ವಾಸು ನಾನ್ ಪಕ್ಕಾ ಕಮರ್ಷಿಯಲ್ ಸಿನಿಮಾ ಬಿಡುಗಡೆಯಾಗಿದೆ. ಹೆಸರಿಗೆ ತಕ್ಕಂತೆ ಇದು ಇತ್ತೀಚೆಗೆ ತೆರೆಕಂಡಿರುವ ಗಮನಾರ್ಹ ಕಮರ್ಷಿಯಲ್ ಚಿತ್ರ. ಅನೀಶ್ ಅಕಿರಾ ಚಿತ್ರದ ನಂತರ ವರ್ಷಗಳ ಗ್ಯಾಪ್ ತೆಗೆದುಕೊಂಡು ಸ್ವತಃ ನಿರ್ಮಾಣವನ್ನೂ ಮಾಡಿ ತೆರೆಗೆ ತಂದಿರುವ ಚಿತ್ರ ವಾಸು ನಾನ್ ಪಕ್ಕಾ ಕಮರ್ಷಿಯಲ್. ಈಗಾಗಲೇ ಚಿತ್ರದ ಟ್ರೇಲರು ಮತ್ತು ಹಾಡುಗಳೆಲ್ಲಾ ಸೌಂಡು ಮಾಡಿರೋದರಿಂದ `ವಾಸು ನಾನ್ ಪಕ್ಕಾ ಕಮರ್ಷಿಯಲ್ ಸಿನಿಮಾ’ದ ಬಗ್ಗೆ ಕ್ಯೂರಿಯಾಸಿಟಿ ಹೆಚ್ಚಾಗಿತ್ತು. ಬಾಕ್ಸಿಂಗ್ ಮ್ಯಾಚುಗಳಲ್ಲಿ ಸ್ಪರ್ಧಿಸಿ ಎಂಥಾ ಘಟಾನುಘಟಿಗಳ ಎದೆಗೂ ಗುದ್ದಿ, ಕಪ್ ಗೆಲ್ಲೋದು […]
ಕನ್ನಡ ದೃಶ್ಯಮಾಧ್ಯಮದಲ್ಲಿ ತನ್ನದೇ ಆದಂಥ ಸ್ಥಾನವನ್ನು ಪಡೆದುಕೊಂಡಿರುವ ಜೀ ಕನ್ನಡ ವಾಹಿನಿ ಇಲ್ಲಿಯವರೆಗೂ ಪ್ರೇಕ್ಷಕರಿಗೆ ಇಷ್ಟವಾದ ಕಾರ್ಯಕ್ರಮಗಳನ್ನೇ ಕೊಡಲು ಹಗಲಿರುಳು ಶ್ರಮಿಸುತ್ತಲಿದೆ. ಮನೋರಂಜನೆಗೆ ಮತ್ತೊಂದು ಹೆಸರಾಗಿ ಈ ವಾಹಿನಿ ಮೂಡಿಬರುತ್ತಲಿದೆ. ತನ್ನ ವಿಭಿನ್ನ ಪ್ರಯತ್ನಗಳ ಮೂಲಕ ಹೊಸ ಹೊಸ ಮೈಲಿಗಲ್ಲುಗಳನ್ನು ಸೃಷ್ಟಿಸುತ್ತಾ, ಸಾಮಾಜಿಕ ಬದ್ದತೆಯನ್ನು ಏಕಕಾಲಕ್ಕೆ ಉಳಿಸಿಕೊಳ್ಳುವತ್ತ ಇದು ಹೆಜ್ಜೆ ಹಾಕುತ್ತಿದೆ. ಈಗಾಗಲೇ ಜನಪ್ರಿಯ ರಿಯಾಲಿಟಿ ಶೋಗಳು ಹಾಗೂ ಧಾರಾವಾಹಿಗಳ ಮೂಲಕ ಕರ್ನಾಟಕದಲ್ಲಿ ಮನೆಮಾತಾಗಿರುವ ಜೀ ಕನ್ನಡ ಈಗ ತನ್ನ ಜನಪ್ರಿಯ ಶೋಗಳಲ್ಲಿ ಒಂದಾದ ಯಾರಿಗುಂಟು ಯಾರಿಗಿಲ್ಲ […]
ಸರಿಸುಮಾರು 95 ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ಕಲಾವಿದೆ, ನಿರ್ಮಾಪಕಿ, ಸದ್ಯ ನಿರ್ಮಾಪಕರ ಸಂಘದ ಆಡಳಿತಮಂಡಳಿ ಸದಸ್ಯೆಯೂ ಆಗಿರುವ ಅನಿತಾ ರಾಣಿ ಅವರ ಪರ್ಸನ್ನು ಕಿಡಿಗೇಡಿ ಕಳ್ಳನೊಬ್ಬ ಎಗರಿಸಿದ್ದಾನೆ. ಬೆಂಗಳೂರಿನ ಸುಲ್ತಾನ್ ಪಾಳ್ಯದಲ್ಲಿ ವಾಸವಿರುವ ಅನಿತಾ ರಾಣಿ ಅವರು ಆರ್.ಟಿ.ನಗರದ ಬ್ಯಾಂಕ್ ಆಫ್ ಇಂಡಿಯಾದಿಂದ ಹೊರಬಂದು ಕಾರು ತೆರೆಯೋ ಹೊತ್ತಿಗೆ ಆ ಕಡೆಯಿಂದ ಬಂದ ಪಲ್ಸರ್ ಬೈಕ್ ಸವಾರನೊಬ್ಬ ವಿಸಿಟಿಂಗ್ ಕಾರ್ಡ್ ತೋರಿ ಅಡ್ರೆಸ್ ಕೇಳಿದ್ದಾನೆ. `ಇದೇನಪ್ಪಾ ಪೀಣ್ಯದಲ್ಲಿರುವ ವಿಳಾಸವನ್ನ ಇಲ್ಲಿ ಕೇಳುತ್ತಿದ್ದೀಯ?’ ಎಂದು ಪ್ರಶ್ನಿಸೋ ಹೊತ್ತಿಗೆ ಕಾರಿನ […]
ತಮ್ಮ ಎರಡನೇ ಮಗ ಪ್ರಣಾಮ್ ಹೀರೋ ಆಗಿರೋ ಕುಮಾರಿ೨೧ ಎಫ್ ಚಿತ್ರದ ಪ್ರೀಮಿಯರ್ ಶೋ ನಡೆದ ಕ್ಷಣವೇ ಡೈನಾಮಿಕ್ ಸ್ಟಾರ್ ದೇವರಾಜ್ ಬೇಸರಗೊಂಡಿದ್ದಾರೆ. ಅದಕ್ಕೆ ಕಾರಣವಾಗಿರೋದು ನಟ ಚಿರಂಜೀವಿ ಸರ್ಜಾ ಪಟಾಲಮ್ಮಿನ ದಾಂಧಲೆ! ನೆನ್ನೆ ರಾತ್ರಿ ನಗರದ ಓರಾಯನ್ ಮಾಲ್ನ ಪಿವಿಆರ್ನಲ್ಲಿ ಕುಮಾರಿ ಚಿತ್ರದ ಪ್ರೀಮಿಯರ್ ಶೋ ನಡೆದಿತ್ತು. ಇದಕ್ಕೆ ಸೆಲೆಬ್ರಿಟಿಗಳು, ಮಾಧ್ಯಮ ಮಂದಿಯೆಲ್ಲ ಕಿಕ್ಕಿರಿದು ಸೇರಿದ್ದರು. ಆದರೆ ಓರಾಯನ್ ಮಾಲಿನ ಪಿವಿಆರ್ನಲ್ಲಿ ಒಂದು ಶೋಗೆ ನಿಗಧಿಯಾಗಿರೋ ಸೀಟಿಗಿಂತ ಒಬ್ಬರೇ ಹೆಚ್ಚಾದರೂ ಹೊರ ಕಳಿಸಲಾಗುತ್ತದೆ. ಆದರೆ ಸರ್ಜಾ […]
ಒಂದಷ್ಟು ಸಿನಿಮಾಗಳಲ್ಲಿ ಖಳನಟನಾಗಿ ನಟಿಸಿ ಗುರುತಿಸಿಕೊಂಡಿದ್ದ ಧರ್ಮ ಎಂಬಾತನನ್ನು ಪ್ರೇಕ್ಷಕರು ನೆನಪಿಟ್ಟುಕೊಂಡಿರ ಬಹುದು. ನಟನೆಯ ಕಾರಣಕ್ಕಲ್ಲದಿದ್ದರೂ ವಿವಾದಗಳು, ಅಫೇರುಗಳ ಮೂಲಕವಾದರೂ ಈತ ಆಗಾಗ ಸುದ್ದಿಯಲ್ಲಿರುತ್ತಾ ಬಂದಿದ್ದ. ನಟನಾಗಲು ಬೇಕಾದ ಎಲ್ಲ ಲಕ್ಷಣಗಳಿದ್ದರೂ ತನ್ನ ತೆವಲುಗಳ ಕಾರಣದಿಂದಲೇ ಜೀವನವನ್ನು ಎಕ್ಕಾ ಎಬ್ಬಿಸಿಕೊಂಡಿರೋ ಧರ್ಮ ಈಗ ಮತ್ತೆ ಚಾಲ್ತಿಗೆ ಬಂದಿದ್ದಾನೆ. ಆತನ ಮೇಲೆ ಮಹಿಳೆಯೊಬ್ಬಳ ಮೇಲೇ ಲೈಂಗಿಕ ದೌರ್ಜನ್ಯ ನಡೆಸಿ ಬ್ಲ್ಯಾಕ್ಮೇಲ್ ಮಾಡಿದ ಗಂಭೀರ ಆರೋಪ ಕೇಳಿ ಬಂದಿದೆ. ಧರ್ಮ ಇತ್ತೀಚೆಗೆ ಯಾವ ಚಿತ್ರಗಳಲ್ಲಿಯೂ ನಟಿಸಿದಂತಿಲ್ಲ. ಸೆಟ್ಟಿಗೆ ಬಂದರೆ ಅದೆಲ್ಲಿ […]
ಸಿನಿಮಾ ಮಂದಿ ಅದರಲ್ಲಿಯೂ ನಟಿಯರು ಸಾಮಾಜಿಕವಾಗಿ ಅದೇನೇ ನಡೆದರೂ ಅದಕ್ಕೂ ತಮಗೂ ಸಂಬಂಧವಿಲ್ಲ ಅಂತಿರೋದೇ ಹೆಚ್ಚು. ಇಲ್ಲಿ ಹೆಚ್ಚಿನವರಿಗೆ ಸಿನಿಮಾ ಕೂಡಾ ಅನ್ನಿಸಿದ್ದನ್ನು ಹೇಳುವ, ಆ ಮೂಲಕ ಜಾಗೃತಿ ಮೂಡಿಸುವ ಮಾಧ್ಯಮ ಅಂತಲೂ ಅನ್ನಿಸೋದಿಲ್ಲ. ಆದರೆ ಪ್ರಜ್ಞಾವಂತ ನಟಿ ತಾಪ್ಸಿ ಪನ್ನು ಇದಕ್ಕೆ ತದ್ವಿರುದ್ಧ! ಸಾಮಾಜಿಕ ಪಲ್ಲಟಗಳ ಬಗ್ಗೆ ದೊಡ್ಡ ಸ್ವರದಲ್ಲಿ ಧ್ವನಿ ಎತ್ತಲು ನಾನೇನು ಆಕ್ಟಿವಿಸ್ಟ್ ಅಲ್ಲ. ಆದರೆ ನನಗನ್ನಿಸಿದ್ದನ್ನು, ಹೇಳಲೇ ಬೇಕಾಗಿರೋದನ್ನು ಹೇಳಲು ಸಿನಿಮಾ ನನಗೆ ಮಾಧ್ಯಮ. ಸಿನಿಮಾಗಳ ಮೂಲಕವೇ ಇದರ ಸಾಕಾರಕ್ಕಾಗಿ ಪ್ರಯತ್ನಿಸುತ್ತೇನೆ. […]
ಇತ್ತೀಚೆಗೆ ಆಕ್ಷನ್ ಪಾತ್ರಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವವರು ರಾಗಿಣಿ. ಮಾಲಾಶ್ರೀಯವರಿಗೇ ಪೈಪೋಟಿ ಕೊಡುವಂತೆ ಅಬ್ಬರಿಸುತ್ತಾ ಅಂಥಾ ಪಾತ್ರಗಳಿಗೇ ಫಿಕ್ಸಾಗಿದ್ದ ರಾಗಿಣಿಯೀಗ ಏಕಾಏಕಿ ಟೆರರಿಸ್ಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ! ಪಿ. ಸಿ ಶೇಖರ್ ನಿರ್ದೇಶನದ ಟೆರರಿಸ್ಟ್ ಎಂಬ ಚಿತ್ರದಲ್ಲಿ ರಾಗಿಣಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಬಾಂಬ್ ಬ್ಲಾಸ್ಟ್ ಆದ ಪ್ರಕರಣವೊಂದರ ಸುತ್ತ ನಡೆಯುವ ಕಥಾ ಹಂದರ ಹೊಂದಿರೋ ಈ ಚಿತ್ರದ ಫಸ್ಟ್ ಲುಕ್ ಕೂಡಾ ಇದೀಗ ರಿಲೀಸಾಗಿದೆ. ತಣ್ಣಗೆ ಚಿತ್ರೀಕರಣ ಮುಗಿಸಿಕೊಂಡು ಸಲೀಸಾಗಿಯೇ ಸದ್ದು ಮಾಡುತ್ತಿರೋ ಈ ಚಿತ್ರದಲ್ಲಿ ಎರಡು ಶೇಡುಗಳಿರೋ […]
ಇಂಗ್ಲಿಷ್ ಧಾರಾವಾಹಿಯೊಂದರಲ್ಲಿ ನಟಿಸುತ್ತಲೇ ವಿಶ್ವಾಧ್ಯಂತ ಖ್ಯಾತಳಾದ ಪ್ರಿಯಾಂಕಾ ಛೋಪ್ರಾ ಬಾಲಿವುಡ್ ಅನ್ನು ಮರೆತೇ ಬಿಟ್ಟಂತಿದ್ದಳು. ವರ್ಷಾಂತರಗಳ ಕಾಲ ವಿದೇಶದಲ್ಲಿಯೇ ಇದ್ದ ಪಿಗ್ಗಿ ತನ್ನ ಹುಡುಗ ನಿಕ್ನೊಂದಿಗೇ ಮರಳಿದ್ದಾಳೆ. ಈಕೆ ಹೋದಲ್ಲಿ ಬಂದಲ್ಲಿ ಮಾಧ್ಯಮಗಳು ನಾಕಾಬಂಧಿ ಹಾಕುತ್ತಲೇ ಏಕಾಏಕಿ ಎಂಗೇಜ್ಮೆಂಟ್ ಮಾಡಿಕೊಳ್ಳೋ ಮೂಲಕ ಪಿಗ್ಗಿ ಎಲ್ಲರಿಗೂ ಶಾಕ್ ನೀಡಿದ್ದಾಳೆ. ಆದರೆ, ಪ್ರಿಯಾಂಕಾ ಛೋಪ್ರಾ ಎಂಗೇಜ್ ಮೆಂಟ್ ಮಾಡಿಕೊಂಡಿರೋ ಸುದ್ದಿ ಮಾಧ್ಯಮಗಳಿಂದಷ್ಟೇ ತಿಳಿದುಕೊಂಡಿರೋ ಆಕೆಯ ಬಹುಕಾಲದ ಗೆಳತಿ ಕಂಗನಾ ರನೌತ್ ಎಲ್ಲರಿಗಿಂತಲೂ ಹೆಚ್ಚು ಶಾಕ್ ಆಗಿದ್ದಾಳೆ! ಕಂಗನಾ ರನೌತ್ ಸ್ವತಃ […]