ಅಂಬಿ ನಿಂಗೆ ವಯಸಾಯ್ತೋ ಚಿತ್ರವೀಗ ರಾಜ್ಯಾದ್ಯಂತ ಯಶಸ್ವೀ ಪ್ರದಶನ ಕಾಣುತ್ತಿದೆ. ಅಂಬರೀಶ್ ಅವರ ಸಹಜಾಭಿನಯ, ಇಡೀ ಚಿತ್ರವನ್ನು ರೀಮೇಕ್ ಎಂಬ ಭಾವವೇ ಕಾಡದಂತೆ ನಿರ್ದೇಶನ ಮಾಡಿರೋ ಗುರುದತ್ತ ಗಾಣಿಗರ ಕಸುಬುದಾರಿಕೆ… ಇವೆಲ್ಲವೂ ಸೇರಿ ಈ ಚಿತ್ರ ಹೌಸ್ಫುಲ್ ಪ್ರದರ್ಶನ ಕಾಣುವಂತೆ ಮಾಡಿದೆ. ಕನ್ನಡ ಚಿತ್ರರಂಗದ ತಾರೆಯರೂ ಕೂಡಾ ಅಂಬಿ ನಿಂಗೆ ವಯಸಾಯ್ತೋ ಚಿತ್ರವನ್ನು ವೀಕ್ಷಿಸಿ ಮುಕ್ತ ಕಂಠದಿಂದ ಮೆಚ್ಚಿಕೊಳ್ಳುತ್ತಿದ್ದಾರೆ. ಇದೀಗ ತಮ್ಮ ಚಿತ್ರಗಳ ಚಿತ್ರೀಕರಣಕ್ಕೊಂದು ಬ್ರೇಕ್ ಕೊಟ್ಟು ಈ ಚಿತ್ರವನ್ನು ನೋಡಲು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ […]
ಕನ್ನಡ ಧಾರಾವಾಹಿ ಜಗತ್ತಿನಲ್ಲಿ ವರ್ಷಾಂತರಗಳ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟಿದ್ದ ಧಾರಾವಾಹಿಗಳದ್ದೊಂದು ಪರ್ವವಿದೆ. ಅದರಲ್ಲಿ ದಾಖಲಾಗೋ ಎಲ್ಲ ದಾಖಲೆಗಳನ್ನೂ ಮಾಡಿರುವ ಇತ್ತೀಚಿನ ಧಾರಾವಾಹಿ ಪುಟ್ ಗೌರಿ ಮದುವೆ. ವಿನಾ ಕಾರಣ ಎಳೆದಾಡುತ್ತಿದ್ದಾರೆಂಬ ಅಸಹನೆ, ಮತ್ತೇನೋ ಕ್ರಿಯೇಟ್ ಮಾಡಿ ಕುತೂಹಲ ಕಾಯ್ದಿಟ್ಟುಕೊಂಡ ಜಾಣ್ಮೆ… ಇಂಥಾದ್ದರ ನಡುವೆ ಈ ಧಾರಾವಾಹಿ ಪೂರೈಸಿದ್ದ ಬರೋಬ್ಬರಿ ಐದು ವರ್ಷಗಳನ್ನು. ಪ್ರತೀ ದಿನ ರಾತ್ರಿ ಏಳು ಘಂಟೆಯಾಗುತ್ತಲೇ ಪುಟ್ ಗೌರಿಯನ್ನು ಕಣ್ತುಂಬಿಕೊಳ್ಳಲು ಟಿವಿ ಮುಂದೆ ಪ್ರತಿಷ್ಠಾಪಿತರಾಗುತ್ತಿದ್ದ ಲಕ್ಷಾಂತರ ಜನರಿಗೆ ಆ ಭಾಗ್ಯ ಸಿಗೋದು ಇನ್ನೆರಡು ವಾರ […]
ರಚಿತಾ ರಾಮ್ ಸದ್ಯ ನಿನಾಸಂ ಸತೀಶ್ ಜೊತೆಗಿನ ಅಯೋಗ್ಯ ಚಿತ್ರದ ಭರ್ಜರಿ ಗೆಲುವಿನ ಖುಷಿಯಲ್ಲಿದ್ದಾಳೆ. ಸದ್ಯ ಆಕೆಯ ಮುಂದಿರೋ ಅವಕಾಶಗಳನ್ನು ಗಮನಿಸಿದರೆ ರಚಿತಾ ಮತ್ತೊಂದು ಸುತ್ತಿಗೆ ಶೈನಪ್ ಆಗಿರೋ ಲಕ್ಷಣಗಳೂ ಕಾಣಿಸುತ್ತಿವೆ. ಎರಡ್ಮೂರು ದೊಡ್ಡ ಚಿತ್ರಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿರೋ ರಚಿತಾ ಈಗ ಸದ್ದು ಮಾಡುತ್ತಿರೋದು ಉಪ್ಪಿ ಅಭಿನಯದ ಐ ಲವ್ ಯೂ ಚಿತ್ರದ ಮೂಲಕ! ಅಯೋಗ್ಯ ಚಿತ್ರದಲ್ಲಿ ಪಕ್ಕಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದ ರಚಿತಾ ಇದುವರೆಗೂ ಸಂಪೂರ್ಣವಾಗಿ ಗ್ಲಾಮರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಿಲ್ಲ. ಆದರೆ ಐ ಲವ್ ಯೂ […]
ಕೆಲ ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಹಂಬಲ್ ಪೊಲಿಟೀಷಿಯನ್ ನೊಗ್ರಾಜ್ ಚಿತ್ರವನ್ನು ನೆನಪಿಟ್ಟುಕೊಂಡಿದ್ದೀರಾದರೆ ಡ್ಯಾನಿಶ್ ಸೇಠ್ ಎಂಬ ನಟ ಕೂಡಾ ನೆನಪಿರುತ್ತಾರೆ. ಅಷ್ಟಕ್ಕೂ ಆ ಚಿತ್ರ ಕ್ರಿಯೇಟ್ ಮಾಡಿದ್ದ ಹೈಪ್ ಏನು ಸಣ್ಣದಾ? ಅಂಥಾದ್ದೊಂದು ಭಯಾನಕ ಪಬ್ಲಿಸಿಟಿಯಿದ್ದರೂ ಕೂಡಾ ಹಂಬಲ್ ಪೊಲಿಟಿಷಿಯನ್ ನೊಗ್ರಾಜ ಥೇಟರುಗಳಲ್ಲಿ ಜನ ಇಲ್ಲದೆ ಮುಗ್ಗಲು ಹಿಡಿದಿದ್ದ! ಈ ಸೋಲಿನಾಚೆಗೂ ಕೂಡಾ ಕನ್ನಡದ ಪ್ರೇಕ್ಷಕರು ಡ್ಯಾನಿಶ್ ಸೇಠ್ ಬಗ್ಗೆ ಸಂಪೂರ್ಣವಾಗೇನೂ ನಂಬಿಕೆ ಕಳೆದುಕೊಂಡಿರಲಿಲ್ಲ. ಯಾಕೆಂದರೆ ಕ್ರಿಯೇಟಿವ್ ಆಗಿ ಆಲೋಚಿಸುವ ಮತ್ತು ಒಂದೊಳ್ಳೆ ಚಿತ್ರ ಮಾಡ ಬಹುದಾದ […]
ಕೇರಳದ ಕೊಯಂಬತ್ತೂರಿನಿಂದ ಶುರುವಾಗಿದ್ದ ಅಂಬಿಪುತ್ರನ ಅಮರ್ ಚಿತ್ರದ ಯಾತ್ರೆ ಕರ್ನಾಟಕದ ಭಾಗಗಳನ್ನು ಸುತ್ತಿ ಸಮಾಪ್ತಿಗೊಂಡಿದೆ. ಮೊದಲ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿಕೊಂಡಿರುವ ನಿರ್ದೇಶಕ ನಾಗಶೇಖರ್ ಇದೀಗ ಚಿತ್ರ ತಂಡದೊಂದಿಗೆ ಅಬ್ರಾಡ್ ನತ್ತ ಹಾರಲು ರೆಡಿಯಾಗಿದ್ದಾರೆ! ಮೊದಲ ಹಂತದ ಚಿತ್ರೀಕರಣವನ್ನು ಅಂದುಕೊಂಡಂತೆಯೇ ಮಾಡಿ ಮುಗಿಸಿಕೊಂಡಿರೋ ನಾಗಶೇಖರ್, ಎರಡನೇ ಹಂತಕ್ಕೆ ಪಕ್ಕಾ ತಯಾರಿ ಮಾಡಿಕೊಂಡಿದ್ದಾರೆ. ಆರಂಭದಲ್ಲಿ ಇಡೀ ಚಿತ್ರ ತಂಡ ಸ್ವಿಟ್ಜರ್ಲ್ಯಾಂಡಿಗೆ ತೆರಳಲಿದೆ. ಆ ಬಳಿಕ ಒಂದು ದಿನದ ವಿರಾಮದ ನಂತರ ನಿರಂತರವಾಗಿ ಇಪ್ಪತ್ತು ದಿನಗಳ ಕಾಲ ಅಲ್ಲಿಯೇ ಚಿತ್ರೀಕರಣ […]
ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರ ತಡವಾಗುತ್ತಿರೋದಕ್ಕೆ ಅಸಲೀ ಕಾರಣವನ್ನು ಸಿನಿಬಜ಼್ ನಿಮ್ಮ ಮುಂದೆ ತೆರೆದಿಟ್ಟಿತ್ತು. ಇದೀಗ ಧ್ರುವ ಅಮ್ಮ ಒಂದಷ್ಟು ಚೇತರಿಸಿಕೊಂಡಿದ್ದಾರೆ. ಇದೇ ಖುಷಿಯಲ್ಲಿ ಹೊಸಾ ಹುರುಪಿನೊಂದಿಗೆ ಧ್ರುವ ಪೊಗರು ಚಿತ್ರದ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ. ಈ ಸುದ್ದಿ ಕೇಳಿ ಖುಷಿಯಾಗಿರೋ ಅಭಿಮಾನಿಗಳಿಗೆ ಚಿತ್ರತಂಡ ಮತ್ತೊಂದು ಸರ್ಪ್ರೈಸನ್ನೂ ಕೊಟ್ಟಿದೆ! ಪೊಗರು ಚಿತ್ರದಲ್ಲಿನ ಧ್ರುವ ಸರ್ಜಾರ ಫಸ್ಟ್ ಲುಕ್ ಫೋಟೋವೊಂದು ಹೊರ ಬಿದ್ದಿದೆ. ಇದನ್ನು ಕಂಡು ಅಭಿಮಾನಿಗಳೆಲ್ಲ ನಿಜಕ್ಕೂ ಥ್ರಿಲ್ ಆಗಿದ್ದಾರೆ. ಈವರೆಗೆ ನಟಿಸಿರೋ ಚಿತ್ರಗಳಲ್ಲೆಲ್ಲ ಬೇರೆ ಬೇರೆ […]
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಪಘಾತದಲ್ಲಿ ಕೈ ಮುರಿದುಕೊಂಡು ಆಸ್ಪತ್ರೆಗೆ ದಾಖಲಾದ ಕ್ಷಣದಿಂದಲೇ ಅಭಿಮಾನಿಗಳೆಲ್ಲ ಕಂಗಾಲಾಗಿದ್ದರು. ಅದೆಷ್ಟೋ ಜನ ದರ್ಶನ್ ಬೇಗ ಗುಣಮುಖರಾಗಲೆಂದು ಹರಕೆ ಹೊತ್ತರು. ಚಿತ್ರರಂಗದ ಮಂದಿಯೆಲ್ಲ ಅವರು ಬೇಗನೆ ಮೇಲೆದ್ದು ಬರಲೆಂದು ಹಾರೈಸಿದರು. ಅಭಿಮಾನಿಗಳಂತೂ ತಮ್ಮ ನೆಚ್ಚಿನ ನಟ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಬೆಡ್ಡಿಂದ ಬೇಗನೆ ಮೇಲೆದ್ದು ಬರಲಿ ಅಂತ ಆಶಿಸಿದ್ದರು… ಅದೆಲ್ಲವೂ ಈಗ ಫಲ ನೀಡಿದೆ. ಯಾಕೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ! ದರ್ಶನ್ ಅವರು ಬೆಂಗಳೂರಿಗೆ ತೆರಳುತ್ತಿದ್ದ ಕಾರು ಮೈಸೂರು […]
ರಮ್ಯಾ ಈಗ ರಾಜಕಾರಣಿಯಾಗಿದ್ದಾಳೆ. ಆಕೆ ನಿಂತಲ್ಲಿ ಕುಂತಲ್ಲಿ ಬರೀ ವಿವಾದಗಳೇ. ಪೂರ್ವಾಶ್ರಮದಲ್ಲಿ ನಟಿಯಾಗಿದ್ದಳಲ್ಲಾ ರಮ್ಯಾ? ಆ ಕಾಲದಲ್ಲಿಯೂ ವಿವಾದಗಳಿಗೇನೂ ಬರವಿರಲಿಲ್ಲ. ಆ ಕಾಲದಲ್ಲಿ ಈಕೆ ಜಂಭದ ಕೋಳಿಯೆಂದೇ ಫೇಮಸ್ಸು. ಅಂಥಾ ಕಾಲದಲ್ಲಿಯೇ ರಮ್ಯಾ ಮಾಡಿಕೊಂಡಿದ್ದ ವಿವಾದವೊಂದರಲ್ಲೀಗ ಖುದ್ದು ಆಕೆಗೇ ತೀವ್ರ ಮುಖಭಂಗವಾಗಿದೆ! ವಿಜಯಪ್ರಸಾದ್ ನಿರ್ದೇಶನ ಮಾಡಿದ್ದ, ಜಗ್ಗೇಶ್ ನಾಯಕರಾಗಿದ್ದ ನೀರ್ ದೋಸೆ ಚಿತ್ರದ ವಿಚಾರವಾಗಿ ರಮ್ಯಾ ಮಾಡಿಕೊಂಡ ರಂಖಲುಗಳು ಒಂದೆರಡಲ್ಲ. ಅದೇ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ತನ್ನ ಒಪ್ಪಿಗೆ ಇಲ್ಲದೆ ಫೋಟೋ ತೆಗೆದರೆಂದು ರಮ್ಯಾ ಖ್ಯಾತೆ ತೆಗೆದಿದ್ದಳು. […]
ಒಂದು ಮೊಟ್ಟೆಯ ಕಥೆ ಚಿತ್ರದ ಮೂಲಕವೇ ಸಿಂಪಲ್ ಆದೊಂದು ಕಥೆ ಹೇಳಿದರೂ ಸ್ಟಾರ್ ಆಗಿ ಹೊರ ಹೊಮ್ಮಿರುವವರು ರಾಜ್ ಬಿ ಶೆಟ್ಟಿ. ನಟ, ನಿರ್ದೇಶಕ ಮತ್ತು ಸಂಭಾಷಣೆಕಾರರಾಗಿಯೂ ಗಮನ ಸೆಳೆದಿರೋ ರಾಜ್ ಶೆಟ್ಟಿ ಇದೀಗ ಸಂಪೂರ್ಣವಾಗಿ ನಟನೆಯತ್ತಲೇ ವಾಲಿದ್ದಾರೆ. ಅವರು ಒಂದಷ್ಟು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಅವುಗಳಲ್ಲಿ ಮಹಿರಾ ಚಿತ್ರ ಪ್ರಧಾನವಾದದ್ದು! ರಾಜ್ ಬಿ ಶೆಟ್ಟಿ ಇದೀಗ ಈ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗಗ ಮಹಿರಾದ ಫಸ್ಟ್ ಲುಕ್ ಕೂಡಾ ಬಿಡುಗಡೆಗೊಂಡಿದೆ. ಅದರಲ್ಲಿ ರಾಜ್ ಶೆಟ್ಟಿ ರಿವಾಲ್ವರ್ ಹಿಡಿದು […]
ರಮೇಶ್ ಅರವಿಂದ್ ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲದಲ್ಲಿಯೇ ನಿರ್ದೇಶನ ಮಾಡುತ್ತಿರೋ ಚಿತ್ರ ಬಟರ್ಫ್ಲೈ. ಈ ಚಿತ್ರದ ಮೂಲಕವೇ ಬಹು ಕಾಲದಿಂದ ಮರೆಯಾಗಿದ್ದ ಪಾರುಲ್ ಯಾದವ್ ಪಾರ್ವತಿಯಾಗಿ ಬಂದಿದ್ದಾರೆ. ಪ್ಯಾರ್ಗೆ ಆಗ್ಬಿಟ್ಟೈತೆ ಚಿತ್ರದ ಮೂಲಕವೇ ಕನ್ನಡ ಚಿತ್ರರಂಗಕ್ಕೆ ಬಂದು ಆ ನಂತರವೂ ಒಂದಷ್ಟು ಚಿತ್ರಗಳಲ್ಲಿ ನಟಿಸಿದ್ದ ಪಾರುಲ್ ಬಹು ಕಾಲದಿಂದ ಕಣ್ಮರೆಯಾಗಿದ್ದರು. ಆದರೀಗ ಆಕೆ ನಟಿ ಕಂ ನಿರ್ಮಾಪಕಿಯಾಗಿ ಮರಳಿ ಬಂದಿದ್ದಾರೆ. ಹಿಂದಿಯಲ್ಲಿ ಕಂಗನಾ ರನೌತ್ ಮುಖ್ಯಭೂಮಿಕೆಯಲ್ಲಿ ನಟಿಸಿ ಸೂಪರ್ ಹಿಟ್ ಆಗಿದ್ದ ಚಿತ್ರ ಕ್ವೀನ್. ಅದರ ರೀಮೇಕ್ […]