ಸಂಪತ್ ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಅದು ʻರವಿಕೆ ಪ್ರಸಂಗʼ. ಸಂತೋಷ್ ಕೊಂಡಕೇರಿ ನಿರ್ದೇಶನದ ಈ ಚಿತ್ರದ ಪೋಸ್ಟರು ಟೀಸರುಗಳೇ ಮಜಾ ಕೊಡುವಂತಿದೆ. ರವಿಕೆ ಮತ್ತು ಅದರ ಸುತ್ತ ಅರಳಿರುವ ಕತೆ ಇದರಲ್ಲಿದೆಯಂತೆ. ಗೀತಾ ಭಾರತಿ ಭಟ್ ಈ ಚಿತ್ರದ ಕೇಂದ್ರಬಿಂದು. ಸಂಪತ್ ಮೈತ್ರೇಯ ಇಲ್ಲಿ ಲೇಡೀಸ್ ಟೈಲರ್ ಪಾತ್ರದಲ್ಲಿ ನಟಿಸುವ ಮೂಲಕ ಕಾಮಿಡಿ ಕಲಾವಿದನೂ ಆಗಿದ್ದಾರೆ. ಪೂರ್ಣಪ್ರಮಾಣದಲ್ಲಿ ರಂಗಭೂಮಿಯಲ್ಲಿ ತೊಡಗಿಸಿಕೊಂಡವರು ʻಸಿನಿಮಾ ಸಂಪರ್ಕಕ್ಕೆ ಹೋಗಬಾರದುʼ ಎನ್ನುವ ಅಘೋಷಿತ ನಿಯಮವನ್ನು ಪಾಲಿಸುತ್ತಾರೆ. ಹಾಗೆ ನಿರ್ಧರಿಸಿದವರಲ್ಲಿ […]
ಕಳೆದೆರಡು ವರ್ಷಗಳಿಂದ ಯೂ ಟ್ಯೂಬ್ ಮೀಡಿಯಾ ಅಬ್ಬರಿಸುತ್ತಿದೆ. ಉತ್ತಮ ಕಂಟೆಂಟ್ ಕೊಡುತ್ತಿರುವವರು ನಿಜಕ್ಕೂ ಗೆಲುವು ಸಾಧಿಸಿದ್ದಾರೆ. ಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ ಅನ್ನೋದನ್ನು ಹಲವು ಯೂಟ್ಯೂಬರುಗಳು ತೋರಿಸಿದ್ದಾರೆ. ಆದರೆ ಇದೇ ಯೂ ಟ್ಯೂಬ್ ಹೆಸರಲ್ಲಿ ಹೆಸರು-ಹಣ ಮಾಡಲು ನಿಂತವರೂ ಸಾಕಷ್ಟು ಜನರಿದ್ದಾರೆ. ಹುಟ್ಟು ಸೋಂಬೇರಿಗಳಿಗೆ ಯೂ ಟ್ಯೂಬ್ ಒಂದು ನೆಪವಾಗಿದೆ. ನೂರಿನ್ನೂರು ಸಬ್ಸ್ಕ್ರೈಬರ್ಗಳೂ ಇಲ್ಲದ, ಬೆರಳೆಣಿಕೆಯ ವ್ಯೂಸ್ ಹೊಂದಿರುವ ಚಾನೆಲ್ಲುಗಳನ್ನು ತೆರೆದ ʻಸ್ವಯಂ ಘೋಷಿತ ಜರ್ನಲಿಸ್ಟುʼಗಳ ಸಂಖ್ಯೆ ಜಾಸ್ತಿಯಾಗಿದೆ. ಸಿನಿಮಾ ವಲಯದಲ್ಲಿ ಸುಶಾಂತ್ ಎನ್ನುವ ಹೇತ್ಲಾಂಡಿಯ ಕಾಟ […]
ಸಿದ್ದಾರ್ಥ ಸಿನಿಮಾದ ಮೂಲಕ ವಿನಯ್ ರಾಜ್ ಕುಮಾರ್ ಲಾಂಚ್ ಆದಾಗ ಪ್ರೇಕ್ಷಕರು ಮಾತ್ರವಲ್ಲದೆ, ಚಿತ್ರರಂಗದ ವಲಯದಲ್ಲೂ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಮೊದಲ ಸಿನಿಮಾನೇ ಅಂದುಕೊಂಡಂತೆ ಆಗಲಿಲ್ಲ. ಎರಡನೇದಾದರೂ ಕೈ ಹಿಡಿಯಬಹುದು ಅಂದುಕೊಂಡಿದ್ದರು. ರನ್ ಆಂಟನಿ ಎನ್ನುವ ಸಿನಿಮಾ ವಿನಯ್ ರಾಜ್ ಕುಮಾರ್ ವೃತ್ತಿ ಬದುಕಿಗೆ ಭಯಾನಕ ಏಟು ಕೊಟ್ಟುಬಿಟ್ಟಿತು. ದೊಡ್ಮನೆಯ ಬ್ಯಾನರಿನಲ್ಲಿ ಪಾರ್ವತಮ್ಮ ರಾಜ್ ಕುಮಾರ್ ನಿರ್ಮಾಣದ ಕಡೆಯ ಸಿನಿಮಾವೊಂದು ಈ ಮಟ್ಟದಲ್ಲಿರುತ್ತದೆ ಅಂತಾ ಯಾರೂ ಅಂದಾಜಿಸಿರಲಿಲ್ಲ. ಆ ಚಿತ್ರದ ನಿರ್ದೇಶಕ ರಘುಶಾಸ್ತ್ರಿಯ ಮಾತಿನಲ್ಲಿದ್ದ ನಿಯತ್ತು ಕೃತಿಯಲ್ಲಿರಲಿಲ್ಲ. […]
ಬದುಕು ನಿರ್ದಯಿ ಅನ್ನಿಸೋದೇ ಇಂಥಾ ಸಂದರ್ಭಗಳಲ್ಲಿ. ಕನ್ನಡ ಚಿತ್ರರಂಗದಲ್ಲಿ ಸರಿ ಸುಮಾರು 55 ಸಿನಿಮಾಗಳಿಗೆ ನಿರ್ದೇಶಕರಾಗಿ ಕೆಲಸ ಮಾಡಿರುವವರು ಬಿ.ಆರ್. ಕೇಶವ. ಸಿನಿಮಾ ಮಾಡೋದು ತುಂಬಾ ಕಷ್ಟದ ಕೆಲಸ ಅಂತ ಅಂದುಕೊಳ್ಳುವ ಕಾಲದಲ್ಲಿ ತಿಂಗಳಿಗೊಂದು ಚಿತ್ರವನ್ನು ಸುತ್ತಿ ಬಿಸಾಕುತ್ತಿದ್ದವರು ಇದೇ ಕೇಶವ್. ಆಗಿನ್ನೂ ಎಂಜಿನಿಯರಿಂಗ್ ಓದುತ್ತಿದ್ದಾಗಲೇ ಧಾರಾವಾಹಿಗಳ ನಿರ್ದೇಶನ ಶುರು ಮಾಡಿದ ಕೇಶವ್ ಅತೀ ಕಡಿಮೆ ವಯಸ್ಸಿಗೇ ಡೈರೆಕ್ಟರ್ ಕ್ಯಾಪ್ ತೊಟ್ಟವರು. ಈ ವರೆಗೆ ಇವರು ನಿರ್ದೇಶಿಸಿದ ಸಿನಿಮಾಗಳ ಸಂಖ್ಯೆ ಬರೋಬ್ಬರಿ 55. ಕೇಶವ್ ಸಿನಿಮಾ ಮಾಡೋ […]
ಸಿನಿಮಾದ ಅಫಿಷಿಯಲ್ ಟೀಸರ್ ಈಗ ಬಿಡುಗಡೆಯಾಗಿದೆ. ನಮ್ಮೂರಿನಲ್ಲಿ ನಡೆದ ಘಟನೆಯೊಂದರ ಸುತ್ತ ನಡೆದ ವಿಚಾರವನ್ನೇ ಕಾಡುವಂತೆ ಕಟ್ಟಿದ್ದಾರೆ ಅನ್ನೋದರ ಸೂಚನೆ ಸಿಕ್ಕಿದೆ. ಅತಿರಂಜಕ ವಿಚಾರಗಳನ್ನು ತುರುಕದೇ ಹೇಳಬೇಕಾದ್ದನ್ನು ನೇರಾನೇರ ನಿರೂಪಿಸಿದ್ದಾರೆ ಅನ್ನೋದು ಟೀಸರಿನಲ್ಲೇ ಗೊತ್ತಾಗುತ್ತಿದೆ. ನೋ ಡೌಟ್! ಕನ್ನಡ ಚಿತ್ರರಂಗ ಪಥ ಬದಲಿಸುತ್ತಿದೆ. ಒಂದಕ್ಕಿಂತಾ ಒಂದು ಭಿನ್ನ ಚಿತ್ರಗಳಿಲ್ಲಿ ಜೀವಪಡೆಯುತ್ತಿವೆ. ಸಿನಿಮಾ ಅಂದರೆ ಹೀಗೇ ಇರಬೇಕು ಅಂತಾ ಅಘೋಷಿತ ಸೂತ್ರ, ಸಿದ್ದ ಚೌಕಟ್ಟಲ್ಲಿ ಒದ್ದಾಡುತ್ತಿದ್ದ ಕಾಲವೊಂದಿತ್ತು. ಅಲ್ಲಲ್ಲಿ ಕೆಲವರು ಹೊಸ ತನವನ್ನು ಪರಿಚಯಿಸುತ್ತಿದ್ದರು. ಆದರೆ ಈಗ ಕನ್ನಡ […]
ಲವ್ ಸಬ್ಜೆಕ್ಟಿನ ಸಿನಿಮಾ ಮಾಡುವವರು ತೀರಾ ಫ್ರೆಶ್ ಎನಿಸುವ ಸಂಭಾಷಣೆ ಬೇಕೆನಿಸಿದರೆ, ಹೇಗಾದರೂ ಅಜ್ಜೀಪುರದ ಈ ರವಿಯನ್ನು ಒಪ್ಪಿಸಿ ಬರೆಸಿಕೊಳ್ಳಿ. ಇವರು ರವಿ ಅಜ್ಜೀಪುರ. ಮಾಧ್ಯಮ ವಲಯದಲ್ಲಿವರು ಸದಾ ಪ್ರವಹಿಸುವ ಅಚ್ಚರಿ. ಪ್ರಿಂಟ್ ಮೀಡಿಯಾದಲ್ಲಿ ಹೆಸರು ಮಾಡುತ್ತಿದ್ದಾಗಲೇ ಸಡನ್ನಾಗಿ ಟೀವಿ ಮಾಧ್ಯಮದತ್ತ ಮುಖ ಮಾಡಿದವರು. ಅಲ್ಲಿಂದ ಮತ್ತೆ ಪತ್ರಿಕೆಯ ಕಡೆ ‘ಮನಸು’ ಕೊಟ್ಟವರು. ಪತ್ರಕರ್ತರಾಗಿದ್ದುಕೊಂಡೇ ವಿನ್ಯಾಸ ಕಲಾವಿದರಾಗಿ, ನೂರಾರು ಪುಸ್ತಕಗಳ ಮುಖಪುಟಗಳಿಗೆ ಬಣ್ಣ ತುಂಬಿದವರು. ಒಂದು ಪತ್ರಿಕೆಯ ಕಂಟೆಂಟ್ ಹೇಗಿರಬೇಕು ಅನ್ನೋದರ ಜೊತೆಗೆ ಅದರ ಪ್ರೆಸೆಂಟೇಷನ್ ಕೂಡಾ […]
ಸಚಿನ್ ಧನಪಾಲ್ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಿರುವ ಚಿತ್ರ ‘ಚಾಂಪಿಯನ್’ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದೊಂದು ಕ್ರೀಡಾ ಚಿತ್ರವಾಗಿದ್ದು, ಅಥ್ಲೀಟ್ ಒಬ್ಬನ ಜೀವನದ ಕುರಿತಾಗಿ ಈ ಚಿತ್ರ ಸಾಗುತ್ತದಂತೆ. ಈ ಚಿತ್ರದಲ್ಲಿ ಅಥ್ಲೀಟ್ ಆಗಿ ಸಚಿನ್ ನಟಿಸಿದ್ದಾರೆ. ಚಿತ್ರದಲ್ಲಿ ಹೀರೋ ಆಗಿ ನಟಿಸಬೇಕು ಎಂದು ಎಲ್ಲರಿಗೂ ಆಸೆ ಇರುತ್ತದೆ. ಸಚಿನ್ಗೆ ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆ ಇದ್ದರೂ, ಅದಕ್ಕಿಂತ ಹೆಚ್ಚಾಗಿ ಆರ್ಮಿಗೆ ಸೇರಿ ದೇಶಸೇವೆ ಮಾಡಬೇಕು ಎಂದು ಮನಸ್ಸಿತ್ತಂತೆ. ಅದು ಸಾಧ್ಯವಾಗದಿದ್ದರಿಂದ, ಅವರು ಈ ಕಡೆ […]
“ನನಗೇನಾದರೂ ಹೆಚ್ಚು ದುಡ್ಡು ಸಿಕ್ಕರೆ, ನಿನ್ನನ್ನು ಹೀರೋ ಮಾಡಿ ಒಂದು ಚಿತ್ರ ಮಾಡುತ್ತೇನೆ … ಎಂದು ಹೇಳಿದ್ದರಂತೆ ಶಿವಾನಂದ್ ಎಸ್. ನೀಲಣ್ಣನವರ್. ಅದರಂತೆ ಅವರು ನಡೆದುಕೊಂಡಿದ್ದು, ತಮ್ಮ ಸ್ನೇಹಿತನನ್ನು ಹೀರೋ ಆಗಿ ಮಾಡಿ ಒಂದು ಚಿತ್ರ ಮಾಡಿ ಮುಗಿಸಿದ್ದಾರೆ. ಈಗ ಆ ಚಿತ್ರ ಅಕ್ಟೋಬರ್ 14ರಂದು ರಾಜ್ಯಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಚಾಂಪಿಯನ್ ಕೋವಿಡ್ಗೂ ಮೊದಲೇ ಪ್ರಾರಂಭವಾದ ಚಿತ್ರ. ದಿವಂಗತ ನಿರ್ದೇಶಕ ಡಿ. ರಾಜೇಂದ್ರ ಬಾಬು ಅವರ ಮೆಚ್ಚಿನ ಅಸೋಸಿಯೇಟ್ ಆಗಿದ್ದ ಶಾಹುರಾಜ್ ಶಿಂಧೆ ನಿರ್ದೇಶನದ ಚಿತ್ರ. ನಾಲ್ಕು ವರ್ಷಗಳ ಹಿಂದೆ ಪ್ರಾರಂಭವಾದ ಈ ಚಿತ್ರದ ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿರುವಾಗ […]
ಜೈದ್ ಖಾನ್ ಇತ್ತೀಚೆಗೆ ಹೆಚ್ಚು ಪ್ರಚಾರದಲ್ಲಿರುವ ಹೆಸರು. ಅಪ್ಪ ಕರ್ನಾಟಕ ರಾಜ್ಯ ರಾಜಕಾರಣದ ವರ್ಣರಂಜಿತ ವ್ಯಕ್ತಿ. ಕೂತರೂ ನಿಂತರೂ ಸುದ್ದಿಯಾಗುವ ಉದ್ಯಮಿ. ಇಂಥರವ ಮಗ ಸಿನಿಮಾರಂಗಕ್ಕೆ ಬಂದಾಗ ಜನ ತಲೆಗೊಂದು ಮಾತಾಡಿದ್ದರು. ಯಾವಾಗ ಜೈದ್ ನಟನೆಯ ಮೊದಲ ಸಿನಿಮಾ ʻಬನಾರಸ್ʼ ಚಿತ್ರದ ʻಮಾಯ ಗಂಗೆʼ ಹಾಡು ಲೋಕಾರ್ಪಣೆಯಾಯಿತೋ? ಆಗ ಅಂದವರ ಅಂಡು ಸದ್ದು ನಿಲ್ಲಿಸಿತು. ʻಹುಡುಗ ಸಿನಿಮಾರಂಗದಲ್ಲಿ ಭದ್ರವಾಗಿ ನಿಲ್ಲೋದು ಗ್ಯಾರೆಂಟಿʼ ಅಂತಾ ಒಳಗೊಳಗೇ ಮಾತಾಡಿಕೊಂಡರು. ಅಪ್ಪನ ರಾಜಕಾರಣದ ವರ್ಚಸ್ಸು, ವ್ಯವಹಾರ, ಶ್ರೀಮಂತಿಕೆ – ಇವೆಲ್ಲದರ ಹೊರತಾಗಿ […]