಕಲಾವಿದ್ರ ದಂಡು ಈ ಚಿತ್ರದಲ್ಲಿದೆ.

ದಕ್ಷಿಣ ಭಾರತದ ಖ್ಯಾತ ಸಂಗೀತ‌ ನಿರ್ದೇಶಕ ಸಂತೋಷ್ ನಾರಾಯಣ್,‌ ಸಂಗೀತ ಸಂಯೋಜಿಸಿರೋದು ಈ ಚಿತ್ರದ ಹೈಲೈಟ್..ಹೆಚ್ ಸಿ ವೇಣು ಛಾಯಾಗ್ರಹಣ ಹರಿದಾಸ್ ಕೆ.ಜಿ.ಎಫ್ ಸಂಕಲನ‌ ಚಿತ್ರಕ್ಕಿದೆ.. ಈಗಾಗ್ಲೇ ಬಿಡುಗಡೆಯಾಗಿರೋ ಟೀಸರ್ ಹಾಗೂ ಹಾಡುಗಳು ಚಿತ್ರದ ಮೇಲೆ ವಿಶೇಷ ಕುತೂಹಲ ಹುಟ್ಟಿಸಿದ್ದು, ದೊಡ್ಡದಾಗಿ ಮ್ಯಾಜಿಕ್ ಮಾಡೋ ಸೂಚನೆ ಕೊಡ್ತಿದೆ. ಹಿಟ್ ಬರಗಾಲದಲ್ಲಿ ಈ ಸಿನ್ಮಾ ದೊಡ್ಡ ಹಿಟ್ ಆಗೋ ತರಹ ಕಾಣ್ತಿದೆ. ಅದೇನೆ ಇದ್ರೂ ಜೂನ್ 26ನೇ ತಾರೀಖು ಬಲರಾಮನ ಅಸಲಿ ಬಲ ಏನು ಅನ್ನೋದು ಗೊತ್ತಾಗಲಿದೆ.

ಇನ್ನಷ್ಟು ಓದಿರಿ

Scroll to Top